ಪುರುಷರ ಬೋಳು ತಲೆಗೆ ಹೆಲ್ಮೆಟ್ ಕಾರಣವಾಗುತ್ತಿದೆಯೇ ? ಹಾಗಿದ್ದರೆ ಪರಿಹಾರ ಏನು ?

ಹೆಲ್ಮೆಟ್ ಹಾಕುವುದರಿಂದ ಕೂದಲು ಉದುರಲಾರಂಭಿಸುತ್ತದೆ ಎನ್ನುವುದು ಕೆಲವರ ದೂರು.  ಹಾಗಿದ್ದರೆ ಈ ದೂರಿನ ಹಿಂದೆ ಸತ್ಯಾಂಶವಿದೆಯೇ?

Written by - Ranjitha R K | Last Updated : Aug 11, 2023, 01:04 PM IST
  • ಭಾರತದಲ್ಲಿ ಹೆಚ್ಚಿನವರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ.
  • ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಅನ್ನು ಧರಿಸಬೇಕು
  • ಹೆಲ್ಮೆಟ್ ಹಾಕುವುದರಿಂದ ಕೂದಲು ಉದುರಲಾರಂಭಿಸುತ್ತದೆ
ಪುರುಷರ ಬೋಳು ತಲೆಗೆ ಹೆಲ್ಮೆಟ್ ಕಾರಣವಾಗುತ್ತಿದೆಯೇ  ? ಹಾಗಿದ್ದರೆ ಪರಿಹಾರ ಏನು ?  title=

Can Helmet Cause Hair Loss: ಭಾರತದಲ್ಲಿ ಹೆಚ್ಚಿನವರು   ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವಾಗ ಹೆಲ್ಮೆಟ್ ಅನ್ನು ಧರಿಸಬೇಕು ಎನ್ನುವುದು ಕಾನೂನು. ಸಂಚಾರ ನಿಯಮದ ಪ್ರಕಾರ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯ. ಅದನ್ನು ಉಲ್ಲಂಘಿಸಿ ನಡೆದರೆ 1000 ರೂ. ದಂಡ ಕಟ್ಟಬೇಕಾಗುತ್ತದೆ. ಆದರೆ, ಹೆಲ್ಮೆಟ್ ಹಾಕುವುದರಿಂದ ಕೂದಲು ಉದುರಲಾರಂಭಿಸುತ್ತದೆ ಎನ್ನುವುದು ಕೆಲವರ ದೂರು.  ಹಾಗಿದ್ದರೆ ಈ ದೂರಿನ ಹಿಂದೆ ಸತ್ಯಾಂಶವಿದೆಯೇ? ಹೌದು, ಹೆಲ್ಮೆಟ್ ಧರಿಸುವುದರಿಂದ ತಲೆಯ ಕೂದಲು ಉದುರುತ್ತದೆ ಖಂಡಿತವಾಗಿಯೂ ಉದುರುತ್ತದೆ. ಆದರೆ, ಹೆಲ್ಮೆಟ್ ಧರಿಸಿಯೂ ಕೂಡಾ ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು.   ಇದಕ್ಕೂ ಮುನ್ನ ಹೆಲ್ಮೆಟ್ ಕೂದಲು ಉದುರುವಿಕೆಗೆ ಹೇಗೆ ಕಾರಣವಾಗಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. 

