ಸಾಯಂಕಾಲದ ವೇಳೆ ಮಾಡುವ ಈ ತಪ್ಪುಗಳಿಂದ ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ

ಕೆಲವು ನಿಯಮಗಳನ್ನು ಪಾಲಿಸುವುದರಿಂದ ಕುಟುಂಬ ಮತ್ತು ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ ಎಂದು ನಂಬಲಾಗಿದೆ.

Written by - Ranjitha R K | Last Updated : Mar 25, 2022, 05:04 PM IST
  • ಸಂಜೆಯ ವೇಳೆ ಕೆಲವು ಕೆಲಸಗಳನ್ನು ಮಾಡಲೇ ಬಾರದು
  • ಇದರಿಂದ ಲಕ್ಷ್ಮೀ ಬೇಸರಗೊಳ್ಳುತ್ತಾಳೆ
  • ಸೂರ್ಯಾಸ್ತದ ವೇಳೆ ಮನೆಯ ಬಾಗಿಲು ತೆರೆದಿರಬೇಕು.
ಸಾಯಂಕಾಲದ ವೇಳೆ ಮಾಡುವ ಈ ತಪ್ಪುಗಳಿಂದ ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ  title=
ಸಂಜೆಯ ವೇಳೆ ಕೆಲವು ಕೆಲಸಗಳನ್ನು ಮಾಡಲೇ ಬಾರದು (file photo)

ನವದೆಹಲಿ : ಹಿಂದೂ ಧರ್ಮಗ್ರಂಥಗಳಲ್ಲಿ ಪ್ರತಿಯೊಂಡು ನಿಯಮಕ್ಕೂ ವಿಶೇಷ ನಿಯಮಗಳಿವೆ . ಆ ನಿಯಮಗಳನ್ನು ಪಾಲಿಸುವುದರಿಂದ ಕುಟುಂಬ ಮತ್ತು ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ ಎಂದು ನಂಬಲಾಗಿದೆ. ಇದಲ್ಲದೇ ದೇವರ ಆಶೀರ್ವಾದವೂ ಸಿಗುತ್ತದೆ ಎನ್ನಲಾಗಿದೆ. ಹೌದು,  ಸಂಜೆಯ ವೇಳೆ ಕೆಲವು ಕೆಲಸಗಳನ್ನು ಮಾಡುವುದು ಕೂಡಾ ಈ ನಿಯಮಗಳ ಪ್ರಕಾರ ನಿಷಿದ್ಧ.  

ಮನೆ ಬಾಗಿಲು ಮುಚ್ಚಬಾರದು :
ಸಂಜೆ ವಿಶೇಷವಾಗಿ ಸೂರ್ಯಾಸ್ತದ ಸಮಯದಲ್ಲಿ ಮನೆಯ ಬಾಗಿಲು ತೆರೆದಿರಬೇಕು.  ಮನೆಯ ಮುಖ್ಯ ಬಾಗಿಲನ್ನೂ ಮುಚ್ಚಲೇಬಾರದು. ಸಂಜೆಯ ವೇಳೆ ಲಕ್ಷ್ಮೀ  (Godess Lakshmi) ಮನೆಯನ್ನು  ಪ್ರವೇಶಿಸುತ್ತಾಳೆ ಎಂಬುದು ನಂಬಿಕೆ. ಆದ್ದರಿಂದ,  ಸೂರ್ಯಾಸ್ತದ ವೇಳೆ ಮನೆಯ ಬಾಗಿಲು ತೆರೆದಿರಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀ  ದೇವಿಯು ಮನೆಯನ್ನು ಪ್ರವೇಶಿಸುತ್ತಾಳೆ ಮತ್ತು ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ.  

