ಕಾಂಗ್ರೆಸ್‌ ಹಲವು ದಶಕಗಳಲ್ಲಿ ಸಾಧಿಸಲಾಗದ್ದನ್ನು ನಾವು 7 ವರ್ಷಗಳಲ್ಲಿ ಮಾಡಿದ್ದೇವೆ: ಬಿಜೆಪಿ

ಅಧಿಕಾರದಲ್ಲಿದ್ದ ಹಲವು ದಶಕಗಳನ್ನು ನಕಲಿ ಗಾಂಧಿ ಪರಿವಾರದ ಖಜಾನೆ ತುಂಬಿಸುವ ಕಾರ್ಯದಲ್ಲಿ ಕಳೆದಿದ್ದು ದುರಂತ’ ಅಂತಾ ಬಿಜೆಪಿ ಟೀಕಿಸಿದೆ.

Written by - Zee Kannada News Desk | Last Updated : Dec 25, 2021, 02:39 PM IST
  • ಕಾಂಗ್ರೆಸ್‌ ಪಕ್ಷಕ್ಕೆ ಹಲವು ದಶಕಗಳಲ್ಲಿ ಸಾಧಿಸಲಾಗದಿದ್ದದ್ದನ್ನು ನಾವು ಕೇವಲ 7 ವರ್ಷಗಳಲ್ಲಿ ಮಾಡಿದ್ದೇವೆ
  • ಮೋದಿ ಸರ್ಕಾರದ ಅವಧಿಯಲ್ಲಿ ವಿಶ್ವದ 2ನೇ ಅತಿದೊಡ್ಡ ಮೊಬೈಲ್‌ ಉತ್ಪಾದಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ
  • ಅಧಿಕಾರದಲ್ಲಿದ್ದ ಹಲವು ದಶಕಗಳನ್ನು ನಕಲಿ ಗಾಂಧಿ ಪರಿವಾರದ ಖಜಾನೆ ತುಂಬಿಸುವ ಕಾರ್ಯದಲ್ಲಿ ಕಳೆದಿದ್ದು ದುರಂತ
ಕಾಂಗ್ರೆಸ್‌ ಹಲವು ದಶಕಗಳಲ್ಲಿ ಸಾಧಿಸಲಾಗದ್ದನ್ನು ನಾವು 7 ವರ್ಷಗಳಲ್ಲಿ ಮಾಡಿದ್ದೇವೆ: ಬಿಜೆಪಿ title=
ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ

ಬೆಂಗಳೂರು: ಕಾಂಗ್ರೆಸ್‌ ಪಕ್ಷಕ್ಕೆ ಹಲವು ದಶಕಗಳಲ್ಲಿ ಸಾಧಿಸಲಾಗದಿದ್ದದ್ದನ್ನು ನಾವು ಕೇವಲ 7 ವರ್ಷಗಳಲ್ಲಿ ಮಾಡಿದ್ದೇವೆ ಎಂದು ಬಿಜೆಪಿ ಟೀಕಿಸಿದೆ. #GoodGovernanceDay ಹ್ಯಾಶ್ ಟ್ಯಾಗ್ ಬಳಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ(BJP Government)ದ ಸಾಧನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ‘2014ರ ಮೊದಲು ದೇಶದ ಎಕ್ಸ್‌ಪ್ರೆಸ್‌ ಹೆದ್ದಾರಿ 866 ಕಿಮೀ ಇತ್ತು, ಬಳಿಕ ಅದು 1166 ಕಿಮೀ ಆಗಿದೆ. ಇದು ಯುಪಿಎ ಆಡಳಿತ ಮತ್ತು ಮೋದಿ ಆಡಳಿತದ ನಡುವಿನ ವ್ಯತ್ಯಾಸ’ವೆಂದು ಹೇಳಿದೆ.

‘ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ದೇಶದ ರಾಷ್ಟ್ರೀಯ ಹೆದ್ದಾರಿ(National Highways)ನಿರ್ಮಾಣದಲ್ಲಿ ಅದ್ಭುತ ಸಾಧನೆ ತೋರಿದೆ. 2014ರವರೆಗೆ 91,287 ಕೀಮಿ ಇತ್ತು, 2021ಕ್ಕೆ ಇದು 1,40,937 ಕಿಮೀ ಆಗಿದೆ. ಮೋದಿ ಸರ್ಕಾರ ಬರುವ ಮೊದಲು ಮತ್ತು ಮೋದಿ ಸರ್ಕಾರ ಬಂದ ನಂತರ ನಿರ್ಮಾಣವಾದ ರಾಷ್ಟ್ರೀಯ ಹೆದ್ದಾರಿಯ ಅಂಕಿ ಅಂಶವಿದು. ಕೇವಲ 7 ವರ್ಷಗಳಲ್ಲಿ ಶೇ.54ರಷ್ಟು ಹೆಚ್ಚಳವಾಗಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Anti Conversion Law: "ಬಿಜೆಪಿ ಮತ್ತು ಜೆಡಿಎಸ್ ನವರು ತಮ್ಮ ಪಾಪವನ್ನು ನಮ್ಮ ತಲೆಗೆ ಕಟ್ಟುತ್ತಿದ್ದಾರೆ"

