ನಟಾಷಾ ದಲಾಲ್ ರನ್ನು ಮದುವೆಯಾಗುತ್ತೇನೆ ಎಂದ ವರುಣ್ ಧವನ್ !

ಬಾಲಿವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ಜೋಡಿಗಳು ಮದುವೆಯಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಅಂತಹ ಜೋಡಿಗಳಲ್ಲಿ ಈಗ ಪ್ರಮುಖವಾಗಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.ಈಗಾಗಲೇ ಈ ಜೋಡಿಯ ಮದುವೆ ಮಹೂರ್ತವು ಫಿಕ್ಸ್ ಆಗಿದೆ.

Last Updated : Nov 12, 2018, 09:15 PM IST
ನಟಾಷಾ ದಲಾಲ್ ರನ್ನು ಮದುವೆಯಾಗುತ್ತೇನೆ ಎಂದ ವರುಣ್ ಧವನ್ ! title=

ನವದೆಹಲಿ: ಬಾಲಿವುಡ್ ನಲ್ಲಿ ಇತ್ತೀಚಿಗೆ ಹೊಸ ಹೊಸ ಜೋಡಿಗಳು ಮದುವೆಯಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಅಂತಹ ಜೋಡಿಗಳಲ್ಲಿ ಈಗ ಪ್ರಮುಖವಾಗಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.ಈಗಾಗಲೇ ಈ ಜೋಡಿಯ ಮದುವೆ ಮಹೂರ್ತವು ಫಿಕ್ಸ್ ಆಗಿದೆ.

ಆದರೆ ಈಗ ನಾವು ನಿಮಗೆ ಹೇಳಹೊರಟಿರುವುದು ಈ ಜೋಡಿಗಳ ಬಗ್ಗೆ ಅಲ್ಲ ಬದಲಾಗಿ ವರುಣ್ ಧವನ್ ಮತ್ತು ನಟಾಷಾ ದಲಾಲ್ ಜೋಡಿಯ ಬಗ್ಗೆ. ಹೌದು ಇತ್ತೀಚಿಗೆ  ಕರಣ್ ಜೋಹರವರ ಜನಪ್ರಿಯ ಷೋ 'ಕಾಫಿ ವಿಥ್ ಕರಣ್' ಸೀಸನ್ 6 ಸಂಚಿಕೆಯಲ್ಲಿ ಕತ್ರಿನಾ ಕೈಫ್ ಮತ್ತು ವರುಣ್ ಧವನ್ ಗೆ ಆಹ್ವಾನ ನೀಡಿದ್ದರು. ಈ ಶೋವೊಂದರಲ್ಲಿ ಕರಣ್ ಜೋಹರ್ ನಟಾಷಾ ದಲಾಲ್ ಅವರ ಜೊತೆಗಿನ ವರುಣ್ ಧವನ್ ಫೋಟೋ ಕುರಿತಾಗಿ ಏಕಾಏಕಿ ಹ್ಯಾಪಿ ಫ್ರೆಂಡ್ಸ್ ಎಂದು ಹೇಳಿದ್ದಾರೆ. ಇದಕ್ಕೆ ತಕ್ಷಣ ಮಧ್ಯ ಪ್ರವೇಶಿಸಿದ ವರುಣ್ ಧವನ್ ತಾವು ಹ್ಯಾಪಿ ಕಪಲ್ ಎಂದು ಹೇಳಿ ಎದುರಿಗಿದ್ದ ಕರಣ್ ಜೋಹರ್ ಅವರನ್ನೇ ಅಚ್ಚರಿಗೊಳಿಸಿದ್ದಾರೆ. 

ನಂತರ ಮುಂದುವರೆದು ತಾವು ನಟಾಷಾ ಅವರನ್ನು ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿದ್ದಲ್ಲದೆ ಮದುವೆ ಕೂಡ ಆಗುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.ಅಲ್ಲದೆ ತಾವು ಇತರೆ ಯಾವುದೇ ಸೆಲೆಬ್ರಿಟಿ ಜೋಡಿಗಳಿಗೆ ಸ್ಪರ್ಧೆ ನೀಡುತ್ತಿಲ್ಲ ಎಂದು ವರುಣ್ ತಿಳಿಸಿದ್ದಾರೆ.
 

Trending News