ಮುಂದಿನ ಐದು ದಿನಗಳಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ , ಇರಲಿದೆ ಶುಕ್ರನ ವಿಶೇಷ ಕೃಪೆ

 ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಮುಂಬರುವ 5 ದಿನಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಸಂಪತ್ತಿನ ಅಂಶವಾದ ಶುಕ್ರ ಗ್ರಹವು ಮುಂಬರುವ 5 ದಿನಗಳವರೆಗೆ  ಈ ರಾಶಿಯವರ ಜೀವನದಲ್ಲಿ ಸಂತೋಷದ ಹೊಳೆ ಹರಿಸಲಿದ್ದಾನೆ. 

Written by - Ranjitha R K | Last Updated : Mar 26, 2022, 11:22 AM IST
  • ಮುಂಬರುವ 5 ದಿನಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರ
  • ಮೇಷ ರಾಶಿಯವರ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ.
  • ಕರ್ಕಾಟಕ ರಾಶಿಯವರ ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿದೆ
ಮುಂದಿನ ಐದು ದಿನಗಳಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ , ಇರಲಿದೆ ಶುಕ್ರನ ವಿಶೇಷ ಕೃಪೆ  title=
ಮುಂಬರುವ 5 ದಿನಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರ (file photo)

ಬೆಂಗಳೂರು : ಶುಕ್ರ ಸಂಪತ್ತಿಗೆ ಕಾರಣವಾದ ಗ್ರಹ ಎಂದು ಹೇಳಲಾಗುತ್ತದೆ. ಶುಕ್ರ ಗ್ರಹವು ಶುಭವಾಗಿದ್ದರೆ, ವ್ಯಕ್ತಿಯ ಅದೃಷ್ಟ ಕೂಡಾ ಬೆಳಗುತ್ತದೆ (Venus Transit). ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮಾರ್ಚ್ 31 ರಂದು ಶುಕ್ರ ಗ್ರಹ ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ. ಶುಕ್ರ ತನ್ನ ರಾಶಿಯನ್ನು ಬದಲಾಯಿಸುವ ಮೊದಲು ಕೆಲವು ರಾಶಿಚಕ್ರ ಚಿಹ್ನೆಗಳು ಉತ್ತಮ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ (Venus transit effects). ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಮುಂಬರುವ 5 ದಿನಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. ಸಂಪತ್ತಿನ ಅಂಶವಾದ ಶುಕ್ರ ಗ್ರಹವು ಮುಂಬರುವ 5 ದಿನಗಳವರೆಗೆ  ಈ ರಾಶಿಯವರ ಜೀವನದಲ್ಲಿ ಸಂತೋಷದ ಹೊಳೆ ಹರಿಸಲಿದ್ದಾನೆ. 

ಮೇಷ :
ನಿಮ್ಮ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ.  ಪ್ರತಿಷ್ಠೆ ಹೆಚ್ಚಾಗಬಹುದು. ವಾಹನವನ್ನು ಖರೀದಿಸಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ವಹಿವಾಟಿನಿಂದ ಉತ್ತಮ ಲಾಭವಿರುತ್ತದೆ. ಲಕ್ಷ್ಮೀ ಕೃಪೆ (Godess Lakshmi blessings) ಅಧಿಕವಾಗಿ ಇರುತ್ತದೆ.

ಇದನ್ನೂ ಓದಿ : Guru Uday: ಇಂದಿನಿಂದ ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ

ಮಿಥುನ : 
ಉದ್ಯೋಗಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು. ಆದಾಯದಲ್ಲಿ  ಹೆಚ್ಚಳವಾಗಲಿದೆ. ಇದರಿಂದ ಹಣಕಾಸಿನ ಸಮಸ್ಯೆಗಳು ಪರಿಹಾರವಾಗಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಇದರಿಂದಾಗಿ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ (Venus transit 2022). ಈ ಸಮಯವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವರದಾನಕ್ಕಿಂತ ಕಡಿಮೆಯಿಲ್ಲ. ಈ ಅವಧಿಯಲ್ಲಿ ಹೂಡಿಕೆ ಲಾಭದಾಯಕವಾಗಿರುತ್ತದೆ.
ಆರೋಗ್ಯ ಚೆನ್ನಾಗಿರುತ್ತದೆ.

ಕರ್ಕಾಟಕ ರಾಶಿ : 
ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ. ಪ್ರಯಾಣದಿಂದ ಲಾಭದ ಸಾಧ್ಯತೆ ಇರುತ್ತದೆ. ಆದಾಯ ಹೆಚ್ಚಾಗಬಹುದು (Venus transit effects). ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.  ಕೆಲಸದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಮಯವು ಅನುಕೂಲಕರವಾಗಿದೆ.

ಇದನ್ನೂ ಓದಿ : ಈ ದಿನಾಂಕದಂದು ಜನಿಸಿದವರಿಗೆ ಮುಂದಿನ ವಾರ ಭಾರೀ ಧನ ಹಾನಿಯಾಗಲಿದೆ

ವೃಶ್ಚಿಕ ರಾಶಿ :
ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲಿರುವಿರಿ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದಲ್ಲಿ ಪ್ರಗತಿಯ ಅವಕಾಶಗಳನ್ನು ಪಡೆಯುತ್ತೀರಿ. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವ್ಯಾಪಾರಿಗಳು ಲಾಭ ಗಳಿಸಬಹುದು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ದೊರೆಯುತ್ತದೆ. ಆರ್ಥಿಕ ಲಾಭ ಇರುತ್ತದೆ.

ಮೀನ :
ಪ್ರತಿಷ್ಠೆ ಮತ್ತು ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ಸಾಧ್ಯತೆಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಮೆಚ್ಚುತ್ತಾರೆ. 

ಇದನ್ನೂ ಓದಿ : Shani Sadhe Sati Remedies: ಸಾಡೇಸಾತಿಯಲ್ಲಿಯೂ ಶನಿಯ ಕೃಪೆಗೆ ಪಾತ್ರರಾಗಲು ಶನಿವಾರದಂದು ತಪ್ಪದೇ ಈ ಕೆಲಸ ಮಾಡಿ

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು  ನಂಬಿಕೆಗಳು ಮತ್ತು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News