Alcohol Addiction: ಮದ್ಯಪಾನ ಚಟದಿಂದ ಮುಕ್ತಿ ಪಡೆಯಬೇಕೆ? ಇಂದಿನಿಂದಲೇ ಈ ಕೆಲಸ ಆರಂಭಿಸಿ

Alchohol Addiction- ಅತಿಯಾದ ಸಾರಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಮದ್ಯಪಾನ ಮಾಡುವವರಿಗೆ ಮಶ್ರೂಂ ಸೇವನೆ ವೈರಿಗೆ ಸಮಾನ. ಇದರಿಂದ ಮದ್ಯಪಾನ ಚಟ ತೊಲಗುತ್ತದೆ. ಮಶ್ರೂಂ ಸೇವನೆಯಿಂದ ಮಧ್ಯಪಾನ ಚಟವನ್ನು ದೂರ ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

Written by - Nitin Tabib | Last Updated : Aug 30, 2022, 09:32 PM IST
  • ಅತಿಯಾದ ಸಾರಾಯಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ.
  • ಮದ್ಯಪಾನ ಮಾಡುವವರಿಗೆ ಮಶ್ರೂಂ ಸೇವನೆ ಶತ್ರುವಿಗೆ ಸಮಾನ.
  • ಇದರಿಂದ ಮದ್ಯಪಾನ ಚಟ ತೊಲಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು
Alcohol Addiction: ಮದ್ಯಪಾನ ಚಟದಿಂದ ಮುಕ್ತಿ ಪಡೆಯಬೇಕೆ? ಇಂದಿನಿಂದಲೇ ಈ ಕೆಲಸ ಆರಂಭಿಸಿ title=
Alcohol Addiction

How To Get Rid Of Alcohol Addiction - ಕುಡಿತದ ಚಟ ತೀರಾ ಕೆಟ್ಟದ್ದು, ಮದ್ಯಪಾನದ ಚಟದಿಂದ ಅನೇಕರು ತೊಂದರೆಗೀಡಾಗಿದ್ದಾರೆ, ಕೇವಲ ಮದ್ಯಪಾನ ಮಾಡುವವರೇ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದಲ್ಲ. ಆದರೆ, ಅವರ ಜೊತೆ ವಾಸಿಸುವವರ ಸ್ಥಿತಿಯೂ ಕೆಟ್ಟದಾಗುತ್ತದೆ. ನಿಮ್ಮ ಸಂಗಾತಿ ಕೂಡ ಮದ್ಯಪಾನ ಮಾಡುತ್ತಿದ್ದು ಮತ್ತು ಹಲವಾರು ಚಿಕಿತ್ಸೆಗಳನ್ನು ನೀಡಿದರು ಕೂಡ ಅವರು ಆ ವ್ಯಸನವನ್ನು ಬಿಡುತ್ತಿಲ್ಲ ಎಂದಾದರೆ, ನಿಮಗೆ ಒಳ್ಳೆಯ ಸುದ್ದಿ ನಿಮಗಾಗಿ. ಮಶ್ರೂಮ್ ಒಂದು ತರಕಾರಿಯಾಗಿದ್ದು, ಇದನ್ನು ತಿನ್ನುವ ಮೂಲಕ ಮದ್ಯದ ಚಟವನ್ನು ತೊಡೆದುಹಾಕಬಹುದು. ನೀವು ಈ ತರಕಾರಿಯನ್ನು ಆಹಾರದಲ್ಲಿ ಶಾಮೀಳುಗೊಳಿಸಿದರೆ, ಆಲ್ಕೋಹಾಲ್ ಸಮಸ್ಯೆಯಿಂದ ನೀವು ಮುಕ್ತಿಪಡೆಯಬಹುದು ಎಂದು ಇತ್ತೀಚಿನ ಸಂಶೋಧನೆಯಲ್ಲಿ ಸಾಬೀತಾಗಿದೆ.

ಮಶ್ರೂಮ್ ಪ್ರಯೋಜನಗಳು ವರ್ಷಗಳ ಹಳೆಯ ಆಲ್ಕೊಹಾಲ್ ಚಟವನ್ನು ಬಿಡಿಸಬಹುದು. ಅಣಬೆಯಲ್ಲಿ ಆಲ್ಕೋಹಾಲ್ ನಿಂದ ಮುಕ್ತಿ ನೀಡುವ ಹಲವು ಅಂಶಗಳಿವೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಯಿಂದ ಕಂಡುಹಿಡಿದಿದ್ದಾರೆ. ಕಾಪ್ರಿನಸ್ ಎಂಬ ವಿಶೇಷ ಜಾತಿಯ ಅಣಬೆಯಿಂದ ತಯಾರಿಸಿದ ಔಷಧವು ಪರಿಣಾಮಕಾರಿ ಎಂದು ಸಾಬೀತಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ವಿಶಿಷ್ಟ ಅಣಬೆಯಲ್ಲಿ  ಸೈಲೋಸಿಬಿನ್ ಎಂಬ ಅಂಶವಿದ್ದು ಇದು ಮಾನಸಿಕ ಅಸ್ವಸ್ಥತೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ-Belly Fat : ಈ ಜ್ಯೂಸ್‌ ಕುಡಿದರೆ ಹೊಟ್ಟೆಯ ಬೊಜ್ಜು ಕೆಲವೇ ದಿನಗಳಲ್ಲಿ ಮಾಯವಾಗುತ್ತೆ

ಅಂತಹ ಒಂದು ಅಧ್ಯಯನದಲ್ಲಿ, 93 ಆಲ್ಕೋಹಾಲ್-ವ್ಯಸನಿ ರೋಗಿಗಳಿಗೆ ಸೈಲೋಸಿಬಿನ್ ಅಥವಾ ಡಮ್ಮಿ ಡ್ರಗ್ ಹೊಂದಿರುವ ಕ್ಯಾಪ್ಸುಲ್ ಅನ್ನು ನೀಡಲಾಗಿದೆ. ಕೆಲವು ತಿಂಗಳುಗಳ ನಂತರ, ಅದನ್ನು ತೆಗೆದುಕೊಂಡ ಸುಮಾರು ಅರ್ಧದಷ್ಟು ಜನರು ನಿಯಂತ್ರಣ ಗುಂಪಿನ ಶೇ.24ಹೋಲಿಸಿದರೆ, ಸಂಪೂರ್ಣವಾಗಿ ಕುಡಿಯುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-Diabetes control tips: ಈ ನೆಲ್ಲಿಕಾಯಿ ಎದುರು ಡಯಾಬಿಟಿಸ್‌ ಆಟ ನಡೆಯಲ್ಲ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News