Chanakya Niti: ಹಾವಿನ ಈ ಒಂದು ಗುಣ ಅರಿತುಕೊಂಡರೆ ಸಾಕು, ನಿಮ್ಮನ್ನು ಕಂಡು ಎದುರಾಳಿಗಳು ಗಡಗಡ ನಡುಗುತ್ತಾರೆ

Chanakya Niti For Animals: ಮನುಷ್ಯ ಪ್ರಾಣಿಗಳ ಕೆಲ ವಿಶೇಷ ಗುಣಗಳನ್ನು ಕಲಿತು ಜೀವನದಲ್ಲಿ ಯಶಸ್ಸನ್ನು ಸಂಪಾದಿಸಬಹುದು ಎಂದು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.  

Written by - Nitin Tabib | Last Updated : Oct 30, 2022, 03:01 PM IST
  • ಜೀವನದ ಹಲವಾರು ಸನ್ನಿವೇಶಗಳ ಕುರಿತಾದ ಸಂಗತಿಗಳನ್ನು ಆಚಾರ್ಯ ಚಾಣಕ್ಯರು ತನ್ನ ನೀತಿಶಾಸ್ತ್ರದಲ್ಲಿ ಚರ್ಚಿಸಿದ್ದಾರೆ.
  • ಪ್ರಾಣಿ-ಪಕ್ಷಿಗಳ ಕೆಲ ಗುಣಗಳನ್ನು ಆರಿತು ನಾವೂ ಕೂಡ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಬಹದು.
  • ಮನುಷ್ಯ ಹಾವು, ಸಿಂಹ, ಗಿಡುಗ ಹಾಗೂ ಕತ್ತೆಯಿಂದಲ್ಲೂ ಕೂಡ ಕೆಲ ವಿಶೇಷ ಗುಣಗಳನ್ನು ಅರಿತುಕೊಳ್ಳಬಹುದು ಎಂದು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.
Chanakya Niti: ಹಾವಿನ ಈ ಒಂದು ಗುಣ ಅರಿತುಕೊಂಡರೆ ಸಾಕು, ನಿಮ್ಮನ್ನು ಕಂಡು ಎದುರಾಳಿಗಳು ಗಡಗಡ ನಡುಗುತ್ತಾರೆ title=
Chanakya Niti For Enemy

Chanakya Niti On Enemy: ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಮನುಷ್ಯ ಪ್ರಾಣಿಗಳು ಹಾಗೂ ಪಕ್ಷಿಗಳಿಂದಲೂ ಕೂಡ ಕೆಲ ವಿಶೇಷ ಗುಣಗಳನ್ನು ಅರಿತುಕೊಳ್ಳಬಹುದು ಎನ್ನಲಾಗಿದೆ. ಯಾವುದೇ ವ್ಯಕ್ತಿ ಈ ರೀತಿ ಮಾಡಿದರೆ ಯಶಸ್ಸು ಅಂತ್ಯ ವ್ಯಕ್ತಿಯ ಪಾದಕ್ಕೆ ಮುತ್ತಿಕ್ಕುತ್ತದೆ. ಒಳ್ಳೆಯ ಜ್ಞಾನ ಹಾಗೂ ಕಲಿಕೆ ಯಾವ ದೆಸೆಯಿಂದ ಬಂದರೂ ಕೂಡ ಅದನ್ನು ಹಾಗೆಯೇ ಸ್ವೀಕರಿಸಬೇಕು. ಪ್ರಾಣಿ-ಪಕ್ಷಿಗಳ ಕೆಲ ಗುಣಗಳನ್ನು ಆರಿತು ನಾವೂ ಕೂಡ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಬಹದು. ಜೀವನದ ಹಲವಾರು ಸನ್ನಿವೇಶಗಳ ಕುರಿತಾದ ಸಂಗತಿಗಳನ್ನು ಆಚಾರ್ಯ ಚಾಣಕ್ಯರು ತನ್ನ ನೀತಿಶಾಸ್ತ್ರದಲ್ಲಿ ಚರ್ಚಿಸಿದ್ದಾರೆ. ಮನುಷ್ಯ ಹಾವು, ಸಿಂಹ, ಗಿಡುಗ ಹಾಗೂ ಕತ್ತೆಯಿಂದಲ್ಲೂ ಕೂಡ ಕೆಲ ವಿಶೇಷ ಗುಣಗಳನ್ನು ಅರಿತುಕೊಳ್ಳಬಹುದು ಎಂದು ಆಚಾರ್ಯ ಚಾಣಕ್ಯರು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ.

