Tirupati Temple: ತಿಮ್ಮಪ್ಪನ ಸನ್ನಿಧಿಯಲ್ಲಿ ದೋಷ ನಿವಾರಣಾ ಉತ್ಸವ ಆರಂಭ, ದೂರವಾಗಲಿದೆ ಸರ್ವ ಪಾಪ

ತಿರುಪತಿ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ, ಶ್ರೀ ಮಲಯಪ್ಪ ಸ್ವಾಮಿ, ಶ್ರೀದೇವಿ ಮತ್ತು ಭೂದೇವಿಗೆ ವೇದ ಪಠಣಗಳ ನಡುವೆ, ತಿರುಮಂಜನವನ್ನು ನೆರವೇರಿಸಲಾಯಿತು.

Written by - Ranjitha R K | Last Updated : Aug 19, 2021, 09:17 PM IST
  • ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದಲ್ಲಿ 'ದೋಷ ನಿವಾರಣ' ಉತ್ಸವ
  • ಪಾಪ ನಾಶಕ್ಕಾಗಿ ಮೂರು ದಿನಗಳವರೆಗೆ ಆಚರಿಸುವ ಹಬ್ಬ
  • ಶ್ರಾವಣ ಮಾಸದ ಪ್ರಮುಖ ದಿನಗಳಲ್ಲಿ ಪ್ರತಿ ವರ್ಷ ಈ ಉತ್ಸವ ಆಚರಣೆ
Tirupati Temple: ತಿಮ್ಮಪ್ಪನ ಸನ್ನಿಧಿಯಲ್ಲಿ ದೋಷ ನಿವಾರಣಾ ಉತ್ಸವ ಆರಂಭ, ದೂರವಾಗಲಿದೆ ಸರ್ವ ಪಾಪ  title=
ತಿರುಮಲ ತಿರುಪತಿ ದೇವಸ್ಥಾನದಲ್ಲಿ 'ದೋಷ ನಿವಾರಣ' ಉತ್ಸವ (photo india.com)

ನವದೆಹಲಿ : Tirupati Temple : ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದಲ್ಲಿ 'ದೋಷ ನಿವಾರಣ' ಉತ್ಸವವನ್ನು (dosha nivarana utsav) ಆರಂಭಿಸಲಾಗಿದೆ.  ಇದು ಮೂರು ದಿನಗಳ ಕಾರ್ಯಕ್ರಮವಾಗಿದೆ. ಪಾಪಗಳನ್ನು ದೂರ ಮಾಡುವ ಉದ್ದೇಶದಿಂದ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಬುಧವಾರ ಈ ಉತ್ಸವ ಆರಂಭವಾಗಿದೆ. 

"ಪವಿತ್ರೋತ್ಸವದ ಮೂರು ದಿನಗಳ ವಾರ್ಷಿಕ ಉತ್ಸವವನ್ನು ದೋಷ ನಿವಾರಣಾ (dosha nivarana utsav), ಸರ್ವದೋಷೋಪಾಸಮನ್, ಸರ್ವ ಯಜ್ಞ ಫಲಪ್ರದ, ಸರ್ವ ತುಷ್ಟಿಕಾರ ಮತ್ತು ಸರ್ವ ಕಂಪ್ರಾದ ಹಬ್ಬ ಎಂದೂ ಕರೆಯುತ್ತಾರೆ. ಬುಧವಾರ ಈ ವಾರ್ಷಿಕ ಉತ್ಸವ ಆರಂಭವಾಗಿದೆ. ಹಬ್ಬದ ಅಂಗವಾಗಿ, ಪುರೋಹಿತರು ಸಾಂಕೇತಿಕವಾಗಿ ವರ್ಷಪೂರ್ತಿ ದಿನನಿತ್ಯದ ಆಚರಣೆಗಳ ವೇಳೆ ತಿಳಿದೋ ತಿಳಿಯದೆಯೋ ಮಾಡಿರುವ ತಪ್ಪುಗಳಿಗೆ ದೇವರ ಕ್ಷಮೆ ಕೋರುತ್ತಾರೆ. 

