Jatoli Shiva Temple: ಈ ಸ್ಫಟಿಕ ಮಣಿ ಶಿವಲಿಂಗದ ದೇವಸ್ಥಾನಕ್ಕಿದೆ 11 ಅಡಿ ಎತ್ತರದ ವಿಶಾಲ ಚಿನ್ನದ ಕಳಸ

Jatoli Shiva Temple - ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಭಾರತ ದೇಶದಲ್ಲಿ ಹಲವು ನಿಗೂಢ ದೇವಸ್ಥಾನಗಳಿವೆ. ಇಂದು ಅಂತಹುದೇ ಒಂದು ದೇವಸ್ಥಾನದ ಬಗ್ಗೆ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಈ ದೇವಸ್ಥಾನದ ಗೋಡೆಗಳಿಗೆ ಕಲ್ಲುಗಳಿಂದ ತಟ್ಟುವುದರಿಂದ ಡಮರುಗದ ನಾದ ಹೊರಹೊಮ್ಮುತ್ತದೆ (Hear Damru Sound From Temple Rocks). ಹಾಗಾದರೆ ಬನ್ನಿ ಇದರ ಹಿಂದಿನ ರಹಸ್ಯವೇನು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.

Written by - Nitin Tabib | Last Updated : Mar 21, 2021, 05:34 PM IST
  • ಈ ವಿಶಾಲಕಾಯ ದೇವಸ್ಥಾನದ ನಾಲ್ಕೂ ಕಡೆಗಳಲ್ಲಿ ದೇವ-ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
  • ಈ ದೇವಸ್ಥಾನದ ಬಂಡೆಗಳಿಗೆ ತಟ್ಟುವುದರಿಂದ ಡಮರುಗದ ನಾದ ಹೊರಹೊಮ್ಮುತ್ತದೆ.
  • ಈ ದೇವಸ್ಥಾನದ ಒಳಗಡೆ ಸ್ಪಟಿಕ ಮಣಿ ಶಿವಲಿಂಗ ವಿರಾಜಮಾನವಾಗಿದೆ.
Jatoli Shiva Temple: ಈ ಸ್ಫಟಿಕ ಮಣಿ ಶಿವಲಿಂಗದ ದೇವಸ್ಥಾನಕ್ಕಿದೆ 11 ಅಡಿ ಎತ್ತರದ ವಿಶಾಲ ಚಿನ್ನದ ಕಳಸ title=
Jatoli Shiv Mandir (File Photo)

Jatoli Shiva Temple - Solan, Himachal Pradesh: ಭಾರತದಲ್ಲಿ ನಿಗೂಢ ದೇವಾಲಯಗಳ ಕೊರತೆ ಇಲ್ಲ.  ದೇಶದ ಮೂಲೆ ಮೂಲೆಯಲ್ಲಿ ಯಾವುದಾದರೊಂದು ದೇವರ ದೇವಸ್ಥಾನವನ್ನು ನೀವು ಕಾಣಬಹುದಾಗಿದೆ. ಈ ದೇವಾಲಯಗಳು ಹಲವು ಪವಾಡ ಹಾಗೂ ನಿಗೂಢ ಸಂಗತಿಗಳನ್ನು ಬಚ್ಚಿಟ್ಟುಕೊಂಡಿವೆ. ಅನೇಕ ದೇವಾಲಯಗಳ ಹಂದಿನ ರಹಸ್ಯ ಇಂದಿಗೂ ಕೂಡ ಯಕ್ಷಪ್ರಶ್ನೆಯಾಗಿವೆ . ಇಂತಹುದೇ ಒಂದು ದೇವಾಲಯದ ಬಗ್ಗೆ ಇಂದು ನಾವು ನಿಮಗೆ ಹೇಳಲು ಹೊರಟಿದ್ದು, ಅದೊಂದು ನಿಗೂಢ ದೇವಸ್ಥಾನವಾಗಿದೆ. ಈ ದೇವಸ್ಥಾನದ ಗೋಡೆಗಳಲ್ಲಿರುವ ಬಂಡೆಗಳನ್ನು ಕಲ್ಲುಗಳಿಂದ ತಟ್ಟಿದಾಗ ಅವುಗಳಿಂದ ದಮರುಗದ ನಾದ ಹೊರಹೊಮ್ಮುತ್ತದೆ ಎಂದು ನಂಬಲಾಗಿದೆ. ಇದು ಶಿವಾಲಯವಾಗಿದ್ದು, ಇದು ಏಷ್ಯಾದ ಅತಿ ಎತ್ತರದಲ್ಲಿರುವ ಶಿವಾಲಯ ಎಂಬುದು ಇಲ್ಲಿ ವಿಶೇಷ.

