Shani Sadhe Sati Remedies: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ ನಲ್ಲಿ ಶನಿದೇವನು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಶನಿದೇವನು ತನ್ನ ರಾಶಿಯನ್ನು ಬದಲಾಯಿಸಿ ಕುಂಭ ರಾಶಿಗೆ ಬರುತ್ತಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಸಾಡೇ ಸಾತಿ ಮತ್ತು ಧೈಯಾ ಪರಿಣಾಮವೂ ಬದಲಾಗುತ್ತದೆ. ಆದರೆ, ಶನಿವಾರದಂದು ಕೆಲವು ಸರಳ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಶನಿಯ ವಕ್ರದೃಷ್ಟಿಯಿಂದ ಪಾರಾಗಬಹುದು ಎಂದು ನಂಬಲಾಗಿದೆ. ಇದರೊಂದಿಗೆ, ಜೀವನದ ತೊಂದರೆಗಳನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ಶನಿ ದೇವನನ್ನು ಮೆಚ್ಚಿಸಲು ಶನಿವಾರದಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯಲು ಮುಂದೆ ಓದಿ...
ಸಾಡೇಸಾತಿಯಲ್ಲಿಯೂ ಶನಿಯ ಕೃಪೆಗೆ ಪಾತ್ರರಾಗಲು ಶನಿವಾರದಂದು ತಪ್ಪದೇ ಈ ಕೆಲಸ ಮಾಡಿ :
ಶನಿ ಯಂತ್ರ ಪೂಜೆ:
ಶನಿ ಯಂತ್ರವನ್ನು ಪೂಜಿಸುವುದರಿಂದ ಶನಿ ದೋಷದಿಂದ (Shani Dosh) ಮುಕ್ತಿ ಪಡೆಯಬಹುದು. ಇದಕ್ಕಾಗಿ ಶನಿವಾರ ಸ್ನಾನದ ನಂತರ ಶುಭ್ರವಾದ ಕಪ್ಪು ಬಟ್ಟೆಯನ್ನು ಧರಿಸಿ. ಇದಾದ ನಂತರ ನೇಮ ನಿಷ್ಠೆಯಿಂದ ಶನಿದೇವನನ್ನು ಪೂಜಿಸಿ. ಸಾಧ್ಯವಾದರೆ ಶನಿ ಯಂತ್ರವನ್ನು ಪೂಜಿಸಿ. ಈ ರೀತಿ ಮಾಡುವುದರಿಂದ ಉದ್ಯೋಗ, ವ್ಯಾಪಾರ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ- Shani Sade Sati Upay: ಸಾಡೇ ಸಾತಿ ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ
ಭಗವಾನ್ ಶಿವನ ಆರಾಧನೆ:
ಶಾಸ್ತ್ರಗಳ ಪ್ರಕಾರ ಶಿವನು ಶನಿಯ ಗುರು. ಇಂತಹ ಪರಿಸ್ಥಿತಿಯಲ್ಲಿ ಶನಿವಾರದಂದು ಶಿವನನ್ನು ಪೂಜಿಸುವುದರಿಂದ ಶನಿದೇವನ ಆಶೀರ್ವಾದವೂ ದೊರೆಯುತ್ತದೆ. ಇದಲ್ಲದೇ ಶನಿವಾರವನ್ನು ಹನುಮನ ಆರಾಧನೆಗೆ ವಿಶೇಷವೆಂದು ಪರಿಗಣಿಸಲಾಗಿದೆ. ಶನಿವಾರದಂದು ಹನುಮಾನ್ ಚಾಲೀಸಾವನ್ನು (Hanuman Chalisa) ಪಠಿಸುವುದರಿಂದ ಶನಿಯ ಪ್ರತಿಯೊಂದು ಕಾಟದಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ಜೀವನದಲ್ಲಿ ಪ್ರಗತಿಯ ಹಾದಿಯು ಸುಲಭವಾಗಲಿದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Shani Transit: 22 ವರ್ಷಗಳ ನಂತರ ಈ ರಾಶಿಯವರ ಮೇಲೆ ಸಾಡೇ ಸಾತಿ ಶನಿ ಪ್ರಭಾವ
ಎಳ್ಳು ಅಥವಾ ಸಾಸಿವೆ ಎಣ್ಣೆ ದಾನ:
ಶನಿವಾರದಂದು ಎಳ್ಳು ಅಥವಾ ಸಾಸಿವೆ ಎಣ್ಣೆಯನ್ನು ದಾನ ಮಾಡುವುದರಿಂದ ಶನಿಯ ಕೋಪ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಶನಿವಾರದಂದು ಕಪ್ಪು ನಾಯಿಗೆ ಸಾಸಿವೆ ಎಣ್ಣೆಯಿಂದ ತಯಾರಿಸಿದ ಖಾದ್ಯ ತಿನ್ನಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಇದಲ್ಲದೇ ಶನಿವಾರದಂದು ಶನಿದೇವಾಲಯದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಶನಿದೋಷ ನಿವಾರಣೆಯಾಗುತ್ತದೆ ಎನ್ನಲಾಗುವುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.