ಹಾವು: ವ್ಯಕ್ತಿ ಯಾರ ಮುಂದೆಯೂ ಕೂಡ ತನ್ನ ದುರ್ಬಲತೆಯನ್ನು ಪ್ರದರ್ಶಿಸಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಸಾಮಾನ್ಯವಾಗಿ ಹಾವುಗಳಿಗೆ ಕಾಲುಗಳು ಇರುವುದಿಲ್ಲ. ಇದೇ ಕಾರಣದಿಂದ ಅದು ತೆವಳುತ್ತ ಸಾಗುತ್ತದೆ ಮತ್ತು ತನ್ನ ಬೇಟೆಯನಾಡುತ್ತದೆ. ಆದರೆ ಕಾಲುಗಳಿಲ್ಲದ ಹೊರತಾಗಿಯೂ ಕೂಡ ಅದು ತನ್ನ ದುರ್ಬಲತೆಯನ್ನು ಬಹಿರಂಗಪಡಿಸುವುದಿಲ್ಲ. ತೆವಳುವುದನ್ನೇ ಹಾವು ತನ್ನ ಶಕ್ತಿಯನ್ನಾಗಿಸುತ್ತದೆ. ಹಾವಿನ ವೇಗ ಹಾಗೂ ಅದರ ವಿಷದ ಭಯದಿಂದಲೇ ಹಲವರು ಗಡಗಡ ನಡುಗುತ್ತಾರೆ.

ಸಿಂಹ: ಆಚಾರ್ಯ ಚಾಣಕ್ಯರ ಪ್ರಕಾರ ಸಿಂಹದಿಂದ ನಾವು ಏಕಾಗ್ರತೆಯನ್ನು ಕಲಿಯಬೇಕು ಎನ್ನಲಾಗಿದೆ. ಕೆಲಸ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಸಿಂಹ ಆ ಕೆಲಸವನ್ನು ತುಂಬಾ ಏಕಾಗ್ರತೆಯಿಂದ ಮಾಡುತ್ತದೆ. ಅದು ಕೆಲಸದಲ್ಲಿ ಎಂದಿಗೂ ಕೂಡ ಆಲಸ್ಯವನ್ನು ತೋರುವುದಿಲ್ಲ. ಹೀಗಾಗಿ ನಾವು ಯಾವುದೇ ಕೆಲಸವನ್ನು ಚಿಕ್ಕ ಅಥವಾ ದೊಡ್ಡ ಕೆಲಸ ಎಂದು ಭಾವಿಸಬಾರದು. ಸಿಂಹದ ಈ ಗುಣವನ್ನು ಅರಿತು ಹಾವು ಯಶಸ್ಸನ್ನು ಸಂಪಾದಿಸಬಹುದು.

ಗಿಡುಗ: ಚಾಣಕ್ಯ ನೀತಿಯ ಪ್ರಕಾರ ಗಿಡುಗ ನಮಗೆ ಗುರಿಯನ್ನು ಹೇಗೆ ತಪ್ಪಬಾರದು ಎಂಬುದನ್ನು ಹೇಳಿಕೊಡುತ್ತದೆ ಎನ್ನಲಾಗಿದೆ. ಏಕೆಂದರೆ, ಗಿಡುಗ ತನ್ನ ಗುರಿಯನ್ನು ಎಂದಿಗೂ ಕೂಡ ತಪ್ಪುವುದಿಲ್ಲ. ಇದಲ್ಲದೆ, ತರಾತುರಿಯಲ್ಲಿ ಅದು ಯಾವುದೇ ನಿರ್ಧಾರವನ್ನು ಮಾಡುವುದಿಲ್ಲ. ಎಂತಹ ಪರಿಸ್ಥಿತಿ ಎದುರಾದರೂ ಕೂಡ ಸಾಕಷ್ಟು ಯೋಚಿಸಿಯೇ ಮುಂದಕ್ಕೆ ಹೆಜ್ಜೆ ಇಡಬೇಕು, ಆತುರತೆಯನ್ನು ತೋರಬಾರದು.

ಇದನ್ನೂ ಓದಿ-Chanakya Niti: ಈ ವಿಷಯಗಳಲ್ಲಿ ಪುರುಷರು ಮಹಿಳೆಯರ ಮುಂದೆ ಸೋಲೋಪ್ಪಿಕೊಳ್ಳಲೇಬೇಕು!

ಕತ್ತೆ: ಕತ್ತೆಯಂತೆ ನಾವು ಯಾವುದೇ ರೀತಿಯ ಗೊತ್ತು-ಗುರಿ ಇಲ್ಲದೆ ಕೆಲಸ ಮಾಡಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಜೀವನದಲ್ಲಿ ಗುರಿಯನ್ನು ನಿರ್ಧರಿಸುವುದು ತುಂಬಾ ಮುಖ್ಯ. ಇದರಿಂದ ನಿಮ್ಮ ಪ್ರತಿಭೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಇಲ್ಲದೆ ಹೋದರೆ, ಜೀವನವಿಡೀ ಇತರರ ಗುಲಾಮರಾಗಿಯೇ ಉಳಿಯಬೇಕಾಗುತ್ತದೆ.

ಇದನ್ನೂ ಓದಿ-Chanakya Niti: ಬೇರೆಯವರಿಗೆ ಬಿಟ್ಹಾಕಿ, ನಿಮ್ಮ ಹೆಂಡ್ತಿಗೂ ಈ ವಿಷಯಗಳನ್ನು ಹೇಳ್ಬೇಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News