ಯುವಕರು ವಯಸ್ಸಾದ ಮಹಿಳೆಯರನ್ನೇ ಏಕೆ ಇಷ್ಟಪಡ್ತಾರೆ ಗೊತ್ತಾ? ಇದರ ಹಿಂದಿದೆ ದೊಡ್ಡ ರಹಸ್ಯ!!

why men loves elderly women: ಇತ್ತೀಚೆಗೆ ಯುವಕರು ಹೆಚ್ಚಾಗಿ ವಯಸ್ಸಾದ ಮಹಿಳೆಯರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.. ಹಾಗಾದ್ರೆ ಈ ರೀತಿಯ ಆಕರ್ಷಣೆಗೆ ಕಾರಣವೇನಿರಬಹುದು? 

Written by - Savita M B | Last Updated : Jun 7, 2024, 01:34 PM IST
  • ಕೆಲವು ಪುರುಷರು ಕೆಲವು ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ.
  • ಆದರೆ ಎಲ್ಲಾ ಪುರುಷರು ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುವುದಿಲ್ಲ..
ಯುವಕರು ವಯಸ್ಸಾದ ಮಹಿಳೆಯರನ್ನೇ ಏಕೆ ಇಷ್ಟಪಡ್ತಾರೆ ಗೊತ್ತಾ? ಇದರ ಹಿಂದಿದೆ ದೊಡ್ಡ ರಹಸ್ಯ!! title=

traits of men who loves elderly women: ಕೆಲವು ಪುರುಷರು ಕೆಲವು ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ವಾಸ್ತವವಾಗಿ ಯುವಕರು ತಮ್ಮ ಸಮ ವಯಸ್ಸಿನ ಅಥವಾ ಕಿರಿಯ ಮಹಿಳೆಯರಲ್ಲಿ ನೋಡದ ಕೆಲವು ವಿಷಯಗಳು ಸ್ವಲ್ಪ ವಯಸ್ಸಾದ ಮಹಿಳೆಯರಲ್ಲಿ ಕಂಡುಬರುತ್ತವೆ. ಸ್ವಾತಂತ್ರ್ಯ ಮತ್ತು ಪ್ರಬುದ್ಧತೆಯಂತಹ ಸಣ್ಣ ಕಾರಣಗಳು ಮತ್ತು ಗುಣಗಳಿಂದಾಗಿ ಬಹಳಷ್ಟು ಪುರುಷರು ತಮಗಿಂತ ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಆದರೆ ಎಲ್ಲಾ ಪುರುಷರು ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುವುದಿಲ್ಲ..

ವಯಸ್ಸಾದ ಮಹಿಳೆಯರಲ್ಲಿ ಪುರುಷರು ಆದ್ಯತೆ ನೀಡುವುದಕ್ಕೆ ಪ್ರಮುಖ ಕಾರಣ ಪ್ರಬುದ್ಧತೆ. ಹೆಚ್ಚು ಪ್ರಬುದ್ಧತೆಯುಳ್ಳ ಪುರುಷರು ವಯಸ್ಸಾದವರಿಗೆ ಆದ್ಯತೆ ನೀಡುತ್ತಾರೆ. ಅಲ್ಲದೇ ಅವರು ತಮ್ಮ ಮನಸ್ಸಿನ ಮಾತುಗಳನ್ನು ಸುಲಭವಾಗಿ ಆಡಲು ಮತ್ತು ಮುಕ್ತ ಸಂಭಾಷಣೆಗಳನ್ನು ನಡೆಸುವುದರಲ್ಲಿ ನಿಪುಣರಿರುತ್ತಾರೆ.. 

ಇದನ್ನೂ ಓದಿ-ಬೆಳ್ಳುಳ್ಳಿ ಸಿಪ್ಪೆಯಿಂದ ಇಷ್ಟೇಲ್ಲಾ ಪ್ರಯೋಜನಗಳಿವೆಯಾ? ಎಸೆಯುವ ಮುನ್ನ ಯೋಚಿಸಿ!!

ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುವ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ... ಜೀವನದಲ್ಲಿ ಏನೇ ಆಗಲಿ ಅವರು ತುಂಬಾ ಆರಾಮದಾಯಕವಾಗಿರುತ್ತಾರೆ.. ಬೇರೆಯವರಿಗಾಗಿ ಬದಲಾಗಬೇಕು ಎಂಬ ಟೆನ್ಷನ್ ಇಲ್ಲದವರು ಮಾತ್ರ ವಯಸ್ಸಾದವರಿಗೆ ಆಕರ್ಷಿತರಾಗುತ್ತಾರೆ..

ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ.. ತಮಗೆ ಇಷ್ಟಪಡುವದನ್ನು ಮಾಡಲು ಇಚ್ಚಿಸುತ್ತಾರೆ.. ಏಕಾಂತತೆಗೆ ಆದ್ಯತೆ ನೀಡುತ್ತಾರೆ.. ಈ ಸ್ವತಂತ್ರ ಗುಣಗಳೇ ವಯಸ್ಸಾದ ಮಹಿಳೆಯನ್ನು ಪ್ರೀತಿಸಲು ಅಪೇಕ್ಷಣೀಯವಾಗಿಸುತ್ತದೆ.

ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಹೆಚ್ಚಾಗಿ ಮುಕ್ತವಾಗಿ ಮಾತನಾಡುತ್ತಾರೆ. ಹೊಸ ಅನುಭವಗಳು, ಹೊಸ ದೃಷ್ಟಿಕೋನಗಳಂತಹ ವಿಭಿನ್ನ ದೃಷ್ಟಿಕೋನಗಳಿಂದ ಜೀವನವನ್ನು ನಡೆಸಲು ಬಯಸುವ ಜನರು ಸಹ ವಯಸ್ಸಾದ ಹೆಂಗಳೆಯರತ್ತ ತಮ್ಮ ಗಮನ ಹರಿಸುತ್ತಾರೆ.. 

ಇದನ್ನೂ ಓದಿ-ಎಷ್ಟೇ ದೇಹ ದಂಡಿಸಿದ್ರೂ ತೂಕ ಇಳಿಯುತ್ತಿಲ್ವಾ? ಹಾಗಿದ್ರೆ ಬೆಳಗ್ಗೆದ್ದು ಖಾಲಿ ಹೊಟ್ಟೇಲಿ ಈ ನೀರನ್ನು ಕುಡಿಯಿರಿ: ಜೋತುಬಿದ್ದ ಹೊಟ್ಟೆ ಚಪ್ಪಟೆಯಾಗುತ್ತೆ

ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಕಷ್ಟಕರವಾದ ಭಾವನೆಗಳನ್ನು ಮತ್ತು ಸಂಬಂಧಗಳಲ್ಲಿ ಉದ್ಭವಿಸುವ ಸಂಕೀರ್ಣ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುತ್ತಾರೆ. ಅಲ್ಲದೇ ಆ ಸಂಬಂಧದಲ್ಲಿ ಅಗತ್ಯಗಳು ಭಾವನೆಗಳು ಸುಲಭವಾಗಿ ಅರ್ಥವಾಗುತ್ತವೆ..  

ಸಾಮಾನ್ಯವಾಗಿ ಯಾವುದೇ ಸಂಬಂಧದಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವ ಇರಬೇಕು. ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಪರಸ್ಪರ ಗೌರವವನ್ನು ಹೊಂದಿರುತ್ತಾರೆ. ಏನೇ ಸಮಸ್ಯೆ ಬಂದರೂ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸಮಸ್ಯೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇಬ್ಬರಿಗೂ ಯಾವುದು ಒಳ್ಳೆಯದು ಎಂದು ಯೋಚಿಸಿ ಪ್ರಬುದ್ಧ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಕೋಪವಾಗಲಿ ಅಥವಾ ಜಗಳವಾಗಲಿ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News