ಬೆಂಗಳೂರು: ಕೈಗಾರಿಕಾ ಹಬ್ ನಿರ್ಮಾಣ ಸ್ವಾಗತಾರ್ಹ. ಈ ಕೈಗಾರಿಕಾ ಹಬ್ ಯಶಸ್ವಿಯಾದರೆ, ಕೇವಲ ತುಮಕೂರು ಅಲ್ಲದೆ ಚಿತ್ರದುರ್ಗ, ಶಿವಮೊಗ್ಗ ದಾವಣಗೆರೆ ನಾಲ್ಕೈದು ಜಿಲ್ಲೆಗಳ ಜನರಿಗೆ ಸದುಪಯೋಗವಾಗಲಿದೆ ಎಂದು ಹೇಳಿದರು.
ತುಮಕೂರಿನ ವಸಂತನರಸಾಪುರದಲ್ಲಿ ನಿರ್ಮಾಣವಾಗುತ್ತಿರುವ ಕೈಗಾರಿಕ ವಲಯ ಇನ್ನಷ್ಟು ಯಶಸ್ವಿಯಾಗಲು ಬೆಂಗಳೂರಿನಿಂದ ತುಮಕೂರಿಗೆ 'ಶೀಘ್ರ ಸಂಪರ್ಕ ಕಲ್ಪಿಸುವ ಸಾರಿಗೆ ವ್ಯವಸ್ಥೆ' ಮಾಡುವ ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ತುಮಕೂರಿನ ವಸಂತನರಸಾಪುರ ಕೈಗಾರಿಕಾ ನಿರ್ಮಾಣ ಸಂಬಂಧ ಕೇಂದ್ರ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಕೈಗಾರಿಕಾ ಹಬ್ ನಿರ್ಮಾಣವಾಗುತ್ತಿರುವುದು ಖುಷಿ ನೀಡಿದೆ. ತುಮಕೂರಿನಿಂದ ಬೆಂಗಳೂರಿಗೆ ದಿನಕ್ಕೆ ಸುಮಾರು 30 ಸಾವಿರ ಜನ ಸಂಚರಿಸುತ್ತಾರೆ. ಈ ತುಮಕೂರಿನಲ್ಲೇ ಕೈಗಾರಿಕಾ ಹಬ್ ನಿರ್ಮಾಣವಾಗುತ್ತಿರುವುದರಿಂದ ಬೆಂಗಳೂರು -ತುಮಕೂರು ಮಾರ್ಗಕ್ಕೆ ಮೆಟ್ರೋ ಅಥವಾ ಎಲೆಕ್ಟ್ರಿಕ್ ರೈಲು ವ್ಯವಸ್ಥೆ ನಿರ್ಮಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಅಥವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಪರ್ಕ ಕಲ್ಪಿಸಿದರೆ ಇನ್ನೂ ಉತ್ತಮ.ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಇನ್ನಷ್ಟು ವೃದ್ಧಿಸಲಿದೆ ಎಂದು ಸಲಹೆ ನೀಡಿದರು.
ಈ ಸಾಲಿನ ಬಜೆಟ್ನಲ್ಲಿಯೂ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದ ಪರಂ, ಕೈಗಾರಿಕಾ ನಿರ್ಮಾಣದಿಂದ ನ್ಯಾನೋ ತಂತ್ರಜ್ಞಾನ, ರೋಬೋಟಿಕ್, ಸಿಡಿ ಪ್ರಿಂಡಿಂಗ್, ವಿಜ್ಞಾನ, ಮಿಲಿಟರಿ, ಏರೋಸ್ಪೇಸ್ ತಂತ್ರಜ್ಞಾನದಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಕರ್ನಾಟಕ ಗುಣಮಟ್ಟದ ಶಿಕ್ಷಣ ಹಾಗೂ ಕೈಗಾರಿಕೆಯಲ್ಲಿ ಐದು ವರ್ಷದ ಹಿಂದೆಯೇ ಮುಂಚೂಣಿಯಲ್ಲಿದೆ. ಗುಣಮಟ್ಟದ ವೈದ್ಯರು ಹಾಗೂ ಇಂಜಿನಿಯರ್ಗಳನ್ನು ನೀಡುತ್ತಿದ್ದೇವೆ. ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡಿದರೆ ರಾಜ್ಯದ ಆರ್ಥಿಕತೆಯೂ ಬೆಳೆಯುತ್ತದೆ ಎಂದರು.
Vasanthanarasapura is all set to be the next big industrial hub in Karnataka. It was my honour and privilege to be a part of the agreement signing to develop Tumkuru industrial node as a part of the Chennai-Bengaluru Industrial Corridor with Minister @thekjgeorge pic.twitter.com/rdTaYbVNvS
— Dr. G Parameshwara (@DrParameshwara) July 6, 2018