Panchak in November December 2022: ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಂಚಕ ಕಾಲವನ್ನು ಶುಭ ಕಾರ್ಯಗಳನ್ನು ಮಾಡಲು ಅಶುಭವೆಂದು ಹೇಳಲಾಗುತ್ತದೆ. ಪಂಚಕ ಕಾಲದಲ್ಲಿ ಕೆಲವು ಕೆಲಸಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎನ್ನಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಪ್ರತಿ ತಿಂಗಳು ಪಂಚಕಗಳಿರುತ್ತವೆ, ಸಾಮಾನ್ಯವಾಗಿ ಇವು 5 ದಿನಗಳ ಅವಧಿಯದ್ದಾಗಿರುತ್ತವೆ. ನವೆಂಬರ್ ಕೊನೆಯ ವಾರದಲ್ಲಿ ಪಂಚಕ ನಡೆಯಲಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಅದು ಮುಗಿಯಲಿದೆ. ಹೀಗಿರುವಾಗ ಪಂಚಕ ಆರಂಭಗೊಳ್ಳುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕು ಮತ್ತು ಪಂಚಕದ ಸಮಯದಲ್ಲಿ ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಪಂಚಕದಲ್ಲಿ ಕೆಲವು ವಿಷಯಗಳನ್ನು ನಿರ್ಲಕ್ಷಿಸುವುದು ಇಡೀ ಜೀವನಕ್ಕೆ ವಿಷಾದ ಸಾಬೀತಾಗಬಹುದು
ನವೆಂಬರ್ ನಲ್ಲಿ ಅಗ್ನಿ ಪಂಚಕ ನಡೆಯಲಿದೆ
ನವೆಂಬರ್ 2022 ರಲ್ಲಿ ನಡೆಯಲಿರುವ ಪಂಚಕವನ್ನು ಅಗ್ನಿ ಪಂಚಕ ಎಂದು ಕರೆಯಲಾಗುತ್ತಿದೆ. ಮಂಗಳವಾರದಿಂದ ಆರಂಭಗೊಳ್ಳುವ ಪಂಚಕವನ್ನು ಅಗ್ನಿ ಪಂಚಕ ಎಂದು ಕರೆಯುತ್ತಾರೆ. ಈ ಬಾರಿಯ ಪಂಚಕವು ನವೆಂಬರ್ 29, ಮಂಗಳವಾರದಿಂದ ಪ್ರಾರಂಭವಾಗಿ ಡಿಸೆಂಬರ್ 4, ಭಾನುವಾರ ರಾತ್ರಿ ಮುಕ್ತಾಯಗೊಳ್ಳಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಗ್ನಿ ಪಂಚಕವನ್ನು ಅಶುಭವೆಂದು ಪರಿಗನಿಸುಇರುವ ಕಾರಣ ಈ 5 ದಿನಗಳಲ್ಲಿ ಬಹಳ ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ, ಹಾಗೆಯೇ ಇತರ ಕೆಲ ವಿಷಯಗಳನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದೆ ಹೋದಲ್ಲಿ ಅಪಾರ ಹಾನಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ-ಚಳಿಗಾಲದಲ್ಲಿ ಈರುಳ್ಳಿ ರಸ ಕುಡಿಯುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಅಗ್ನಿ ಪಂಚಕದ ಅವಧಿಯಲ್ಲಿ ಈ ಕೆಲಸಗಳನ್ನು ಮಾಡಬೇಡಿ
>> ಅಗ್ನಿ ಪಂಚಕದಲ್ಲಿ ಬೆಂಕಿಯ ಭಯ ಹೆಚ್ಚು ಎಂದು ಹೇಳಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಬೆಂಕಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಿಶೇಷವಾಗಿ ಈ ಪಂಚಗಳ ಅವಧಿಯಲ್ಲಿ ಯಾವುದೇ ರೀತಿಯ ಯಂತ್ರಗಳು, ಆಯುಧಗಳು, ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬೇಡಿ.
>> ಪಂಚಕ ಅವಧಿಯಲ್ಲಿ ಮರ, ಮರದಿಂದ ತಯಾರಿಸಲಾಗುವ ವಸ್ತು, ಇಂಧನವನ್ನು ಖರೀದಿಸಬೇಡಿ.
>> ಮಂಚ ತರುವುದು, ಹಾಸಿಗೆ ಖರೀದಿಸುವುದು, ಮನೆಗೆ ಮೇಲ್ಛಾವಣಿಯನ್ನು ಅಳವಡಿಸುವುದು ಅಥವಾ ಮನೆ ನಿರ್ಮಾಣವನ್ನು ಪ್ರಾರಂಭಿಸುವುದು ತುಂಬಾ ಅಶುಭಕರವೆಂದು ಸಾಬೀತಾಗುತ್ತದೆ.
>> ಪಂಚಕದ 5 ನೇ ದಿನದಂದು ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗಿದೆ. ಪಂಚಕದಲ್ಲಿ ಈ ದಿಕ್ಕಿನಲ್ಲಿ ಪ್ರಯಾಣ ಮಾಡುವುದು ಹಾನಿಕಾರಕವೆಂದು ಸಾಬೀತಾಗಬಹುದು.
>> ಅಗ್ನಿ ಪಂಚಕದ ಕಾಲದಲ್ಲಿ ಮಂಗಳ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳನ್ನು ಎಚ್ಚರಿಕೆಯಿಂದ ಬಳಸಿ. ಹಾಗೆಯೇ ಆದಷ್ಟು ಕೋಪವನ್ನು ತಪ್ಪಿಸಿ.
ಇದನ್ನೂ ಓದಿ-ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಈ ಬಳ್ಳಿ, ಲಕ್ಷ್ಮೀ ದೇವಿ ಬಿಡದೇ ಹರಿಸುತ್ತಾಳೆ ಕೃಪಾ ದೃಷ್ಟಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.