ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಈ ಉಂಗುರ, ಧರಿಸಿದರೆ ಸಾಕು ಮಾಯವಾಗುತ್ತದೆಯಂತೆ ಕಷ್ಟ ಕಾರ್ಪಣ್ಯ

ಜ್ಯೋತಿಷ್ಯದ  ಪ್ರಕಾರ, ಕೆಲವೊಂದು ಉಂಗುರಗಳನ್ನು ಶಾಶ್ವತವಾಗಿ ಧರಿಸಬಹುದು.  ಈ ಉಂಗುರವು ಜೀವನದುದ್ದಕ್ಕೂ ಪ್ರಯೋಜನಗಳನ್ನು ನೀಡುತ್ತದೆ. 

Written by - Zee Kannada News Desk | Last Updated : Feb 6, 2022, 12:50 PM IST
  • ಲಕ್ಷ್ಮೀ ಯ ವಿಶೇಷ ಕೃಪೆ ಲಭಿಸುತ್ತದೆ
  • ಜೀವನದಲ್ಲಿ ಎದುರಾಗುವುದಿಲ್ಲ ಹಣದ ಕೊರತೆ
  • ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಈ ಉಂಗುರ, ಧರಿಸಿದರೆ ಸಾಕು ಮಾಯವಾಗುತ್ತದೆಯಂತೆ ಕಷ್ಟ ಕಾರ್ಪಣ್ಯ  title=
ಲಕ್ಷ್ಮೀ ಯ ವಿಶೇಷ ಕೃಪೆ ಲಭಿಸುತ್ತದೆ (file photo)

ನವದೆಹಲಿ : ಗ್ರಹಗಳ ಕೆಟ್ಟ ಪರಿಣಾಮಗಳನ್ನು ಕಡಿಮೆ ಮಾಡಲು ಕೆಲವು ರತ್ನಗಳನ್ನು ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ ನಿರ್ದಿಷ್ಟ ರತ್ನಗಳಿಂದ ಮಾಡಿದ ಉಂಗುರವನ್ನು ನಿಗದಿತ ಅವಧಿಯವರೆಗೆ ಮಾತ್ರ ಧರಿಸಲಾಗುತ್ತದೆ. ಏಕೆಂದರೆ ಗ್ರಹಗಳ ಬದಲಾವಣೆಯು ರತ್ನಗಳ ಅಶುಭ ಪರಿಣಾಮಗಳನ್ನು ಸಹ ಉಂಟುಮಾಡಬಹುದು. ಆದರೆ ಜ್ಯೋತಿಷ್ಯದ (Astrology) ಪ್ರಕಾರ, ಕೆಲವೊಂದು ಉಂಗುರಗಳನ್ನು ಶಾಶ್ವತವಾಗಿ ಧರಿಸಬಹುದು.  ಈ ಉಂಗುರವು ಜೀವನದುದ್ದಕ್ಕೂ ಪ್ರಯೋಜನಗಳನ್ನು ನೀಡುತ್ತದೆ. 

ಪಂಚಧಾತು ಅಥ್ವಾ ಪಂಚ ಲೋಹದ ಉಂಗುರದ ಪ್ರಾಮುಖ್ಯತೆ :
ಜ್ಯೋತಿಷ್ಯದಲ್ಲಿ (Astrology) ಪಂಚಧಾತುವಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ (Importance of Panchdhatu Ring). ಪಂಚಧಾತುವು ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಸೀಸವನ್ನು ಒಳಗೊಂಡಿರುತ್ತದೆ. ಈ ಲೋಹಗಳಿಂದ ಮಾಡಿದ ಉಂಗುರವು (Panchdhatu Ring) ವ್ಯಕ್ತಿಯ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಪಂಚಧಾತು ಉಂಗುರವನ್ನು ಧರಿಸುವುದರಿಂದ ಜೀವನದ ನಕಾರಾತ್ಮಕ ಶಕ್ತಿ (Negetive energy) ನಾಶವಾಗುತ್ತದೆ. ಇದರೊಂದಿಗೆ ಆಲೋಚನೆಗಳಲ್ಲಿ ಸಕಾರಾತ್ಮಕತೆ ಬರುತ್ತದೆ. ಇದಲ್ಲದೆ, ಆತ್ಮವಿಶ್ವಾಸವು ಬಲಗೊಳ್ಳುತ್ತದೆ. ಅಷ್ಟೇ ಅಲ್ಲ, ಇತರರ ಮೇಲಿನ ಅಸೂಯೆಯ ಭಾವನೆಯೂ ಕೊನೆಗೊಳ್ಳುತ್ತದೆ. 

ಇದನ್ನೂ ಓದಿ : ಈ 5 ರಾಶಿಯವರಿಗೆ ವರದಾನವಾಗಿ ಪರಿಣಮಿಸಲಿದೆ ತ್ರಿಗ್ರಾಹಿ ಯೋಗ

ಲಭಿಸುತ್ತದೆ ಲಕ್ಷ್ಮೀಯ ವಿಶೇಷ ಕೃಪೆ : 
ಪಂಚಧಾತು ಉಂಗುರವನ್ನು ಧರಿಸುವುದರಿಂದ  ಲಕ್ಷ್ಮೀ ದೇವಿಯ (Godess Lakshmi)ವಿಶೇಷ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಈ ಉಂಗುರವನ್ನುಜ್ಯೋತಿಷ್ಯದಲ್ಲಿ ಹೇಳಿದ ರೀತಿಯಲ್ಲಿ ಧರಿಸಿದರೆ, ಜೀವನದಲ್ಲಿ ಎಂದೂ ಹಣದ ಕೊರತೆ ಎದುರಾಗುವುದಿಲ್ಲ. 

ಪಂಚಧಾತು ಉಂಗುರವನ್ನು ಧರಿಸುವುದು ಹೇಗೆ? 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಂಚಧಾತು ಉಂಗುರವನ್ನು ಉಂಗುರದ ಬೆರಳಿಗೆ ಧರಿಸಬಾರದು (Panchdhatu Ring Wearing Rules). ಇದನ್ನು  ಬಿಟ್ಟು ಬೇರೆ ಯಾವುದೇ ಬೆರಳಿಗೆ ಧರಿಸಬಹುದು. 

ಇದನ್ನೂ ಓದಿ :  Chanakya Niti: ಈ 4 ವಿಷಯಗಳಲ್ಲಿ ಒಂದನ್ನು ಸಾಧಿಸಲು ಸಾಧ್ಯವಾಗದ ಜನರ ಜೀವನ ನಿಷ್ಪ್ರಯೋಜಕ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News