Godhi Dosa: ಗೋಧಿ ದೋಸೆ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳು..!

Wheat Dosa Benefits: ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಕೆ ಮುಂತಾದ, ತಿಂಡಿಗಳ ಬಗ್ಗೆ ಹಲವರಿಗೆ ಗೊತ್ತು ಆದರೆ ಇದರಿಂದ ತಯಾರಿಸಲ್ಪಡುವ ಗೋಧಿ ದೋಸೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಮೂಲಿ ದೋಸೆಗಿಂತ ಇದು ಹೆಚ್ಚಿನ ಪ್ರಮಾಣದ ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದೆ. 

Written by - Zee Kannada News Desk | Last Updated : Jul 24, 2023, 10:31 AM IST
  • ಗೋಧಿ ದೋಸೆ ಸೇವನೆಯಿಂದ ಹಲವು ಪ್ರಯೋಜನಗಳು
  • ಇದು ಹೆಚ್ಚಿನ ಪ್ರಮಾಣದ ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದೆ
  • ಗೋಧಿ ದೋಸೆಯಲ್ಲಿ ಅಧಿಕ ಫೈಬರ್ ಅಂಶ ಹೇರಳ
Godhi Dosa: ಗೋಧಿ ದೋಸೆ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳು..! title=

Lifestyle: ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಕೆ ಮುಂತಾದ , ತಿಂಡಿಗಳ ಬಗ್ಗೆ ಹಲವರಿಗೆ ಗೊತ್ತು ಆದರೆ ಇದರಿಂದ ತಯಾರಿಸಲ್ಪಡುವ ಗೋಧಿ ದೋಸೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಮೂಲಿ ದೋಸೆಗಿಂತ ಇದು ಹೆಚ್ಚಿನ ಪ್ರಮಾಣದ ರುಚಿ ಹಾಗೂ  ಪೌಷ್ಟಿಕಾಂಶಗಳನ್ನು ಹೊಂದಿದೆ. 

ಇದರ ಸೇವನೆಯಿಂದ ಆಗುವ ಪ್ರಯೋಜನಗಳು

ದೇಹವು ನಿಶಕ್ತಿಯಿಂದ ಒಳಗಾಗದರೇ ಅಥವಾ ಆಯಾಸ ಎನಿಸಿದರೇ ಅಂಥಹ ಸಂದರ್ಭದಲ್ಲಿ ಉಪಹಾರವಾಗಿ ಗೋಧಿ ದೋಸೆ ಸೇವಿಸುವುದರಿಂದ ದೇಹದ ಶಕ್ತಿ  ಹೆಚ್ಚುತ್ತದೆ. 

ಗೋಧಿ ದೋಸೆಯಲ್ಲಿ ಅಧಿಕ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆ ಹಾಗೂ ತೂಕ ಇಳಿಕೆಗೆ ಸಹಕಾರಿಯಾಗಿದೆ. 

ಇದನ್ನೂ ಓದಿ: Lemon peel & Juice: ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಈ ಸಮಸ್ಯೆಗಳಿಗೆ ಪರಿಹಾರ..!

ಇದರಲ್ಲಿ ಗ್ಲೂಕ್ಲೋಸ್‌ ಮಟ್ಟ ಕಡಿಮೆ ಇರುವುದರಿಂದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿ ಮಧುಮೇಹದಿಂದ ಪಾರು ಮಾಡುತ್ತದೆ.

ದೇಹದಲ್ಲಿ  ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರಿಸುವುದರಿಂದ ಹೃದ್ರೋಗಿ ಗಳಿಗೂ ಸಹಕಾರಿಯಾಗಿದೆ.

ಇದನ್ನೂ ಓದಿ: Wild Tomato: ಊರಲ್ಲ...ʼಕಾಡು ಟೊಮೆಟೊʼ ಬಗ್ಗೆ ನಿಮಗೆಷ್ಟು ಗೊತ್ತು..?

ವಿಟಮಿನ್‌ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. 

ಗೋಧಿ ದೋಸೆ ಮಾಡುವ ವಿಧಾನ:

ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟನ್ನು ತೆಗೆದುಕೊಂಡು  ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಮಿಶ್ರಣ ಮಾಡಿ ಗಂಟು ಆಗದ ರೀತಿಯಲ್ಲಿ ಕಲಸಬೇಕು ಹೆಚ್ಚು ನೀರು ಹಾಕದೇ, ಕಡಿಮೆಯೂ ಹಾಕದೇ ಸಮತೋಲದಲ್ಲಿ ನೀರು ಹಾಕಿ ಬಳಿಕ ಈರುಳ್ಳಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಮಿಶ್ರಣ ಮಾಡಿ ದೋಸೆ ಹಿಟ್ಟು ಮಾಡಿಕೊಳ್ಳ ಬೇಕು.  ಸ್ಪಲ್ಪ ಸಮಯದ ನಂತರ ಮಾಮೂಲಿ ದೋಸೆಯಂತೆ ಮಾಡಿ ಸೇವಿಸುವುದರಿಂದ ರುಚಿ ಜೊತೆಗೆ ಆರೋಗ್ಯಕ್ಕೂ ಸಹಕಾರಿಯಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News