Chanakya Niti: ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಜನರೊಂದಿಗೆ ವ್ಯವಹರಿಸಿ, ಇಲ್ದಿದ್ರೆ...!

Chanakya Niti: ಓರ್ವ ಒಳ್ಳೆಯ ವ್ಯಕ್ತಿಯನ್ನು ಹೇಗೆ ಗುರುತಿಸಬೇಕು ಎಂಬುದನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ.

Written by - Nitin Tabib | Last Updated : May 2, 2022, 11:34 PM IST
  • ಆಚಾರ್ಯ ಚಾಣಕ್ಯರು ತಮ್ಮ ನೀತಿಯ ಮೂಲಕ ಜೀವನದ ಹಲವು ಮಹತ್ವದ ಸಂಗತಿಗಳ ಕುರಿತು ಮಾತನಾಡಿದ್ದಾರೆ.
  • ಸುಖ-ಸಮೃದ್ಧಿಯ ವಿಷಯವಾಗಲಿ ಅಥವಾ ಸುಖಮಯ ಜೀವನದ ಗುಟ್ಟಾಗಲಿ,
  • ಪ್ರತಿಯೊಂದು ವಿಷಯದ ಬಗ್ಗೆ ಸಾಮಾನ್ಯರಿಗೆ ಶಿಕ್ಷಣ ನೀಡುವ ಕೆಲಸವನ್ನು ಚಾಣಕ್ಯರು ಮಾಡಿದ್ದಾರೆ.
Chanakya Niti: ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಜನರೊಂದಿಗೆ ವ್ಯವಹರಿಸಿ, ಇಲ್ದಿದ್ರೆ...! title=
Chanakya Niti

Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿಯ ಮೂಲಕ ಜೀವನದ ಹಲವು ಮಹತ್ವದ ಸಂಗತಿಗಳ ಕುರಿತು ಮಾತನಾಡಿದ್ದಾರೆ. ಅದು ಸುಖ-ಸಮೃದ್ಧಿಯ ವಿಷಯವಾಗಲಿ ಅಥವಾ ಸುಖಮಯ ಜೀವನದ ಗುಟ್ಟಾಗಲಿ, ಪ್ರತಿಯೊಂದು ವಿಷಯದ ಬಗ್ಗೆ ಸಾಮಾನ್ಯರಿಗೆ ಶಿಕ್ಷಣ ನೀಡುವ ಕೆಲಸವನ್ನು ಚಾಣಕ್ಯರು ಮಾಡಿದ್ದಾರೆ. ಇದಲ್ಲದೆ ವ್ಯಕ್ತಿಯ ಅವನತಿಗೆ ಕಾರಣವಾಗುವ ಕೆಲ ವಿಷಯಗಳ ಬಗ್ಗೆಯೂ ಕೂಡ ಎಚ್ಚರಿಕೆವಹಿಸುವಂತೆ ಆಚಾರ್ಯ ಚಾಣಕ್ಯರು ಸಲಹೆ ನೀಡಿದ್ದಾರೆ.

ಚಾಣಕ್ಯ ನೀತಿಯ ಈ ಭಾಗದಲ್ಲಿ, ಇಂದು ನಾವು ಇದೇ ರೀತಿಯ ಸಂಗತಿಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ, ಇವುಗಳಲ್ಲಿ ಆಚಾರ್ಯ ಚಾಣಕ್ಯರು ಒಬ್ಬ ವ್ಯಕ್ತಿ ಅಪ್ಪಟ ಚಿನ್ನದನ್ತಿದ್ದಾನೆ ಎಂದು ಗುರುತಿಸುವುದು ಹೇಗೆ ಎಂಬುದನ್ನು ಹೇಳಿದ್ದಾರೆ. ಏಕೆಂದರೆ ನೈಜ ಚಿನ್ನವನ್ನು ಕಲ್ಲಿನ ಮೇಲೆ ಉಜ್ಜುವ ಮೂಲಕ ಮಾತ್ರ ನೀವು ಗುರುತಿಸಬಹುದು, ಆದರೆ, ಕೇವಲ ಓರ್ವ ವ್ಯಕ್ತಿಯನ್ನು ನೋಡುವ ಮೂಲಕ ಅವನ ಉದ್ದೇಶವನ್ನು ನೀವು ತಿಳಿಯಲು ಸಾಧ್ಯವಿಲ್ಲ. ಹಾಗಾದರೆ ಜಿಜವಾದ  ವ್ಯಕ್ತಿಯನ್ನು ಗುರುತಿಸುವುದು ಹೇಗೆ ಎಂಬುದನ್ನೊಮ್ಮೆ ತಿಳೀದುಕೊಳ್ಳೋಣ ಬನ್ನಿ,

