Vastu Shastra Green Colour Benefits: ಮನೆಯಲ್ಲಿ ಈ ಬಣ್ಣದ ಗಡಿಯಾರವಿರಲಿ, ಬದಲಾವಣೆ ನಿಮಗೆ ತಿಳಿಯಲಿದೆ

Vastu shastra Green Colour Benefits: ಯಾವುದೇ ವ್ಯಕ್ತಿಯ ಜೀವನದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿರುತ್ತದೆ.  ಬಣ್ಣಗಳು ವ್ಯಕ್ತಿಯ ಜೀವನವನ್ನು ವರ್ಣಮಯವಾಗಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತವೆ.  

Written by - Ranjitha R K | Last Updated : Jul 5, 2021, 07:38 PM IST
  • ವ್ಯಕ್ತಿಯ ಜೀವನದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿರುತ್ತದೆ.
  • ವಾಸ್ತು ಶಾಸ್ತ್ರದಲ್ಲಿ ಬಣ್ಣಗಳ ಉಲ್ಲೇಖವೂ ಇದೆ.
  • ಸುಖ ಸಮೃದ್ಧಿಗಾಗಿ ಈ ಬಣ್ಣ ಒಳ್ಳೆಯದಂತೆ
Vastu Shastra Green Colour Benefits: ಮನೆಯಲ್ಲಿ ಈ  ಬಣ್ಣದ ಗಡಿಯಾರವಿರಲಿ, ಬದಲಾವಣೆ ನಿಮಗೆ ತಿಳಿಯಲಿದೆ  title=
ವಾಸ್ತು ಶಾಸ್ತ್ರದಲ್ಲಿ ಬಣ್ಣಗಳ ಉಲ್ಲೇಖವೂ ಇದೆ. (photo india.com)

Vastu shastra Green Colour Benefits: ಯಾವುದೇ ವ್ಯಕ್ತಿಯ ಜೀವನದಲ್ಲಿ ಬಣ್ಣಗಳಿಗೆ ವಿಶೇಷ ಮಹತ್ವವಿರುತ್ತದೆ.  ಬಣ್ಣಗಳು ವ್ಯಕ್ತಿಯ ಜೀವನವನ್ನು ವರ್ಣಮಯವಾಗಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು (Positive energy) ತುಂಬುತ್ತವೆ. ವಾಸ್ತು ಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಬಣ್ಣಗಳ ಉಲ್ಲೇಖವೂ ಇದೆ. ಎಲ್ಲಾ ಬಣ್ಣಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದರೂ ವಾಸ್ತು ಪ್ರಕಾರ (Vastu) , ಹಸಿರು ಬಣ್ಣವು ವ್ಯಕ್ತಿಯ ಜೀವನದಲ್ಲಿ ಅದೃಷ್ಟ, ಬೆಳವಣಿಗೆ ಮತ್ತು ಆರೋಗ್ಯವನ್ನು ಸೂಚಿಸುವ ಸಂಕೇತವಾಗಿದೆ. ಕೆಲವು ಬಣ್ಣಗಳನ್ನು ನೋಡಿ ಸಂತೋಷವಾದರೆ ಇನ್ನು ಕೆಲವು ಬಣ್ಣಗಳನ್ನು ನೋಡಿ ಒತ್ತಡಕ್ಕೆ ಸಿಲುಕುತ್ತೇವೆ.  

ಫೆಂಗ್ ಶೂಯಿ (feng shui) ಪ್ರಕಾರ, ಹಸಿರು ಬಣ್ಣವು ಅನೇಕ ರೋಗಗಳನ್ನು ತೊಡೆದುಹಾಕಲು ಸಹಕಾರಿಯಾಗಿದೆ. ಫೆಂಗ್ ಶೂಯಿ ಪ್ರಕಾರ, ಹಸಿರು ಬಣ್ಣವನ್ನು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ : Numerology Prediction: ಈ ದಿನಾಂಕದಂದು ಜನಿಸಿದವರಿಗೆ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ

ಇಂದು ನಾವು ನಿಮಗೆ ಹಸಿರು ಬಣ್ಣದ ಕೆಲವು ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ : 

ಹಸಿರು ಬಣ್ಣವು ಪ್ರಕೃತಿಯ ಸಂಕೇತವಾಗಿದೆ. ಈ ಬಣ್ಣವನ್ನು ನೋಡುತ್ತಿದ್ದರೆ ಶಕುನವೇ ಬದಲಾಗುತ್ತದೆಯಂತೆ. ಪ್ರಕೃತಿಯು ನಮಗೆ ಜೀವನದ ಸಂದೇಶವನ್ನು ನೀಡುತ್ತದೆ. ಹಾಗೆಯೇ ಈ ಬಣ್ಣಕ್ಕೂ ನಮ್ಮ ಜೀವನಕ್ಕೂ ಆಳವಾದ ಸಂಬಂಧ ಇದೆ ಎನ್ನುತ್ತದೆ ವಾಸ್ತು ಶಾಸ್ತ್ರ. 

ಹಸಿರು ಬಣ್ಣವು ಸಕಾರಾತ್ಮಕ ಶಕ್ತಿಯನ್ನು (Positive energy) ಉಂಟು ಮಾಡುತ್ತದೆ. ಈ ಬಣ್ಣವು ಒತ್ತಡ ಮತ್ತು ಖಿನ್ನತೆಯನ್ನು ತೆಗೆದುಹಾಕುತ್ತದೆ.

ಮನೆಯಲ್ಲಿ ವಿಶ್ರಾಂತಿ ಪಡೆ, ಯುವ ಸ್ಥಳಗಳಲ್ಲಿ, ಮಲಗುವ ಕೋಣೆಯಲ್ಲಿ ಹಸಿರು ಬಣ್ಣವನ್ನು ಹಚ್ಚುವುದರಿಂದ  (colour according to vastu) ನೆಮ್ಮದಿ ಸಿಗುತ್ತದೆಯಂತೆ.

ಇದನ್ನೂ ಓದಿ : ಕೆಟ್ಟ ಸಮಯ ಆರಂಭಕ್ಕೂ ಮುನ್ನ ಸಿಗುತ್ತದೆಯಂತೆ ಈ ಸೂಚನೆಗಳು ..!

ಹಸಿರು ಬಣ್ಣದ ಮೂಲಕ ಮನೆಯಲ್ಲಿ ಒಂದು ರೀತಿಯ ಶಕ್ತಿಯು ಹರಿಯುತ್ತದೆ. ಅಲ್ಲದೆ, ಹಸಿರು ಪರಿಸರದ ಮಧ್ಯೆ ಕೆಲಸ ಮಾಡುವುದರಿಂದ ವ್ಯಕ್ತಿಯ ಸೃಜನಶೀಲತೆ ಹೆಚ್ಚಾಗುತ್ತದೆ.

ಹಸಿರು ಬಣ್ಣವು ಅನಾರೋಗ್ಯ ಪೀಡಿತರಿಗೆ ಶೀಘ್ರ ಗುಣಮುಖರಾಗಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು (blood pressure) ಸಾಮಾನ್ಯವಾಗಿಸುವುದರ ಜೊತೆಗೆ, ಇದು ಮಾನಸಿಕ ಶಾಂತಿಯನ್ನು ನೀಡುತ್ತದೆ, ಇದು ಮೆದುಳಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆಯಂತೆ .

ವಾಸ್ತು ಪ್ರಕಾರ, ಮನೆಯಲ್ಲಿ ಹಸಿರು ಗಡಿಯಾರವನ್ನು ಹಾಕುವುದು ಸಂತೋಷವನ್ನು ತರುತ್ತದೆ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News