ಕನಸಿನಲ್ಲಿ ಕಂಡ ಈ 4 ವಸ್ತುಗಳಿಂದ ಅಪಾರ ಧನಲಾಭ; ಶ್ರೀಮಂತರಾಗುವ ಕನಸು ಕೂಡ ಈಡೇರುತ್ತದೆ

ಸ್ವಪ್ನ ಗ್ರಂಥದ ಪ್ರಕಾರ ಕನಸಿನಲ್ಲಿ ಗಿಳಿಯನ್ನು ಕಂಡರೆ ತುಂಬಾ ಶುಭ. ಕನಸಿನಲ್ಲಿ ಗಿಳಿ ಕಾಣಿಸಿಕೊಂಡರೆ ಶೀಘ್ರದಲ್ಲೇ ನೀವು ಹಣವನ್ನು ಪಡೆಯುತ್ತೀರಿ ಎಂದರ್ಥ.

Written by - Puttaraj K Alur | Last Updated : Dec 22, 2021, 08:40 PM IST
  • ಕನಸಿನಲ್ಲಿ ಆನೆಯನ್ನು ನೋಡುವುದು ಶುಭ ಸಂಕೇತ
  • ಕನಸಿನಲ್ಲಿ ಗಿಳಿಯನ್ನು ನೋಡುವುದು ಸಂಪತ್ತನ್ನು ತರುತ್ತದೆ
  • ಕನಸಿನಲ್ಲಿ ಕಮಲದ ಹೂವನ್ನು ನೋಡುವುದು ಕೂಡ ಶುಭ
ಕನಸಿನಲ್ಲಿ ಕಂಡ ಈ 4 ವಸ್ತುಗಳಿಂದ ಅಪಾರ ಧನಲಾಭ; ಶ್ರೀಮಂತರಾಗುವ ಕನಸು ಕೂಡ ಈಡೇರುತ್ತದೆ title=
ಕನಸಿನಲ್ಲಿ ಆನೆ ನೋಡುವುದು ಶುಭ ಸಂಕೇತ

ನವದೆಹಲಿ: ಕನಸಿನಲ್ಲಿ ಎಲ್ಲವನ್ನೂ ನೋಡುವುದು ವಿಭಿನ್ನ ಚಿಹ್ನೆಯ ಸಂಕೇತ. ಸ್ವಪ್ನಾ ಶಾಸ್ತ್ರ(Swapna Shastra)ದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಇದಲ್ಲದೆ ಕನಸುಗಳು ಭವಿಷ್ಯದ ಘಟನೆಗಳ ಸೂಚನೆಯನ್ನು ನೀಡುತ್ತವೆ. ಕೆಲವು ಕನಸುಗಳು ಶುಭ ಸೂಚನೆಗಳನ್ನು ನೀಡಿದರ, ಇನ್ನು ಕೆಲವು ಕನಸುಗಳು ಅಶುಭ ಸೂಚನೆಗಳನ್ನು ನೀಡುತ್ತವೆ. ಕೆಲವು ಕನಸುಗಳು ಭವಿಷ್ಯದಲ್ಲಿ ಹಣದ ಲಾಭವನ್ನು ಸೂಚಿಸುತ್ತವೆ. ಕನಸಿನಲ್ಲಿ ಯಾವುದನ್ನು ಕಂಡರೆ ಹಣದ ಲಾಭವಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.  

ಕನಸಿನಲ್ಲಿ ಗಿಳಿ

ಸ್ವಪ್ನ ಗ್ರಂಥದ ಪ್ರಕಾರ ಕನಸಿನಲ್ಲಿ ಗಿಳಿ(Parrot In Dream)ಯನ್ನು ಕಂಡರೆ ತುಂಬಾ ಶುಭ. ಕನಸಿನಲ್ಲಿ ಗಿಳಿ ಕಾಣಿಸಿಕೊಂಡರೆ ಶೀಘ್ರದಲ್ಲೇ ನೀವು ಹಣವನ್ನು ಪಡೆಯುತ್ತೀರಿ ಎಂದರ್ಥ. ಅಲ್ಲದೆ ಹಣಕ್ಕೆ ಸಂಬಂಧಿಸಿದ ಯಾವುದೇ ದೊಡ್ಡ ಯೋಜನೆಯು ಯಶಸ್ವಿಯಾಗುತ್ತದೆ.

ಇದನ್ನೂ ಓದಿ: ಶನಿಯ ರಾಶಿಯಲ್ಲಿ ರೂಪುಗೊಳ್ಳಲಿದೆ ವಿನಾಶಕಾರಿ ಯೋಗ, ಜಾಗರೂಕರಾಗಿರಬೇಕು ಈ 4 ರಾಶಿಯವರು

ಕನಸಿನಲ್ಲಿ ಕಮಲದ ಹೂವು

ಕನಸಿನಲ್ಲಿ ಕಮಲದ ಹೂ(Lotus Flower In Dream)ವನ್ನು ನೋಡುವುದು ಶುಭ ಸಂಕೇತವನ್ನು ನೀಡುತ್ತದೆ. ಕಮಲದ ಹೂವು ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ತುಂಬಾ ಪ್ರಿಯವಾಗಿದೆ. ಆದ್ದರಿಂದ ಕನಸಿನಲ್ಲಿ ಕಮಲವನ್ನು ನೋಡುವುದು ಹಠಾತ್ ಹಣದ ಲಾಭದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಕನಸಿನಲ್ಲಿ ಆನೆ

ಸ್ವಪ್ನ ಗ್ರಂಥದ ಪ್ರಕಾರ ಕನಸಿನಲ್ಲಿ ಆನೆ(Elephant In Dream)ಯನ್ನು ಕಂಡರೆ ಶುಭ. ಕನಸಿನಲ್ಲಿ ಆನೆಯನ್ನು ನೋಡುವುದು ಮುಂದಿನ ದಿನಗಳಲ್ಲಿ ಹಣವನ್ನು ಗಳಿಸುವ ಸಂಕೇತವಾಗಿದೆ.

ಇದನ್ನೂ ಓದಿ: ಶನಿ ಸಾಡೇಸಾತಿ ಮುಕ್ತಿಯಿಂದ ಯಾವಾಗ ಬದಲಾಗಲಿದೆ ಈ ರಾಶಿಯ ಅದೃಷ್ಟ

ಕನಸಿನಲ್ಲಿ ಜೇನುನೊಣ

ಕನಸಿನಲ್ಲಿ ಜೇನುನೊಣ(Honey Bee In Dream)ವನ್ನು ನೋಡುವುದು ಸಹ ಬಹಳ ಮಂಗಳಕರ ಸಂಕೇತವಾಗಿದೆ. ಕನಸಿನಲ್ಲಿ ಜೇನುಗೂಡು ಕಾಣಿಸಿಕೊಂಡರೆ ಶೀಘ್ರದಲ್ಲೇ ಒಬ್ಬರು ಮತ್ತೊಬ್ಬರಿಂದ ಬಹಳಷ್ಟು ಸಂಪತ್ತನ್ನು ಪಡೆಯಬಹುದು ಎಂದರ್ಥ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News