Varalakshmi Vrat 2021 : ವರ ಮಹಾಲಕ್ಷ್ಮಿ ಪೂಜೆಯ ಶುಭ ಮುಹೂರ್ತ, ಮತ್ತು ಮಹತ್ವ ತಿಳಿಯಿರಿ

ನಾಳೆ  ವರಮಹಾ ಲಕ್ಷ್ಮೀ ಹಬ್ಬ. ಲಕ್ಷ್ಮಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ಸಲ್ಲಿಸಲಾಗುತ್ತದೆ.  ವರಮಹಾ ಲಕ್ಷ್ಮೀಯ ಅಲಂಕಾರ ಕೂಡಾ ಇಲ್ಲಿ ಬಹಳ ಮುಖ್ಯ.

Written by - Ranjitha R K | Last Updated : Aug 19, 2021, 08:25 PM IST
  • ನಾಳೆ ವರಮಹಾ ಲಕ್ಷ್ಮೀ ಹಬ್ಬ
  • ತಿಳಿಯಿರಿ ವರಮಹಾ ಲಕ್ಷ್ಮೀ ಪೂಜೆಯ ಸಮಯ
  • ಗೊತ್ತಿದೆಯೇ ವರಲಕ್ಷ್ಮಿ ವ್ರತದ ಮಹತ್ವ?
Varalakshmi Vrat 2021 : ವರ ಮಹಾಲಕ್ಷ್ಮಿ ಪೂಜೆಯ ಶುಭ ಮುಹೂರ್ತ, ಮತ್ತು ಮಹತ್ವ ತಿಳಿಯಿರಿ   title=
ತಿಳಿಯಿರಿ ವರಮಹಾ ಲಕ್ಷ್ಮೀ ಪೂಜೆಯ ಸಮಯ (photo india.com)

ನವದೆಹಲಿ : Varalakshmi Vrat 2021 Date: ನಾಳೆ  ವರಮಹಾ ಲಕ್ಷ್ಮೀ ಹಬ್ಬ. ಲಕ್ಷ್ಮಿಯನ್ನು ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ಸಲ್ಲಿಸಲಾಗುತ್ತದೆ.  ವರಮಹಾ ಲಕ್ಷ್ಮೀಯ (Varmahalakshmi) ಅಲಂಕಾರ ಕೂಡಾ ಇಲ್ಲಿ ಬಹಳ ಮುಖ್ಯ. ಅಲ್ಲದೆ ವಿವಿಧ ಬಗೆಯ ಭಕ್ಷ್ಯಗಳನ್ನು ಬಡಿಸಲಾಗುತ್ತದೆ.  ಈ ದಿನ ಉಪವಾಸವನ್ನು ಆಚರಿಸಿದರೆ ಬಡತನ ನಿರ್ಮೂಲನೆಯಾಗುತ್ತದೆ ಎನ್ನುವುದು ನಂಬಿಕೆ.  ಅಲ್ಲದೆ,  ಅಖಂಡ ಲಕ್ಷ್ಮಿ (Godess Lakshmi) ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಈ ಉಪವಾಸವನ್ನು ಆಚರಿಸಿದರೆ ಕುಟುಂಬದಲ್ಲಿ ಸಂತೋಷ ಮತ್ತು ಸಂಪತ್ತು ನೆಲೆಯಾಗುತ್ತದೆ. 

ವರಮಹಾ ಲಕ್ಷ್ಮೀ ಪೂಜೆಯ ಸಮಯ : 
ಶುಕ್ರವಾರ ಅಂದರೆ ನಾಳೆ ಆಗಸ್ಟ್ 20, 2021 ರಂದು ವರಮಹಾ ಲಕ್ಷ್ಮೀ  ವ್ರತ (Varamahalakshmi Vrata)
ಸಿಂಹ ಲಗ್ನ ಪೂಜೆ ಮುಹೂರ್ತ (ಬೆಳಿಗ್ಗೆ) - 05:53 ರಿಂದ 07:59 
ಅವಧಿ - 02 ಗಂಟೆ 6 ನಿಮಿಷಗಳು
ವೃಶ್ಚಿಕ ಲಗ್ನ ಪೂಜೆ ಮುಹೂರ್ತ ಮಧ್ಯಾಹ್ನ 12:35ರಿಂದ 02:54 
ಅವಧಿ - 02 ಗಂಟೆ 19 ನಿಮಿಷಗಳು
ಕುಂಭ ಲಗ್ನ ಪೂಜೆ ಮುಹೂರ್ತ ಸಂಜೆ  06:40 ರಿಂದ 08:07 
ಅವಧಿ - 01 ಗಂಟೆ 27 ನಿಮಿಷಗಳು

ಇದನ್ನೂ ಓದಿ : Chandra Grahan 2021 : ಚಂದ್ರ ಗ್ರಹಣದಂದು ಈ ಎರಡು ರಾಶಿಯವರು ಹುಷಾರಾಗಿರಿ..!

