ಈ ದಿನಾಂಕದಂದು ಜನಿಸಿದವರಿಗೆ ಮುಂದಿನ ವಾರ ಭಾರೀ ಧನ ಹಾನಿಯಾಗಲಿದೆ

ಮುಂಬರುವ ವಾರವು ಹೇಗಿರಲಿದೆ ಎನ್ನುವುದನ್ನು ಜನ್ಮ ದಿನಾಂಕದ ಮೂಲಕ  ಕಂಡುಹಿಡಿಯಬಹುದು. ಸಂಖ್ಯಾಶಾಸ್ತ್ರದಲ್ಲಿ, ಭವಿಷ್ಯವನ್ನು  ಮೂಲಾಂಕದ  (ಹುಟ್ಟಿದ ದಿನಾಂಕದ ಮೊತ್ತ) ಆಧಾರದ ಮೇಲೆ ಹೇಳಲಾಗುತ್ತದೆ. 

Written by - Ranjitha R K | Last Updated : Mar 26, 2022, 08:15 AM IST
  • ಮುಂದಿನ ವಾರ ಮೂಲಾಂಕ 1 ಇರುವವರಿಗೆ ಒಳ್ಳೆಯದು
  • ಮೂಲಾಂಕ 4 ಹೊಂದಿರುವ ಜನರು ಜಾಗರೂಕರಾಗಿರಬೇಕು
  • ಹಣದ ನಷ್ಟ ಸಂಭವಿಸಬಹುದು
ಈ ದಿನಾಂಕದಂದು ಜನಿಸಿದವರಿಗೆ ಮುಂದಿನ ವಾರ ಭಾರೀ ಧನ ಹಾನಿಯಾಗಲಿದೆ   title=
ಮುಂದಿನ ವಾರ ಮೂಲಾಂಕ 1 ಇರುವವರಿಗೆ ಒಳ್ಳೆಯದು (file photo)

ನವದೆಹಲಿ :  ಸಂಖ್ಯಾಶಾಸ್ತ್ರದ (Numerology) ಪ್ರಕಾರವೂ ವ್ಯಕ್ತಿಯ ಭವಿಷ್ಯವನ್ನು ತಿಳಿಯಬಹುದು. ಜನ್ಮ ದಿನಕ್ಕೆ ಅನುಗುಣವಾಗಿ ವ್ಯಕ್ತಿಯ ಗುಣ ಸ್ವಭಾವ ತಿಳಿಯಬಹುದು. ಹಾಗೆಯೇ ಮುಂದಿನ ದಿನಗಳಲ್ಲಿ ಎದುರಾಗುವ ಲಾಭ ನಷ್ಟಗಳ ಬಗ್ಗೆಯೂ ತಿಳಿದುಕೊಳ್ಳಬಹುದು.   ಮುಂಬರುವ ವಾರ (ಮಾರ್ಚ್ 27 ರಿಂದ ಏಪ್ರಿಲ್ 2 ರವರೆಗೆ) ಮೂಲಾಂಕ  1 ರಿಂದ 9 ರವರೆಗಿನ ಜನರಿಗೆ ಹೇಗಿರುತ್ತದೆ ನೋಡೋಣ ( Future by radix number) .

ಮೂಲಾಂಕ 1 : ಈ ವಾರ  ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಕೆಲಸದ ಸ್ಥಳದಲ್ಲಿ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ.  ಪ್ರಯಾಣಕ್ಕಿಂತ ಮುನ್ನ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಆರ್ಥಿಕ ನಷ್ಟದ ಸಾಧ್ಯತೆಯಿದೆ (Financial loss). ವಿದ್ಯಾರ್ಥಿಗಳಿಗೆ ಈ ವಾರ ಉತ್ತಮವಾಗಿರುತ್ತದೆ.  ಶಿಕ್ಷಣದಲ್ಲಿ ಯಶಸ್ಸು ಇರುತ್ತದೆ.
 ಅದೃಷ್ಟದ ಬಣ್ಣ: ತಿಳಿ ನೀಲಿ ಅದೃಷ್ಟ ಸಂಖ್ಯೆ: 2
 
