ಮಂಗಳ ದೋಷ ನಿವಾರಣೆಗೆ ವಿಷ್ಣು ಪೂಜೆಯ ಸಂದರ್ಭದಲ್ಲಿ ಈ ಗಿಡಕ್ಕೆ ವಿಶೇಷ ಮಹತ್ವ ನೀಡಿ

ಪುರಾಣಗಳ ಪ್ರಕಾರ, ಬಾಳೆ ಗಿಡವನ್ನು ಶ್ರೀವಿಷ್ಣುವಿನ ವಾಸಸ್ಥಾನವೆಂದು ನಂಬಲಾಗಿದೆ. ಗುರುವಾರದ ದಿನ  ಬಾಳೆ ಗಿಡವನ್ನು ಪೂಜಿಸಿದರೆ ಶ್ರೀವಿಷ್ಣು ಪ್ರಸನ್ನನಾಗುತ್ತಾನೆ ಎನ್ನಲಾಗಿದೆ. ಬಾಳೆಗಿಡ  ಶುಭ ಮತ್ತು ಸಮೃದ್ಧಿಯ ಸಂಕೇತ ಕೂಡ ಹೌದು. ಈ ಗಿಡದ ಪೂಜೆ ಮಾಡುವ ವ್ಯಕ್ತಿಗೆ ಧನಲಾಭ ಪ್ರಾಪ್ತಿಯಾಗಿ, ಧನ-ಧಾನ್ಯದ ಕೊರತೆ ಎದುರಾಗುವುದಿಲ್ಲ.

Written by - Nitin Tabib | Last Updated : Mar 1, 2021, 11:04 PM IST
  • ಬಾಳೆಗಿಡ ಶ್ರೀ ವಿಷ್ಣುವಿನ ವಾಸಸ್ಥಾನ.
  • ಗುರುವಾರ ಬಾಳೆಗಿಡಕ್ಕೆ ಪೂಜೆ ಸಲ್ಲಿಸಿ.
  • ಮಂಗಳ ಹಾಗೂ ಗುರು ದೋಷ ನಿವಾರಕ ಬಾಳೆಗಿಡ.
ಮಂಗಳ ದೋಷ ನಿವಾರಣೆಗೆ ವಿಷ್ಣು ಪೂಜೆಯ ಸಂದರ್ಭದಲ್ಲಿ ಈ ಗಿಡಕ್ಕೆ ವಿಶೇಷ ಮಹತ್ವ ನೀಡಿ title=
Mythological Importance Of Banana Tree(File Photo)

ನವದೆಹಲಿ: ಶ್ರೀವಿಷ್ಣು (Shri Vishnu) ಹಾಗೂ ದೇವಿ ಲಕ್ಷ್ಮಿಯ (Godess Lakshmi) ಪೂಜೆಯ ವೇಳೆ ಬಾಳೆಹಣ್ಣು ಬಾಳೆಗಿಡವನ್ನು ಅವಶ್ಯವಾಗಿ ಉಪಯೋಗಿಸಲಾಗುತ್ತದೆ. ಇದರಿಂದ ವೈವಾಹಿಕ ಜೀವನ ಸುಖದಿಂದ ಕೂಡಿರುತ್ತದೆ ಮತ್ತು ಸುಖ-ಸಂಪತ್ತು ಲಭಿಸುತ್ತದೆ. ಬಾಳೆ ಮರದ ಬೇರು, ಕಾಂಡ, ಎಲೆಗಳು ಮತ್ತು ಹಣ್ಣುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಒಬ್ಬ ವ್ಯಕ್ತಿಯು ಮಂಗಳ ದೋಷದಿಂದ (Mangal Dosh) ಪೀಡಿತನಾಗಿದ್ದರೆ, ಅಂತಹ ವ್ಯಕ್ತಿಯನ್ನು ಬಾಳೇಮರದ (Banana Tree) ಮರದ ಜೊತೆಗೆ ಮೊದಲು ವಿವಾಹ ಮಾಡಿಸಿಸಿ ದೋಷ ಪರಿಹರಿಸಲಾಗುತ್ತದೆ.