11 ಅಡಿ ಎತ್ತರದ ವಿಶಾಲ ಚಿನ್ನದ ಕಳಸ 
ಈ ವಿಶಾಲಾಕೃತಿಯ ದೇವಸ್ಥಾನದ (Temple) ನಾಲ್ಕು ಕಡೆಗಳಲ್ಲಿ ದೇವಿ-ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನದ ಒಳಗೆ ಸ್ಫಟಿಕ ಮಣಿ ಶಿವಲಿಂಗ ವಿರಾಜಮಾನವಾಗಿದೆ. ಇದಲ್ಲದೆ ಈ ದೇವಸ್ಥಾನದಲ್ಲಿ ಮಾತೆ ಪಾರ್ವತಿಯ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದ ವಿಶೇಷತೆ ಎಂದರೆ, ಈ ದೇವಸ್ಥಾನದ ಮೇಲ್ಭಾಗದಲ್ಲಿ 11 ಅಡಿ ಎತ್ತರದ ಒಂದು ವಿಶಾಲ ಚಿನ್ನದ ಕಳಸ ಸ್ಥಾಪಿಸಲಾಗಿದೆ.

ಇದನ್ನೂ ಓದಿ- Salt Vaastu Tips: ಮನೆಯಲ್ಲಿ 'ನೆಗಟಿವ್ ಎನರ್ಜಿ' ತೆಗೆದು ಹಾಕಲು ಉಪ್ಪಿನ ವಾಸ್ತು ಪರಿಹಾರ!

ಸ್ವಾಮಿ ಕೃಷ್ಣಾನಂದ ಪರಮಹಂಸರಿಂದ ಶಂಕುಸ್ಥಾಪನೆ
ಪೌರಾಣಿಕ ಕಾಲದಲ್ಲಿ ಶಿವ ಅಲ್ಲಿಗೆ ಭೇಟಿ ನೀಡಿದ ಎಂಬುದು ಇಲ್ಲಿನ ಐತಿಹ್ಯ ಹಾಗೂ ಅಲ್ಲಿಯೇ ಕೆಲ ಕಾಲ ವಾಸವಾಗಿದ್ದ. ಇದಾದ ಬಳಿಕ 1950 ದಶಕದಲ್ಲಿ ಸ್ವಾಮಿ ಕೃಷ್ಣಾನಂದ ಪರಮಹಂಸ ಹೆಸರಿನ ಸ್ವಾಮೀಜಿಯೊಬ್ಬರು ಅಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಸ್ವಾಮೀಜಿ ಅವರು ತಮ್ಮ ಮಾರ್ಗದರ್ಶನದಲ್ಲಿ ಸ್ಪಟಿಕ ಸ್ವರೂಪಿ ಶಿವಲಿಂಗ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭಿಸಿದರು. 1974ರಲ್ಲಿ ಅವರು ಈ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ 1983 ಸ್ವಾಮೀಜಿ ಅವರು ಸಮಾಧಿ ಸ್ವೀಕರಿಸಿದರು. ಆದರೆ, ಈ ದೇವಸ್ಥಾನದ ಕಾರ್ಯ ಪೂರ್ಣಗೊಂಡಿತು.

ಇದನ್ನೂ ಓದಿ-Vastu Tips: ಮನೆಯಲ್ಲಿ ಒಂದು ನವಿಲುಗರಿ ಇಡುವುದರಿಂದಾಗುವ ಲಾಭಗಳು

ವಿದೇಶಗಳಿಂದ ಭಕ್ತರು ಕಾಣಿಕೆ ನೀಡುತ್ತಾರೆ
ಈ ವಿಶಾಲ ಸ್ಫಟಿಕ ಶಿವಲಿಂಗ ದೇವಸ್ಥಾನದ ಸಂಪೂರ್ಣ ಕಾರ್ಯ ಪೂರ್ಣಗೊಳ್ಳಲು 39 ವರ್ಷ ಕಾಲಾವಕಾಶ ತಗುಲಿದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ದೇವಸ್ಥಾನಕ್ಕೆ ದೇಶ-ವಿದೇಶಗಳಿಂದ ಭಕ್ತಾದಿಗಳು ಕಾಣಿಕೆ ನೀಡಿದ್ದಾರೆ. ಇದೆ ಕಾರಣದಿಂದ ಈ ದೇವಸ್ಥಾನ ನಿರ್ಮಾಣಕ್ಕೆ ಮೂರು ದಶಕಗಳ ಕಾಲಾವಕಾಶ ಬೇಕಾಯಿತು.

ಇದನ್ನೂ ಓದಿ-Holi 2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆದರೆ?

Trending News