ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಟ್ವೀಟ್ ಮೂಲಕ ನಟ ಉಪೇಂದ್ರ ಆಕ್ರೋಶ!

ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಕಿಡಿಕಾರಿದ ಉಪೇಂದ್ರ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Last Updated : Jul 18, 2019, 10:21 AM IST
ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಟ್ವೀಟ್ ಮೂಲಕ ನಟ ಉಪೇಂದ್ರ ಆಕ್ರೋಶ! title=

ಬೆಂಗಳೂರು: ಪ್ರಸ್ತುತ ರಾಜ್ಯ ರಾಜಕೀಯ ಬಿಕ್ಕಟ್ಟಿನ ಕುರಿತು ಅಕ್ರೋಶ ವ್ಯಕ್ತಪಡಿಸಿರುವ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನಟ ಉಪೇಂದ್ರ, "ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ, ಆನಂತರ ನಾವು ಮೂಕ ಪ್ರೇಕ್ಷಕರು !!!!  ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು. ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ದಿ ಹಾಗೂ ಕಾರ್ಯಕರ್ತರಾಗಬೇಕು !! ( ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು)" ಎಂದು ಬರೆದಿದ್ದಾರೆ.

ಒಂದೆಡೆ ರಾಜ್ಯ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಉಪೇಂದ್ರ, ಇದೇ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲೂ ಉತ್ತಮ ಪ್ರಜಾಕೀಯ ಪಕ್ಷದ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.

Trending News