ವರಲಕ್ಷ್ಮಿ ವ್ರತದ ಕತೆ :
ಒಂದು ದಂತಕಥೆಯ ಪ್ರಕಾರ, ಶಿವ (Lord Shiva) ದೇವಿ ಪಾರ್ವತಿಗೆ  ವರಮಹಾ ಲಕ್ಷ್ಮೀ ವ್ರತದ ಕಥೆಯನ್ನು ಹೇಳುತ್ತಾನೆ. ಈ ಕತೆಯ ಪ್ರಕಾರ ಮಗಧ ದೇಶದಲ್ಲಿ ಕುಂಡಿ ಎಂಬ ನಗರವಿತ್ತು. ಈ ನಗರವನ್ನು ಚಿನ್ನದಿಂದ ಮಾಡಲಾಗಿತ್ತು. ಚಾರುಮತಿ ಎಂಬ ಮಹಿಳೆ ಈ ನಗರದಲ್ಲಿ ವಾಸಿಸುತ್ತಿದ್ದಳು. ಚಾರುಮತಿ ತನ್ನ ಗಂಡನ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುತ್ತಿದ್ದಳು. ಚಾರುಮತಿ  ಲಕ್ಷ್ಮಿಯ ಮಹಾನ್ ಭಕ್ತೆ. ಚಾರುಮತಿ  ಪ್ರತಿ ಶುಕ್ರವಾರ ಮಹಾಲಕ್ಷ್ಮೀಯ ಪೂಜೆ (Friday Lakshmi pooja) ಮಾಡುತ್ತಿದ್ದಳು. ಅಲ್ಲದೆ, ಉಪವಾಸ ಮಾಡುತ್ತಿದ್ದಳು. , ತಾಯಿ ಲಕ್ಷ್ಮೀ  ಕೂಡ ಚಾರುಮತಿಯಾ ಭಕ್ತಿಯಿಂದ ಸಂತುಷ್ಟಲಾಗಿದ್ದಳು. ಒಮ್ಮೆ ಚಾರುಮತಿಯ ಕನಸಿನಲ್ಲಿ ಬಂದ ಲಕ್ಷ್ಮೀ ದೇವಿಯು ಚಾರುಮತಿಗೆ ಒಂದು ಉಪವಾಸದ ಬಗ್ಗೆ ಹೇಳುತ್ತಾಳೆ. ಅಂತೆಯೇ ಎಲ್ಲಾ ಮಹಿಳೆಯರೊಂದಿಗೆ, ಚಾರುಮತಿ ಈ  ಉಪವಾಸವನ್ನು ನಿಯಮಬದ್ಧವಾಗಿ ಆಚಾರಣೆ ಮಾಡುತ್ತಾಳೆ. ವಿಧಿ ವತ್ತಾಗಿ ಲಕ್ಷ್ಮಿ ದೇವಿಯ ಪೂಜೆ ಮಾಡುತ್ತಾಳೆ.  ಚಾರುಮತಿಯ ಪೂಜೆ ಪೂರ್ಣಗೊಂಡ ತಕ್ಷಣ, ಆಕೆಯ ದೇಹದ ಮೇಲೆ ಹಲವು ಚಿನ್ನದ ಆಭರಣಗಲು ಗೋಚರವಾಗುತ್ತದೆ. ಮನೆ ಧನ-ಧಾನ್ಯಗಳಿಂದ  ತುಂಬಿ ಹೋಗುತ್ತದೆ. ಇದಾದ ನಂತರ ನಗರದ ಎಲ್ಲಾ ಮಹಿಳೆಯರು ಈ ವ್ರತಾಚರಣೆ ಆರಂಭಿಸುತ್ತಾರೆ. ಇದೇ ಮುಂದೆ ವರಲಕ್ಷ್ಮಿ ವ್ರತವಾಗಿ ಆಚರಿಸಲ್ಪಡುತ್ತದೆ. ಪ್ರತಿ ವರ್ಷ ಮಹಿಳೆಯರು ಈ ಉಪವಾಸವನ್ನು ಕ್ರಮಬದ್ಧವಾಗಿ ಆಚರಿಸುತ್ತಾರೆ. 

ವರಲಕ್ಷ್ಮಿ ವ್ರತದ ಮಹತ್ವ :
ವರಲಕ್ಷ್ಮಿ ಮಹಾಲಕ್ಷ್ಮಿಯ ಅವತಾರ. ತಾಯಿ ವರಲಕ್ಷ್ಮಿ ಎಲ್ಲಾ ಆಸೆಗಳನ್ನು ಪೂರೈಸುತ್ತಾ. ಹಾಗಾಗಿಯೇ ವರ ಮತ್ತು ಲಕ್ಷ್ಮೀಯನ್ನು (Godess Lakshmi) ಸೇರಿಸಿ, ಅವಳ ಹೆಸರು ವರಲಕ್ಷ್ಮಿ. ಈ ಉಪವಾಸವನ್ನು ಆಚರಿಸಿದರೆ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ.  ಸಂಪತ್ತು ಮತ್ತು ಸಮೃದ್ಧಿ ಮನೆಯಲ್ಲಿ ನೆಲೆಸುತ್ತದೆ. ಈ ಉಪವಾಸವನ್ನು ವಿಶೇಷವಾಗಿ ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ಈ ಉಪವಾಸವನ್ನು ಆಚರಿಸುವುದರಿಂದ ಮಕ್ಕಳಿಗೂ ಸುಖ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ : Raksha Bandhan 2021 Things To Avoid: ರಕ್ಷಾ ಬಂಧನದ ದಿನ ಸಹೋದರಿಯರು ಮರೆತೂ ಸಹ ಈ ತಪ್ಪು ಮಾಡಬಾರದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News