ಗುರುವಾರ ಬಾಳೆಗಿಡಕ್ಕೆ ಪೂಜೆ ಸಲ್ಲಿಸಿದರೆ ಜಾತಕದಲ್ಲಿ ಗುರುಬಲ ಲಭಿಸುತ್ತದೆ ಹಾಗೂ ಇಂತವರ ಮದುವೆಯಲ್ಲಿ ಯಾವುದೇ ಅದೇ ತಡೆ ಉಂಟಾಗುವುದಿಲ್ಲ. ಅವರಿಗೆ ಅತ್ಯುತ್ತಮ ಬಾಳಸಂಗಾತಿ ಸಿಗುತ್ತಾಳೆ ಹಾಗೂ ಇಷ್ಟಾರ್ಥ ಸಿದ್ಧಿಸುತ್ತದೆ. ಇವರ ಮನೆಯಲ್ಲಿ ಆರ್ಥಿಕ ಸಂಪನ್ನತೆ ಕೂಡ ಲಭ್ಸುತ್ತದೆ. ಬಾಳೆಗಿಡವನ್ನು ಮನೆಯಲ್ಲಿ ನೆಟ್ಟರೆ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ನಕಾರಾತ್ಮಕ ಶಕ್ತಿ ಮನೆಯಿಂದ ತೊಲಗುತ್ತದೆ.

ಇದನ್ನೂ ಓದಿ-Venus Transit 2021: ಮಾರ್ಚ್ ತಿಂಗಳಿನಲ್ಲಿ ಮೀನ ರಾಶಿಗೆ ಶುಕ್ರನ ಪ್ರವೇಶ, ವಿವಿಧ ರಾಶಿಗಳ ಮೇಲೆ ಪ್ರಭಾವ ಏನು?

ಬಾಳೆಗಿಡಕ್ಕೆ ಪೂಜೆ (Puja) ಸಲ್ಲಿಸುವುದರ ಹಲವು ಲಾಭಗಳಿವೆ. ಈ ಗಿಡ ಮನೆಯಲ್ಲಿದ್ದರೆ ವೈವಾಹಿಕ ಜೀವನದಲ್ಲಿನ ಅಡಚಣೆಗಳು ದೂರಾಗುತ್ತವೆ. ಅವಿವಾಹಿತ ಕನ್ಯೆಯರ ಕಂಕಣಬಲ ಕೂಡಿ ಬರುತ್ತದೆ. ಉಚ್ಚ ಶಿಕ್ಷಣ, ಜ್ಞಾನಪ್ರಾಪ್ತಿಗೆ ಈ ಗೀತಾ ಸಹಾಯಕ ಸಿದ್ಧ ಸಾಬೀತಾಗುತ್ತದೆ ಎನ್ನಲಾಗಿದೆ. ಏಕೆಂದರೆ ಇದರಿಂದ ಯಾವಾಗಲು ಶಾಂತಿಮಯ ಹಾಗೂ ಸಕಾರಾತ್ಮಕ ಶಕ್ತಿ ಹೊರಬರುತ್ತದೆ. ಬಾಳೆಹಣ್ಣಿನ ಪೂಜೆ ಮಾಡುವುದರಿಂದ ಗುರು ದೋಷ (Guru Dosh) ಕೂಡ ನಿವಾರಣೆಯಾಗುತ್ತದೆ. 

ಇದನ್ನೂ ಓದಿ-Mahashivaratri 2021: ಶಿವನನ್ನು ಸುಲಭವಾಗಿ ಒಲಿಸಿಕೊಳ್ಳಲು ಇಲ್ಲಿವೆ ಸುಲಭ ವಿಧಾನಗಳು

ಮನೆಯ ಮುಖ್ಯದ್ವಾರ ಹಾಗೂ ಹಿತ್ತಲಲ್ಲಿ ಬಾಳೆಗಿಡ ಬೆಳೆಸಬೇಡಿ. ಬಾಳೆಗಿಡದ ಅಕ್ಕಪಕ್ಕ ಸ್ವಚ್ಚತೆಯ ಗಮನ ಹರಿಸಿ. ಬಾಳೆಗಿಡದ ಕೊಂಬೆಯಲ್ಲಿ ಕೆಂಪುಬಣ್ಣದ ದಾರ ಕಟ್ಟಿ.

ಇದನ್ನೂ ಓದಿ-Magh Purnima 2021: ನಾಳೆ ಭಾರತ ಹುಣ್ಣಿಮೆ, ಪವಿತ್ರ ನದಿಯಲ್ಲಿ ಸ್ನಾನ, ದಾನ ಮತ್ತು ಧ್ಯಾನದಿಂದ ಸಕಲ ಸಿದ್ಧಿ ಪ್ರಾಪ್ತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News