ನವದೆಹಲಿ : 2022 ರ ಆರಂಭದಲ್ಲಿ ಇದು ಎರಡನೇ ಬಾರಿಗೆ ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗವು (TirgrahiYoga) ರೂಪುಗೊಳ್ಳುತ್ತದೆ. ಜನವರಿ ತಿಂಗಳಿನಲ್ಲಿಯೂ 3 ಪ್ರಮುಖ ಗ್ರಹಗಳು ಮಕರ ರಾಶಿಯಲ್ಲಿ (Capricorn) ಒಟ್ಟಿಗೆ ಸೇರಿತ್ತು. ಇದೀಗ ಫೆಬ್ರವರಿಯಲ್ಲಿ ಮತ್ತೆ ಗ್ರಹಗಳ ಸ್ಥಾನ ಬದಲಾವಣೆಳಾಗಿದ್ದು, ಮಕರ ರಾಶಿಯಲ್ಲಿ ತ್ರಿಗ್ರಾಹಿ ಯೋಗವನ್ನುಂಟು ಮಾಡಿದೆ. ಈ ಸಮಯದಲ್ಲಿ ಶನಿ (Shani dev), ಸೂರ್ಯ ಮತ್ತು ಬುಧ ಮಕರ ರಾಶಿಯಲ್ಲಿರುತ್ತಾರೆ. ಈ ಹಿಂದೆ ಮಕರ ರಾಶಿಯಲ್ಲಿ ಬುಧ ವಕ್ರಿಯಾಗಿದ್ದ. ಈಗ ಬುಧನ ನೇರ ಚಲನೆ ಆರಂಭವಾಗಿದ್ದು, ಬುಧ ಗ್ರಹದ ನೇರ ಚಲನೆ ಮತ್ತು ಒಂದೇ ರಾಶಿಯಲ್ಲಿ ಸೂರ್ಯ, ಶನಿ ಸೇರಿದಂತೆ ಬುಧನ ಉಪಸ್ಥಿತಿಯು ತ್ರಿಗ್ರಾಹಿ ಯೋಗವನ್ನು (Tirgrahi Yoga) ಸೃಷ್ಟಿಸಿದೆ. ಇದು 5 ರಾಶಿಚಕ್ರದ ಚಿಹ್ನೆಗಳಿಗೆ ಮಂಗಳಕರವಾಗಿ ಪರಿಣಮಿಸಲಿದೆ.
ಈ ರಾಶಿಯವರ ಪಾಲಿಗೆ ಹರಿಯಲಿದೆ ಹಣದ ಹೊಳೆ :
ವೃಷಭ : ವೃಷಭ ರಾಶಿಯವರಿಗೆ (Taurus) ತ್ರಿಗ್ರಾಹಿ ಯೋಗವು ತುಂಬಾ ಶುಭಕರವಾಗಿದೆ. ಹಣಕಾಸಿಗೆ ಸಂಬಂಧಪಟ್ಟಂತ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ವಿಶೇಷವಾಗಿ ಕಬ್ಬಿಣ, ಎಣ್ಣೆ ಇತ್ಯಾದಿ ಶನಿಗೆ (Shani deva) ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಮತ್ತು ಬರವಣಿಗೆ, ವಕಾಲತ್ತು, ಮಾಧ್ಯಮ, ವ್ಯಾಪಾರೋದ್ಯಮಕ್ಕೆ ಸಂಬಂಧಿಸಿದವರು ಉತ್ತಮ ಲಾಭವನ್ನು ಪಡೆಯಬಹುದು. ಇವರ ಕೆಲಸವು ಉತ್ತಮವಾಗಿ ನಡೆಯುತ್ತದೆ. ಆಹಾರ (Food) , ಬಟ್ಟೆ ಇತ್ಯಾದಿಗಳಲ್ಲಿ ಹಸಿರು ಬಣ್ಣವನ್ನು ಬಳಸುವುದರಿಂದ ಇನ್ನಷ್ಟು ಅಧಿಕ ಲಾಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : Chanakya Niti: ಈ 4 ವಿಷಯಗಳಲ್ಲಿ ಒಂದನ್ನು ಸಾಧಿಸಲು ಸಾಧ್ಯವಾಗದ ಜನರ ಜೀವನ ನಿಷ್ಪ್ರಯೋಜಕ!
ಕನ್ಯಾರಾಶಿ: ತ್ರಿಗ್ರಾಹಿ ಯೋಗವು ಕನ್ಯಾ ರಾಶಿಯವರಿಗೆ (Virgo) ತಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಲಾಭವನ್ನು ನೀಡುತ್ತದೆ. ಉದ್ಯಮಿಗಳು ಈ ಸಮಯದಲ್ಲಿ ದೊಡ್ಡ ವ್ಯವಹಾರವನ್ನು ಮಾಡಬಹುದು. ಆರೋಗ್ಯ ಚೆನ್ನಾಗಿರುತ್ತದೆ. ಪ್ರತಿ ಕೆಲಸದಲ್ಲಿ ಯಶಸ್ಸು ಇರುತ್ತದೆ ಮತ್ತು ಹಣ ಗಳಿಕೆಯಾಗುತ್ತದೆ.
ಧನು ರಾಶಿ : ತ್ರಿಗ್ರಾಹಿ ಯೋಗವು (Tirgrahi Yoga) ಧನು ರಾಶಿಯವರಿಗೆ (Sagittarius) ಭಾರೀ ಲಾಭವನ್ನು ತರುತ್ತದೆ. ಉದ್ಯೋಗ ಅಥವಾ ವ್ಯವಹಾರ ಎರಡರಲ್ಲೂ ಯಶಸ್ಸು ಸಿಗುತ್ತದೆ. ಮಾರಾಟ, ವ್ಯಾಪಾರ, ರಿಯಲ್ ಎಸ್ಟೇಟ್ಗೆ (Real estate) ಸಂಬಂಧಿಸಿದ ಜನರಿಗೆ ಈ ಸಮಯ ಉತ್ತಮವಾಗಿದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಶನಿದೇವನ (Shani deva) ಕೃಪೆಯಿಂದ ಕೆಲವು ಬಲವಾದ ಲಾಭಗಳಾಗಬಹುದು.
ಇದನ್ನೂ ಓದಿ : Magh Purnima 2022: ಮಾಘ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ
ಮಕರ : ಮಕರ ರಾಶಿಯಲ್ಲಿ (Capricorn) ಈ ಮೂರೂ ಗ್ರಹಗಳು ಒಟ್ಟಿಗೆ ಸೇರುತ್ತಿರುವುದು ಮಕರ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಅದೃಷ್ಟದ ಸಹಾಯದಿಂದ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಶನಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪ್ರಗತಿ ಮತ್ತು ಹಣವನ್ನು ಪಡೆಯುತ್ತಾರೆ.
ಮೀನ: ಈ ಸಮಯವು ಮೀನ ರಾಶಿಯವರಿಗೆ (Pisces) ಉತ್ತಮ ಆರ್ಥಿಕ ಲಾಭವನ್ನು ನೀಡುತ್ತದೆ. ವಿಶೇಷವಾಗಿ, ಆಸ್ತಿ, ಮಾಧ್ಯಮ, ಸಾರಿಗೆ, ಟಿವಿ, ಮನರಂಜನಾ ಪ್ರಪಂಚಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ತುಂಬಾ ಫಲಪ್ರದವಾಗಿದೆ. ವಿದೇಶದಲ್ಲಿ ಕೆಲಸ ಮಾಡುವವರಿಗೂ ಲಾಭವಾಗಲಿದೆ.
(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.