 ಇದನ್ನೂ ಓದಿ : Shani Sadhe Sati Remedies: ಸಾಡೇಸಾತಿಯಲ್ಲಿಯೂ ಶನಿಯ ಕೃಪೆಗೆ ಪಾತ್ರರಾಗಲು ಶನಿವಾರದಂದು ತಪ್ಪದೇ ಈ ಕೆಲಸ ಮಾಡಿ

ಮೂಲಾಂಕ 2 : ಈ ವಾರ ನೀವು ಭಾವುಕರಾಗಿರುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಈ ವಾರವು ಸಾಮಾನ್ಯವಾಗಿರುತ್ತದೆ. ಸಮಾರಂಭಗಳು-ಪಾರ್ಟಿ ಇತ್ಯಾದಿಗಳಲ್ಲಿ ಜನರನ್ನು ನಿಮ್ಮ ಕಡೆಗೆ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತೀರಿ. ಹೊಟ್ಟೆ, ಗಂಟಲು ಮತ್ತು ನರಕ್ಕೆ  ಸಂಬಂಧಿಸಿದ ರೋಗಗಳಿಂದ ತೊಂದರೆಗೊಳಗಾಗಬಹುದು ( Future by radix number). 
ಅದೃಷ್ಟ ಬಣ್ಣ: ಕೆಂಪು ಅದೃಷ್ಟ ಸಂಖ್ಯೆ: 9

ಮೂಲಾಂಕ 3 : ಈ ವಾರ, ಹಠಾತ್ ಹಣದ ಲಾಭದಿಂದ ಮನಸ್ಸು ಸಂತೋಷವಾಗಿರುತ್ತದೆ. ಕುಟುಂಬದೊಂದಿಗೆ ಸಮಾರಂಭ ಅಥವಾ ಸಣ್ಣ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿವೆ. ಸೂರ್ಯ  ದೋಷದ ( Surya Dosh) ಕಾರಣದಿಂದ ತಂದೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 
ಅದೃಷ್ಟದ ಬಣ್ಣ: ತಿಳಿ ಗುಲಾಬಿ ಅದೃಷ್ಟ ಸಂಖ್ಯೆ: 6

ಮೂಲಾಂಕ  4 : ಕೋಪದಲ್ಲಿ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ.  ಕೊಟ್ಟ ಹಣವನ್ನು ಸಕಾಲಕ್ಕೆ ವಾಪಸ್ ಪಡೆಯುವುದು ಸಾಧ್ಯವಾಗದೆ ತೊಂದರೆ ಅನುಭವಿಸಬೇಕಾಗುತ್ತದೆ. ಕ್ರಿಮಿ ಕೀಟಗಳ ಕಡಿತ ಇತ್ಯಾದಿಗಳಿಂದ ಆರೋಗ್ಯದ ಬಗ್ಗೆ ಎಚ್ಚರವಿರಲಿ (Health problem).
ಅದೃಷ್ಟದ ಬಣ್ಣ: ತಿಳಿ ನೇರಳೆ ಅದೃಷ್ಟ ಸಂಖ್ಯೆ: 5

ಇದನ್ನೂ ಓದಿ: Palmistry : ಈ ರೀತಿ 'ಉಗುರು'ಗಳಿರುವವರು ಆರ್ಥಿಕವಾಗಿ ಭಾರಿ ಅದೃಷ್ಟವಂತರಂತೆ!