ಇದನ್ನೂ ಓದಿ : ಏಪ್ರಿಲ್ ನಲ್ಲಿ ಗೃಹಗಳ ರಾಶಿ ಪರಿವರ್ತನೆಯಿಂದ ಈ ರಾಶಿಯವರ ಜೀವನವೂ ಬದಲಾಗಲಿದೆ

ಸೂಜಿ ಮತ್ತು ಬೆಳ್ಳುಳ್ಳಿ-ಈರುಳ್ಳಿ  ನೀಡಬಾರದು :
ಸಂಜೆ ಮರೆತು ಕೂಡಾ ಯಾರಿಗೂ ಸೂಜಿ ಮತ್ತು ಬೆಳ್ಳುಳ್ಳಿ-ಈರುಳ್ಳಿ (Onion) ನೀಡಬಾರದು.  ಮಾತ್ರವಲ್ಲ, ಬೇರೆಯವರಿಂದ ಸಂಜೆಯ ಸಮಯದಲ್ಲಿ ಬೆಳ್ಳುಳ್ಳಿ-ಈರುಳ್ಳಿ ಅಥವಾ ಸೂಜಿಯನ್ನು ತೆಗೆದುಕೊಳ್ಳಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು (Negetive energy) ನೆಲೆಗೊಳ್ಳಲು ಪ್ರಾರಂಭಿಸುತ್ತವೆ. ಇದಲ್ಲದೇ ಸಂಜೆ ವೇಳೆ ಈ ವಸ್ತುಗಳನ್ನು ಮನೆಯಿಂದ ಹೊರಗೆ ನೀಡುವುದು ಅಥವಾ ಮನೆಗೆ ತರುವುದು ಎರಡು ಕೂಡಾ ಅಶುಭ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಮನೆಯ ಸದಸ್ಯರ ನಡುವೆ ಪರಸ್ಪರ ಹೊಂದಾಣಿಕೆ ಕಡಿಮೆಯಾಗುತ್ತದೆ. 

ತುಳಸಿಯನ್ನು ಮುಟ್ಟಬಾರದು :
ಶಾಸ್ತ್ರ ನಂಬಿಕೆಗಳ ಪ್ರಕಾರ, ತುಳಸಿಯನ್ನು (Tulsi) ಸಂಜೆ ಮುಟ್ಟಬಾರದು. ತುಳಸಿಯನ್ನು ರಾಧಾ ರಾಣಿಯ ರೂಪವೆಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ, ತುಳಸಿ ಲೀಲೆ ಪ್ರದರ್ಶನಕ್ಕೆ ತೆರಳುತ್ತಾರೆ ಎನ್ನುವುದು ನಂಬಿಕೆ. ಆದ್ದರಿಂದ ಆ ಸಮಯದಲ್ಲಿ ತುಳಸಿಯನ್ನು ಸ್ಪರ್ಶಿಸಬಾರದು. ಈ ಸಮಯದಲ್ಲಿ ತುಳಸಿಯನ್ನು ಮುಟ್ಟದೆ ದೀಪವನ್ನು ಬೆಳಗಬೇಕು. 

ಇದನ್ನೂ ಓದಿ :  Vastu Shastra: ಮಾಸ್ಟರ್ ಬೆಡ್‌ರೂಮ್‌ನಲ್ಲಿ ಎಂದಿಗೂ ಈ ವಸ್ತುಗಳನ್ನು ಇಡಬೇಡಿ

ಸೂರ್ಯಾಸ್ತದ ಸಮಯದಲ್ಲಿ ಹಣದ ವ್ಯವಹಾರ ನಡೆಸಬಾರದು : 
ಶಾಸ್ತ್ರಗಳ ನಂಬಿಕೆಗಳ ಪ್ರಕಾರ, ಹಣದ ವ್ಯವಹಾರಗಳನ್ನು ಸೂರ್ಯಾಸ್ತದ ಸಮಯದಲ್ಲಿ ಮಾಡಬಾರದು (things to avoid in the evening).  ಈ ಅವಧಿಯಲ್ಲಿ ಯಾರಿಗೂ ಸಾಲ ನೀಡಬೇಡಿ ಅಥವಾ ಯಾರಿಂದಲೂ ಹಣವನ್ನು ತೆಗೆದುಕೊಳ್ಳಬೇಡಿ. ಮುಂಜಾನೆ ಹಣಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News