ಮಲೆನಾಡು-ಕರಾವಳಿ ಮಂದಿಗೆ ಕಳಲೆ ಅಚ್ಚುಮೆಚ್ಚು; ಇದರ ಆರೋಗ್ಯ ಪ್ರಯೋಜನ ತಿಳಿಯಿರಿ!

Health benifits of Bamboo Shoots : ಕಳಲೆಗಳನ್ನು ವಿವಿಧ ಖಾದ್ಯಗಳನ್ನಾಗಿ ಮಾಡಿ ಸವಿಯುವ ಸಂಪ್ರದಾಯ ಮಲೆನಾಡು-ಕರಾವಳಿ ಜನರಲ್ಲಿದೆ. ಇದರಿಂದ ಮಾಡಿರುವ ಪಲ್ಯ ಅದ್ಭುತ ರುಚಿಯನ್ನು ನೀಡುತ್ತದೆ. ಅದರಲ್ಲೂ ರೊಟ್ಟಿ ಜೊತೆ ಕಳಲೆ ಪಲ್ಯ ಕಾಂಬಿನೇಷನ್‌ ಭರ್ಜರಿಯಾಗಿರುತ್ತದೆ. ಈ ಕಳಲೆ ಕೇವಲ ರುಚಿಯಾಗಿರುವದಷ್ಟೇ ಅಲ್ಲ ಆರೋಗ್ಯಕ್ಕೂ ಒಳಿತು. ಇದರ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿ..

Written by - Savita M B | Last Updated : Aug 9, 2023, 04:48 PM IST
  • ಕಳಲೆ ಮತ್ತು ಅಣಬೆ ತಿನ್ನದಿದ್ದರೆ ಮಲೆನಾಡು-ಕರಾವಳಿ ಮಂದಿಗೆ ಸಮಾಧಾನವೇ ಇರುವುದಿಲ್ಲ
  • ಕಳಲೆ ಕೇವಲ ರುಚಿ ನೀಡುವುದಷ್ಟೇ ಅಲ್ಲ ಆರೋಗ್ಯಕ್ಕೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ
  • ಕಳಲೆಯ ಆರೋಗ್ಯ ಪ್ರಯೋಜನಗಳ ಕುರಿತು ತಿಳಿಯಿರಿ
ಮಲೆನಾಡು-ಕರಾವಳಿ ಮಂದಿಗೆ ಕಳಲೆ ಅಚ್ಚುಮೆಚ್ಚು; ಇದರ ಆರೋಗ್ಯ ಪ್ರಯೋಜನ ತಿಳಿಯಿರಿ! title=

Benifits of Bamboo Shoots : ವರ್ಷಪೂರ್ತಿ ಕಾದು ಕಳಲೆ ಮತ್ತು ಅಣಬೆ ತಿನ್ನದಿದ್ದರೆ ಮಲೆನಾಡು-ಕರಾವಳಿ ಮಂದಿಗೆ ಸಮಾಧಾನವೇ ಇರುವುದಿಲ್ಲ. ಇದು ಹಿರಿಯರಿಂದ ಬಂದ ಆಹಾರ ಪದ್ಧತಿ. ಕಳಲೆ ಅಂದರೇ ಎಲ್ಲರಿಗೂ ಅದರಲ್ಲೂ ಕರಾವಳಿ ಮತ್ತು ಮಲೆನಾಡು ಜನರಿಗೆ ಬಾಯಲ್ಲಿ ನೀರು ಬಂದೆ ಬರುತ್ತೆ. 

ಕಳಲೆ ಎಂಬುದು ಒಂದು ಸಸ್ಯ ಜಾತಿಯ ಬಿದಿರು. ಮಲೆನಾಡಿನ ಜನರು ಇದನ್ನು ಹುಡುಕಿಕೊಂಡು ಕಾಡೆಲ್ಲಾ ಸುತ್ತಿ ಕಳಲೆ ತಂದರೆ ಅಂದು ಹಬ್ಬವೇ ಸರಿ. ಈ ಕಳಲೆ ಕೇವಲ ರುಚಿ ನೀಡುವುದಷ್ಟೇ ಅಲ್ಲ ಆರೋಗ್ಯಕ್ಕೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಹಾಗಾದರೆ ಈ ಕಳಲೆಯಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

ಇದನ್ನೂ ಓದಿ-ಈ ಒಂದು ಸಣ್ಣ ಕಾಯಿ ಸಾಕು ಕೂದಲು ದಷ್ಟ ಪುಷ್ಟವಾಗಿ ಬೆಳೆಯುವಂತೆ ಮಾಡಲು

ಕಳಲೆ ಆರೋಗ್ಯ ಪ್ರಯೋಜನಗಳು : 
* ಕಳಲೆ ಇದು ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಅನೇಕ ರೋಗಗಳು ಮತ್ತು ಬ್ಯಾಕ್ಟೀರಿಯಾಗಳಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.
* ಕಳಲೆ ಹೃದಯವನ್ನು ಆರೋಗ್ಯವಾಗಿರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಜೊತೆಗೆ ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. 
* ಈ ಕಳಲೆಯಲ್ಲಿ ಪೊಟ್ಯಾಸಿಯಮ್‌ ಮತ್ತು ರಂಜಕವು ಹೇರಳವಾಗಿ ಕಂಡುಬರುವುದರಿಂದ ಇದು ಮೂಳೆಗಳನ್ನು ಬಲವಾಗಿರಿಸಲು ಸಹಕರಿಸುತ್ತದೆ.
* ಸಿಲಿಕಾ ಅಂಶವನ್ನು ಹೊಂದಿರುವ ಈ ಕಳಲೆ ಚರ್ಮದ ಸೋಂಕಿನಿಂದಲೂ ಮುಕ್ತಿ ನೀಡುತ್ತದೆ.
* ಕಳಲೆಯು ಉಋಿಯೂತದ ಗುಣಲಕ್ಷಣಕಗಳನ್ನು ಹೊಂದಿದ್ದು, ಜೀವಕೋಶದ ಬೆಳವಣಿಗೆಯಲ್ಲಿ ಪ್ರಮುಖಪಾತ್ರ ವಹಿಸುತ್ತದೆ. 

ಇದನ್ನೂ ಓದಿ-ವೇಗವಾಗಿ ಕೂದಲು ಉದುರುತ್ತಿವೆಯೇ? ಈ ನೀರಿನಿಂದ ಕೂದಲು ತೊಳೆದರೆ ತಕ್ಷಣಕ್ಕೆ ನಿಂತುಹೋಗುತ್ತವೆ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದಕ್ಕೆ ಜವಾಬ್ದಾರನಾಗಿರುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News