ಇದನ್ನೂ ಓದಿ : Varalakshmi Vrat 2021 : ವರ ಮಹಾಲಕ್ಷ್ಮಿ ಪೂಜೆಯ ಶುಭ ಮುಹೂರ್ತ, ಮತ್ತು ಮಹತ್ವ ತಿಳಿಯಿರಿ

ತಿರುಪತಿ ದೇವಸ್ಥಾನ ದೋಷ ನಿವಾರಣಾ ಹಬ್ಬ :
ತಿರುಪತಿ ದೇವಸ್ಥಾನದಲ್ಲಿ (Tirupati temple) ಬುಧವಾರ ಬೆಳಿಗ್ಗೆ, ಶ್ರೀ ಮಲಯಪ್ಪ ಸ್ವಾಮಿ, ಶ್ರೀದೇವಿ ಮತ್ತು ಭೂದೇವಿಗೆ ವೇದ ಪಠಣಗಳ ನಡುವೆ, ತಿರುಮಂಜನವನ್ನು ನೆರವೇರಿಸಲಾಯಿತು. ನಂತರ ವಿಶೇಷ ಸಮರ್ಪಣೆ ಆಯೋಜಿಸಲಾಗಿತ್ತು.

 

ಸಂಜೆ ನಾಲ್ಕುನಾಲ್ಕು ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಿತು. ಸಂಜೆ 7 ರಿಂದ 10 ಗಂಟೆಯವರೆಗೆ  ಯಾಗಶಾಲೆಯಲ್ಲಿ ವೈದಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. 

ಶ್ರಾವಣ ಮಾಸದಲ್ಲಿ (Shravana month) ಏಕಾದಶಿ, ದ್ವಾದಶಿ ಮತ್ತು ತ್ರಯೋದಶಿಯ ಪ್ರಮುಖ ದಿನಗಳಲ್ಲಿ ಪ್ರತಿ ವರ್ಷ ಈ ಉತ್ಸವವನ್ನು  ಆಚರಿಸಲಾಗುತ್ತದೆ.  ಈ ಉತ್ಸವವನ್ನು ಸುಮಾರು 560 ವರ್ಷಗಳ ಹಿಂದೆ ಸಾಳುವ ಮಲ್ಲಯ್ಯ ದೇವ ರಾಜ ಆರಂಭಿಸಿದ್ದರು. ಅಧಿಕಾರಿಗಳ ಹೇಳಿಕೆಯ ಪ್ರಕಾರ, "ಸಾಳುವ ಮಲ್ಲಯ್ಯ ದೇವ ರಾಜನು ಈ ಹಬ್ಬವನ್ನು ಕ್ರಿಸ್ತಶಕ 1463 ರಲ್ಲಿ ತಿರುಮಲದಲ್ಲಿ  ಸಾಳುವ ನರಸಿಂಹನ ಅವಧಿಯಲ್ಲಿ ಮೊದಲು ಆರಂಭಿಸಿದ್ದರು. 

ಇದನ್ನೂ ಓದಿ : https://zeenews.india.com/kannada/lifestyle/these-two-zodiac-signs-stay-...">Chandra Grahan 2021 : ಚಂದ್ರ ಗ್ರಹಣದಂದು ಈ ಎರಡು ರಾಶಿಯವರು ಹುಷಾರಾಗಿರಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G">https://bit.ly/3hDyh4G
Apple Link - https://apple.co/3hEw2hy">https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು www.facebook.com/ZeeHindustanKannada">https://www.facebook.com/ZeeHindustanKannada" target="_blank">Twitter, www.facebook.com/ZeeHindustanKannada">https://www.facebook.com/ZeeHindustanKannada" target="_blank">Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News