Breaking News: ಕೊರೊನಾ ವ್ಯಾಕ್ಸಿನ್ ಪಡೆದ 12 ವಿದ್ಯಾರ್ಥಿನಿಯರು ಅಸ್ವಸ್ಥ

Corona Vaccine Side Effect - ಕೊರೊನಾ ವ್ಯಾಕ್ಸಿನ್ ಪಡೆದು 12 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಇವರೆಲ್ಲರೂ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ಜನತಾನಗರ ಬಡಾವಣೆಯ ವಸತಿ ಶಾಲೆಯ ವಿದ್ಯಾರ್ಥಿನಿಯರಾಗಿದ್ದಾರೆ.  

Written by - Zee Kannada News Desk | Last Updated : Mar 23, 2022, 06:08 PM IST
  • ಕೊರೊನಾ ವ್ಯಾಕ್ಸಿನ್ ಪಡೆದು ವಿದ್ಯಾರ್ಥಿನಿಯರು ಅಸ್ವಸ್ಥ
  • ಹುಮನಾಬಾದ್ ತಾಲೂಕಿನ ಹುಡುಗಿ ಗ್ರಾಮದ ವಸತಿ ಶಾಲೆ
  • ಸದಿ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ
Breaking News: ಕೊರೊನಾ ವ್ಯಾಕ್ಸಿನ್ ಪಡೆದ 12 ವಿದ್ಯಾರ್ಥಿನಿಯರು ಅಸ್ವಸ್ಥ title=
Corona Vaccine Side Effect

12 Girl Students Sick - ಕೊರೊನಾ ವ್ಯಾಕ್ಸಿನ್ (Corona Vaccine) ಪಡೆದು 12 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಬೀದರ್ (Bidar) ಜಿಲ್ಲೆಯಲ್ಲಿ ನಡೆದಿದೆ. ಇವರೆಲ್ಲರೂ ಜಿಲ್ಲೆಯ ಹುಮನಾಬಾದ್ (Humanabad) ತಾಲ್ಲೂಕಿನ ಹುಡಗಿ ಗ್ರಾಮದ (Hudugi Village) ಜನತಾನಗರ ಬಡಾವಣೆಯ ವಸತಿ ಶಾಲೆಯ ವಿದ್ಯಾರ್ಥಿನೀಯರಾಗಿದ್ದಾರೆ.

ಇಲ್ಲಿನ ಕಸ್ತೂರ್ ಬಾಯಿ ವಸತಿ ಶಾಲೆಯಲ್ಲಿ (Kastur Bai Residential School) ಈ ವಿದ್ಯಾರ್ಥಿನಿಯರು ಓದುತ್ತಿದ್ದು, ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ವಿದ್ಯಾರ್ಥಿನಿಯರಲ್ಲಿ ವಾಂತಿ, ತಲೆನೋವು ಕಾಣಿಸಿಕೊಂಡಿದೆ. ಸದ್ಯ ಈ ವಿದ್ಯಾರ್ಥಿನಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪ್ರಸ್ತುತ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕೆಲ ಕಾಲ ಪೋಷಕರಿಗೆ ಆತಂಕವಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ-Seva Das: ಏಪ್ರಿಲ್ ಒಂದರಂದು ಬಂಜಾರ ಭಾಷೆಯ "ಸೇವಾ ದಾಸ್" ಸಿನಿಮಾ ರಿಲೀಸ್‌

ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ
ಆಸ್ಪತ್ರೆಯ (Athani Government Hospital) ವೈದ್ಯರ ಮೇಲೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆ ಅಥಣಿಯ (Athani) ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು (Lokayukta Visit) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ದೂರಿನ ಹಿನ್ನೆಲೆ ಬೆಳಗಾವಿಯ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ-DogMan ರಾಮ್ ಶ್ವಾನಪ್ರೀತಿಗೆ ಪುನೀತ್ ಕೂಡಾ ಶಹಬ್ಬಾಸ್ ಅಂದಿದ್ರು..!

ಲೋಕಾಯುಕ್ತ ಎಸ್. ಪಿ. ಯಶೋಧಾ ವಂಟಗಡಿ ನೇತೃತ್ವದ ತಂಡ ಈ ಭೇಟಿ ನೀಡಿ ಆಸ್ಪತ್ರೆಯಲ್ಲಿ ಕಾಗದಪತ್ರಗಳ ಪರಿಶೀಲನೆ ಮಾಡಿ ಬೆಳಗಾವಿಗೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News