‘ಹಲವು ದಶಕಗಳಿಂದ ಅಪೂರ್ಣವಾಗಿದ್ದ ಹಲವು ಕಾಮಗಾರಿಗಳನ್ನು ಮೋದಿ(Narendra Modi)ಸರ್ಕಾರ ಕೇವಲ 7 ವರ್ಷದಲ್ಲಿ ಪೂರ್ಣಗೊಳಿಸಿದೆ. ಈ ಪೈಕಿ ಸರಯೂ ನಹರ್‌ ರಾಷ್ಟ್ರೀಯ ಯೋಜನೆ 40 ವರ್ಷದ ಬಳಿಕ ಪೂರ್ಣ. ಸರ್ದಾರ್ ಸರೋವರ ಅಣೆಕಟ್ಟು  56 ವರ್ಷದ ಬಳಿಕ ಪೂರ್ಣ ಮತ್ತು ಭಾರತ ಮತ್ತು ಬಾಂಗ್ಲಾ ನಡುವಿನ ಭೂಮಿ ಹಂಚಿಕೆ 70 ವರ್ಷದ ಬಳಿಕ ಪೂರ್ಣಗೊಂಡಿದೆ. ಕೊಲ್ಲಂ ಬೈಪಾಸ್‌ ರಸ್ತೆ 47 ವರ್ಷಗಳ ಬಳಿಕ ಪೂರ್ಣ. ಒನ್‌ ರ್ಯಾಂಕ್‌ ಒನ್‌ ಪೆನ್ಶನ್‌ 41 ವರ್ಷಗಳ ಬಳಿಕ ಪೂರ್ಣ. ಬೋಗಿಬಿಲ್‌ ಸೇತುವೆ 21 ವರ್ಷಗಳ ಬಳಿಕ ಪೂರ್ಣ’ಗೊಂಡಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಮೋದಿ ಸರ್ಕಾರದ ಅವಧಿಯಲ್ಲಿ ವಿಶ್ವದ 2ನೇ ಅತಿದೊಡ್ಡ ಮೊಬೈಲ್‌ ಉತ್ಪಾದಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. 2014ರಲ್ಲಿ ಕೇವಲ 2 ಮೊಬೈಲ್‌ ತಯಾರಿಕಾ ಘಟಕಗಳಿದ್ದ ಭಾರತದಲ್ಲಿ ಇಂದು 200ಕ್ಕೂ ಅಧಿಕ ಘಟಕಗಳಿವೆ. 2014-15 ರಲ್ಲಿ 6 ಕೋಟಿ ಮೊಬೈಲ್‌ ಭಾರತದಲ್ಲಿ ಉತ್ಪಾದನೆಯಾಗಿದ್ದರೆ, ಇಂದು 30 ಕೋಟಿ ಉತ್ಪಾದನೆಯಾಗುತ್ತಿದೆ’ ಎಂದು ಹೇಳಿದೆ.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಆರ್.ಎಸ್.ಎಸ್ ಮತ್ತು ಬಿಜೆಪಿ ಸರ್ಕಾರದ ಕೂಸು- ಸಿದ್ಧರಾಮಯ್ಯ

ದೇಶಕ್ಕೆ ಕಾಂಗ್ರೆಸ್‌(Congress) ನೀಡಿರುವ ಕೊಡುಗೆಯನ್ನು ಪ್ರಶ್ನಿಸಿರುವ ಬಿಜೆಪಿ, 2014‌ವರೆಗೆ 15,000 ಕೀಮಿ ಇದ್ದ ನೈಸರ್ಗಿಕ ಅನಿಲ ಪೈಪ್‌ಲೈನ್ 2014 -21ವರೆಗೆ – 16,000 ಕೀಮಿ ಆಗಿದೆ. 2014‌ವರೆಗೆ 250 ಕೀಮಿ ಇದ್ದ ಮೆಟ್ರೋ ಹಳಿ 2014 -21ವರೆಗೆ 700 ಕೀಮಿ ಆಗಿದೆ ಹಾಗೂ 2014‌ವರೆಗೆ ಕೇವಲ 2 ಮೆಗಾ ಫುಡ್ ಪಾರ್ಕ್ ಇದ್ದದ್ದು 2014 -21ವರೆಗೆ 19 ಆಗಿವೆ. ಅಧಿಕಾರದಲ್ಲಿದ್ದ ಹಲವು ದಶಕಗಳನ್ನು ನಕಲಿ ಗಾಂಧಿ ಪರಿವಾರದ ಖಜಾನೆ ತುಂಬಿಸುವ ಕಾರ್ಯದಲ್ಲಿ ಕಳೆದಿದ್ದು ದುರಂತ’ ಅಂತಾ ಟೀಕಿಸಿರುವ ಬಿಜೆಪಿ ಕಾಂಗ್ರೆಸ್‌ ಆಡಳಿತ ನಡೆಸಿದ್ದೇ, ಅಥವಾ ಪರಿವಾರದ ಜೋಳಿಗೆ ತುಂಬಿಸಿದ್ದೇ? ಅಂತಾ ಪ್ರಶ್ನಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News