ಹೆಲ್ಮೆಟ್ ಕೂದಲು ಉದುರುವಿಕೆಗೆ ಹೇಗೆ ಕಾರಣವಾಗಬಹುದು? : 
1. ಹೆಲ್ಮೆಟ್ ತಲೆಯ ಮೇಲೆ ಒತ್ತಡವನ್ನು ಉಂಟುಮಾಡಬಹುದು. ಇದರಿಂದಾಗಿ ಕೂದಲಿನ ಬೇರುಗಳು ದುರ್ಬಲಗೊಳ್ಳುವ ಅಪಾಯವಿದೆ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.
2. ಹೆಲ್ಮೆಟ್‌ಗಳು ನೆತ್ತಿಯನ್ನು ಬಿಸಿಮಾಡುತ್ತದೆ. ಇದು ಬೆವರುವಿಕೆಗೆ ಕಾರಣವಾಗುತ್ತದೆ. ಹಾಗಾಗಿ ಕೂದಲಿನ ಬೇರುಗಳಲ್ಲಿ ಸೋಂಕಿನ ಅಪಾಯವನ್ನು ಹೆಚ್ಚುತ್ತದೆ. 
3. ಹೆಲ್ಮೆಟ್ ಅನ್ನು ನಿರಂತರವಾಗಿ ಧರಿಸಲಾಗುತ್ತದೆ. ಇದರಿಂದಾಗಿ ಕೂದಲಿಗೆ ಸಾಕಷ್ಟು ಆಮ್ಲಜನಕ ಸಿಗುವುದಿಲ್ಲ. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ : ಬೋಳು ತಲೆ ಸಮಸ್ಯೆಯನ್ನು ನೈಸರ್ಗಿಕವಾಗಿ ನಿವಾರಿಸುತ್ತದೆ ಈ ಒಂದು ವಸ್ತು

4. ಹೆಲ್ಮೆಟ್ ನೆತ್ತಿಯ ಮೇಲೆ ಕೊಳಕು ಮತ್ತು ಎಣ್ಣೆಯನ್ನು ಹಿಡಿದಿಟ್ಟುಕೊಳ್ಳುತ್ತದೆ.  ಇದು ಕೂದಲಿನ ಬೇರುಗಳ ಉರಿಯೂತ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು.
5. ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅಥವಾ ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಯ ಸಾಧ್ಯತೆಯನ್ನು ಕಡಿಮೆ ಮಾಡಲು ಬಯಸಿದರೆ, ಕೆಲವು ವಿಷಯಗಳನ್ನು ನೆನಪಿನಲ್ಲಿಡಿ.

ನಿಮ್ಮ ತಲೆಯ ಗಾತ್ರಕೆ ಅನುಗುಣವಾಗಿ ಸರಿಯಾದ ಗಾತ್ರದ ಹೆಲ್ಮೆಟ್ ಅನ್ನು ಆರಿಸಿ. ಉತ್ತಮ ವೆಂಟಿಲೆಶನ್ ಇರುವ ಹೆಲ್ಮೆಟ್ ಅನ್ನು ಬಳಸಿ. ಇದರಿಂದ ಸರಿಯಾದ ಪ್ರಮಾಣದ ಆಮ್ಲಜನಕವು ನಿಮ್ಮ ಕೂದಲನ್ನು ತಲುಪುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Side Effects of Almonds: ಹೆಚ್ಚು ಬಾದಾಮಿ ಸೇವಿಸಿದ್ರೆ ಏನಾಗುತ್ತೆ ಗೊತ್ತಾ..?

ಹೆಲ್ಮೆಟ್ ಅನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ. ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ. ಅಲ್ಲದೆ, ದೀರ್ಘ ಪ್ರಯಾಣದಲ್ಲಿ ದೀರ್ಘಕಾಲದವರೆಗೆ ಹೆಲ್ಮೆಟ್ ಅನ್ನು ನಿರಂತರವಾಗಿ ಧರಿಸಬೇಡಿ. ಮಧ್ಯೆ ಗಾಡಿ ನಿಲ್ಲಿಸಿ  ತಲೆಯಿಂದ ಹೆಲ್ಮೆಟ್ ತೆಗೆಯಿರಿ. 

ಕೂದಲು ಅತಿಯಾಗಿ ಉದುರುತ್ತಿದೆ ಎಂದೆನಿಸಿದರೆ ಚರ್ಮ ರೋಗ ತಜ್ಞರನ್ನು ಒಮ್ಮೆ ಸಂಪರ್ಕಿಸಿ. 

( ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.  ಅನುಸರಿಸುವ ಮೊದಲು, ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News