Benefits Of Wearing Pearl: ವಿಜ್ಞಾನದ ಪ್ರಕಾರ, ಮುತ್ತು ಒಂದು ಸಾವಯವ ವಸ್ತುವಾಗಿದೆ, ಆದರೆ ಇದನ್ನು ನವರತ್ನದಲ್ಲಿ ಸೇರಿಸಲಾಗಿದೆ. ಜ್ಯೋತಿಷ್ಯ ಪ್ರಕಾರ, ಮುತ್ತು ಧರಿಸಿ ಹೃದಯವನ್ನು ನಿಯಂತ್ರಣದಲ್ಲಿಡಬಹುದು ಎನ್ನಲಾಗಿದೆ. ವಾಸ್ತವದಲ್ಲಿ ಭಾರತೀಯ ಜ್ಯೋತಿಷ್ಯದಲ್ಲಿ, ಪ್ರತಿಯೊಂದು ಗ್ರಹವು ನಿರ್ದಿಷ್ಟ ರತ್ನದೊಂದಿಗೆ ಸಂಬಂಧ ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ಗ್ರಹಕ್ಕೆ ಸಂಬಂಧಿಸಿದ ರತ್ನದ ಹರಳು ಧರಿಸುವುದರಿಂದ ವ್ಯಕ್ತಿಯ ಗ್ರಹಗಳ ದೋಷಗಳು ನಿವಾರಣೆಯಾಗುತ್ತವೆ ಎನ್ನಲಾಗಿದೆ. ಇದಲ್ಲದೆ, ಕೆಲವು ರತ್ನಗಳು ಹಿಂದೂ ದೇವರು ಮತ್ತು ದೇವತೆಗಳಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ. ಇದೇ ರೀತಿ ಮುತ್ತು ಚಂದ್ರನ ಜೊತೆಗೆ ನೇರ ಸಂಬಂಧ ಹೊಂದಿದೆ ಎನ್ನಲಾಗುತ್ತದೆ. ಮುತ್ತು ದೇವಿ ಲಕ್ಷ್ಮಿಯ ನೆಚ್ಚಿನ ರತ್ನವಾಗಿರುವ ಕಾರಣ ಬಿಳಿ ಮುತ್ತುಗಳನ್ನು ಧರಿಸುವುದರಿಂದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಬನ್ನಿ ಮುತ್ತುಗಳನ್ನು ಧರಿಸುವುದರಿಂದಾಗುವ ಲಾಭಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇದನ್ನೂ ಓದಿ-ಬೆಳ್ಳಿಯ ಉಂಗುರ ಅದೃಷ್ಟವನ್ನೇ ಬದಲಿಸಿ ಬಿಡಬಹುದು, ಹೇಗೆ ತಿಳಿಯಿರಿ
ಲಕ್ಷ್ಮಿ ದೇವಿಯ ಜೊತೆಗೆ ಮುತ್ತಿನ ಸಂಬಂಧ
ಸಮುದ್ರ ಮಂಥನದ ದಂತಕಥೆಯ ಪ್ರಕಾರ, ಲಕ್ಷ್ಮಿ ದೇವಿಯು ಸಾಗರದಿಂದ ಜನಿಸಿದಳು ಹಾಗೂ ಮುತ್ತುಗಳು ಸಹ ಸಹ ಸಾಗರದಲ್ಲಿಯೇ ದೊರೆಯುತ್ತವೆ ಎನ್ನಲಾಗುತ್ತದೆ. ಮುತ್ತು ದೇವಿ ಲಕ್ಷ್ಮಿಗೆ ತುಂಬಾ ಪ್ರಿಯ ಎಂದು ಹೇಳಲಾಗುತ್ತದೆ. ಹಲವು ಬಾರಿ ಭಕ್ತಾದಿಗಳು ದೇವಿ ಲಕ್ಷ್ಮಿಗೆ ಮುತ್ತುಗಳನ್ನು ಸಹ ಅರ್ಪಿಸುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆಯಲ್ಲಿ ಮುತ್ತುಗಳನ್ನು ಇಡುವುದರಿಂದ ದೇವಿ ಲಕ್ಷ್ಮಿ ಪ್ರಸನ್ನಳಾಗಿ ನಿಮ್ಮ ಮನೆಯಲ್ಲಿ ಧನ-ಧಾನ್ಯದ ಕೊರತೆ ಎದುರಾಗದಂತೆ ಆಶಿರ್ವದಿಸುತ್ತಾಳೆ ಎನ್ನಲಾಗುತ್ತದೆ. ಕೊರಳಿಗೆ ಮುತ್ತಿನ ಹಾರ ಧರಿಸುವುದರಿಂದ ಅಥವಾ ಕಿರು ಬೆರಳಿನಲ್ಲಿ ಮುತ್ತು ಧರಿಸುವುದರಿಂದ ಲಕ್ಷ್ಮಿ ದೇವಿಗೆ ವಿಶೇಷ ಅನುಗ್ರಹ ಸಿಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Chaturmas 2021: ಜುಲೈ 20 ರಿಂದ ಚಾತುರ್ಮಾಸ ಆರಂಭ, ನವೆಂಬರ್ 14ರವರೆಗೆ ಮಂಗಳ ಕಾರ್ಯಗಳು ನಡೆಯುವುದಿಲ್ಲ
ಮುತ್ತು ಧರಿಸುವುದರಿಂದಾಗುವ ಲಾಭಗಳು
ಜ್ಯೋತಿಷ್ಯದ ಪ್ರಕಾರ ಮುತ್ತು ಚಂದ್ರನ (Moon) ಜೊತೆಗೆ ನೇರ ಸಂಬಂಧ ಹೊಂದಿದೆ. ಆದರೆ, ಬಿಳಿ ಬಣ್ಣದ್ದಾಗಿರುವುದರಿಂದ ಮುತ್ತು ಧಾರಣೆ ಮಾಡಿ ನೀವು ದೇವಿ ಲಕ್ಷ್ಮಿ (Goddess Lakshmi) ಹಾಗೂ ಶುಕ್ರನನ್ನು (Shukra) ಸಹ ಪ್ರಸನ್ನಗೊಳಿಸಬಹುದು. ಮುತ್ತು ಧರಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಖಿನ್ನತೆ ಅಥವಾ ಯಾವುದೇ ಮಾನಸಿಕ ಸಮಸ್ಯೆ ಇರುವವರು ಕಿರು ಬೆರಳಿನಲ್ಲಿ ಬಿಳಿ ಅಥವಾ ಕೆನೆ ಬಣ್ಣದ ಮುತ್ತು ಧರಿಸಬೇಕು. ಮುತ್ತುಗಳನ್ನು ಧರಿಸುವ ಮೂಲಕ, ತಾಯಿಯ ಲಕ್ಷ್ಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇದೇ ವೇಳೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ವೃದ್ಧಿಯಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆಯಿಂದಾಗಿ ಮನೆಯಲ್ಲಿ ಯಾವತ್ತೂ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ. ಮುತ್ತುಗಳನ್ನು ಸಾಮಾನ್ಯಬಾಗಿ ಬೆಳ್ಳಿ ಅಥವಾ ಬಿಳಿ ಬಣ್ಣದ ಲೋಹದಲ್ಲಿ ಧರಿಸಬೇಕು ಎಂಬ ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ- Sun Transit In Cancer: ಕರ್ಕಾಟಕ ರಾಶಿಗೆ ಸೂರ್ಯನ ಪ್ರವೇಶದಿಂದ ಈ 5 ರಾಶಿಯವರಿಗೆ ಅದೃಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