ಕರ್ಮ
ತಪ್ಪು ದಾರಿಯ ಮೂಲಕ ಹಣ ಸಂಪಾದಿಸುವ ಅಥವಾ ಕೆಟ್ಟ ಅಭ್ಯಾಸಗಳ ಹಿಡಿತದಲ್ಲಿರುವ ವ್ಯಕ್ತಿಯಿಂದ ಆದಷ್ಟು ದೂರವಿರಿ. ಇದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಡುವಳಿಕೆ
ವ್ಯಕ್ತಿಯ ನಡವಳಿಕೆಯು ಅವನ ಗುರುತನ್ನು ಬಹಿರಂಗಪಡಿಸುತ್ತದೆ. ನಡತೆಯಲ್ಲಿ ಪರಿಶುದ್ಧ ವ್ಯಕ್ತಿ ಯಾರ ಬಗ್ಗೆಯೂ ಕೆಟ್ಟ ಭಾವನೆಗಳನ್ನು ಹೊಂದಿರುವುದಿಲ್ಲ ಮತ್ತು ಕೆಟ್ಟ ಕಾರ್ಯಗಳಿಂದ ದೂರ ಉಳಿಯುತ್ತಾನೆ. ಇಂತಹ ವ್ಯಕ್ತಿಗಳು ಸಹ ನಿಷ್ಠೆಯುಳ್ಳವರಾಗಿರುತ್ತಾರೆ.

ತ್ಯಾಗ
ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಇತರರ ಸಂತೋಷದಲ್ಲಿ ಜೊತೆಯಾಗಿ ನಿಂತು, ದುಃಖದಲ್ಲಿಯೂ ಕೂಡ ಆತ ಅದೇ ರೀತಿ ಸಾಥ್ ನೀಡಿದರೆ, ಆ ವ್ಯಕ್ತಿ ಖಂಡಿತವಾಗಿಯೂ ಓರ್ವ ಅಪ್ಪಟ ಚಿನ್ನ ಎಂಬುದನ್ನು ತಿಳಿದುಕೊಳ್ಳಿ. ಒಳ್ಳೆಯ ಸಮಯದಲ್ಲಿ ಜೊತೆಯಾಗಿ ನಿಂತು ನಗುವ ಮತ್ತು ದುಃಖದ ಸಮಯದಲ್ಲಿ ಓಡಿ ಹೋಗುವವರು ಧೂರ್ತ ವ್ಯಕ್ತಿಗಳಾಗಿರುತ್ತಾರೆ.

ಇದನ್ನೂ ಓದಿ-Akshaya Tritiya 2022: ಅಕ್ಷಯ ತೃತಿಯಾ ದಿನ ಹಲವು ದಶಕಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ ಈ ಮಹಾಯೋಗ

ಗುಣ
ಸುಳ್ಳು ಹೇಳುವ, ದುರಹಂಕಾರವನ್ನು ತೋರುವ, ಇತರರನ್ನು ಅವಮಾನಿಸುವ ವ್ಯಕ್ತಿಗಳು ಅವಗುಣಗಳ ಶ್ರೇಣಿಗೆ ಸೇರುತ್ತಾರೆ  ಮತ್ತು ಇಂತಹ ಗುಣಗಳು ಯಾವುದೇ ವ್ಯಕ್ತಿಯಲ್ಲಿ ಕಂಡುಬಂದರೆ, ತಕ್ಷಣವೇ ಅವರನ್ನು ದೂರವಿಡಿ. ಏಕೆಂದರೆ ಅವರು ನಿಮ್ಮ ಬೆನ್ನ ಹಿಂದೆ ನಿಮಗೆ ಕೇಡನ್ನು ಬಯಸಲು ಹಿಂಜರಿಯುವುದಿಲ್ಲ.

ಇದನ್ನೂ ಓದಿ-Akshaya Tritiya 2022: ಅಕ್ಷಯ ತೃತಿಯಾ ದಿನ ದೇವಿ ಲಕ್ಷ್ಮಿಯನ್ನು ಈ ರೀತಿ ಪ್ರಸನ್ನಗೊಳಿಸಿ, ವರ್ಷವಿಡಿ ಧನವೃಷ್ಟಿ ಗ್ಯಾರಂಟಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News