ಮೂಲಾಂಕ 5:   ಈ ವಾರ ಅದೃಷ್ಟವು ಬೆಂಬಲ ನೀಡುತ್ತದೆ ಮತ್ತು ಆರ್ಥಿಕ ಪ್ರಗತಿಯಾಗಲಿದೆ.  ಕುಟುಂಬದಲ್ಲಿ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಹೊಸ ಉತ್ಸಾಹ ಕಂಡು ಬರಲಿದೆ. ಆರೋಗ್ಯವು ಉತ್ತಮವಾಗಿರುತ್ತದೆ.  
 ಅದೃಷ್ಟ ಬಣ್ಣ: ಬಿಳಿ ಅದೃಷ್ಟ ಸಂಖ್ಯೆ: 1
 
ಮೂಲಾಂಕ 6 :  ಈ ವಾರ ಮನೆಯಲ್ಲಿ ಖರ್ಚು ಹೆಚ್ಚಾಗುತ್ತದೆ. ಇದು ನಿಮ್ಮ ಬಜೆಟ್ ಅನ್ನು ಹಾಳು ಮಾಡುತ್ತದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಪಿತ್ತದೋಷದಿಂದ ಆರೋಗ್ಯ ಹದಗೆಡುವ ಸಂಭವವಿದ್ದು, ಎಚ್ಚರದಿಂದಿರಿ.
ಅದೃಷ್ಟ ಬಣ್ಣ: ಹಳದಿ ಅದೃಷ್ಟ ಸಂಖ್ಯೆ: 5

ಮೂಲಾಂಕ 7 :  ಈ ವಾರ ಹಣಕಾಸಿನ ವಿಷಯಗಳಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಆದರೆ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಸಹೋದರಿ ಅಥವಾ ಚಿಕ್ಕಮ್ಮನ ಕಡೆಯಿಂದ ಬರುವ ಸುದ್ದಿ ನಿಮ್ಮನ್ನು ಭಾವುಕರನ್ನಾಗಿಸಬಹುದು.  ಸಂಗಾತಿಯ ಹದಗೆಡುತ್ತಿರುವ ಮನಸ್ಥಿತಿಯಾ ಕಡೆಗೆ ಗಮನ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಸಂಗಾತಿಯು ಖಿನ್ನತೆಗೆ ಒಳಗಾಗುವ ಸಾಧ್ಯತೆಯಿದೆ.
ಅದೃಷ್ಟದ ಬಣ್ಣ: ತಿಳಿ ಕೆಂಪು ಅದೃಷ್ಟ ಸಂಖ್ಯೆ: 1

ಇದನ್ನೂ ಓದಿ: ಸಾಯಂಕಾಲದ ವೇಳೆ ಮಾಡುವ ಈ ತಪ್ಪುಗಳಿಂದ ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀ

ಮೂಲಾಂಕ 8 : ನಿಮ್ಮ ಕಠಿಣ ಪರಿಶ್ರಮದಿಂದ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಕುಟುಂಬದಲ್ಲಿ ಖರ್ಚುಗಳಿದ್ದರೂ ಸಹ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುವಿರಿ. ವಾರದ ಮಧ್ಯದಲ್ಲಿ ಉಡುಗೊರೆ ಸಿಗುವ ಸಾಧ್ಯತೆ ಇದೆ.
ಅದೃಷ್ಟದ ಬಣ್ಣ: ತಿಳಿ ನೇರಳೆ ಅದೃಷ್ಟ ಸಂಖ್ಯೆ: 3

ಮೂಲಾಂಕ 9 : ಈ ವಾರ ಶಾಪಿಂಗ್‌ನಲ್ಲಿ ನಿರತರಾಗಿರುತ್ತಾರೆ.  ಆದರೆ ಪ್ರೀತಿಯ ಕೊರತೆ ಕಾಡಲಿದೆ. ರಕ್ತದಲ್ಲಿ ದೋಷ ಉಂಟಾಗುವ ಸಂಭವದಿಂದ ಆರೋಗ್ಯ ಕೆಡಬಹುದು. ಈ ವಾರ ಬ್ರಹ್ಮಚರ್ಯವನ್ನು ಅನುಸರಿಸಿ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.   
ಅದೃಷ್ಟದ ಬಣ್ಣ: ಬಿಳಿ ಅದೃಷ್ಟ ಸಂಖ್ಯೆ: 5

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು  ನಂಬಿಕೆಗಳು ಮತ್ತು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News