Health Tips: ತೂಕ ನಷ್ಟಕ್ಕೆ ಈ ಕಷಾಯವನ್ನು ಕುಡಿಯಿರಿ, ಪರಿಣಾಮಕಾರಿ ದಿವ್ಯೌಷಧ

ಖಾಲಿ ಹೊಟ್ಟೆಯಲ್ಲಿ ಈ ಕಷಾಯವನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ. ಕುಡಿದ ನಂತರ ಒಂದು ಗಂಟೆಯವರೆಗೆ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬಾರದು.

Written by - Puttaraj K Alur | Last Updated : Jan 29, 2022, 12:17 PM IST
  • ಈ ಕಷಾಯ ಕುಡಿಯುವುದರಿಂದ ಕಿಡ್ನಿ, ಲಿವರ್ ರೋಗಗಳೂ ದೂರವಾಗುತ್ತವೆ
  • ಬೇವು ಬ್ಯಾಕ್ಟೀರಿಯಾ ವಿರೋಧಿ & ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ
  • ಇದು ಚಯಾಪಚಯ ಹೆಚ್ಚಿಸುವುದರ ಜೊತೆಗೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ
Health Tips: ತೂಕ ನಷ್ಟಕ್ಕೆ ಈ ಕಷಾಯವನ್ನು ಕುಡಿಯಿರಿ, ಪರಿಣಾಮಕಾರಿ ದಿವ್ಯೌಷಧ title=
ಬೇವಿನ ಕಷಾಯದ ಆರೋಗ್ಯಕಾರಿ ಪ್ರಯೋಜನಗಳು

ನವದೆಹಲಿ: ಬೇವಿನ ಸೊಪ್ಪಿನ ಸೇವನೆ(Eating Neem Leaf)ಯಿಂದ ನಮ್ಮ ದೇಹದ ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮೂತ್ರಪಿಂಡ ಮತ್ತು ಯಕೃತ್ತಿನ ಕಾಯಿಲೆಗಳವರೆಗೆ ಇದರ ಸೇವನೆಯು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು(Reduce Weight) ಇದರ ಕಷಾಯ ಮಾಡಿ ಕುಡಿಯಬೇಕು. ಬೇವಿನ ಕಷಾಯವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ತೂಕ ನಷ್ಟಕ್ಕೆ ಬೇವಿನ ಕಷಾಯ

ಬೇವಿನ ಎಲೆಗಳು(Neem Leaf)ತೂಕ ಇಳಿಸಲು ಸಹಾಯ ಮಾಡುವ ಗುಣಗಳನ್ನು ಹೊಂದಿದೆ. ಇದರಿಂದ ತಯಾರಿಸಿದ ಕಷಾಯ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಷಾಯವನ್ನು ಕುಡಿಯುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ ಮತ್ತು ಚಯಾಪಚಯ ಕ್ರಿಯೆಯು ವೇಗಗೊಳ್ಳುತ್ತದೆ.

ಇದನ್ನೂ ಓದಿ: ಕ್ಯಾರೆಟ್ ಮಾತ್ರವಲ್ಲ ಈ ಸಮಸ್ಯೆಗಳಿಗೆ ಕ್ಯಾರೆಟ್ ಸೊಪ್ಪು ಕೂಡಾ ಪರಿಣಾಮಕಾರಿ

ಬೇವಿನ ಕಷಾಯ(Drinking Neem Decoction) ಸೇವಿಸುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ತೂಕ ನಷ್ಟ(Weight Loss)ಕ್ಕೆ ದೇಹವನ್ನು ನಿರ್ವಿಷಗೊಳಿಸುವುದು ಅವಶ್ಯಕ, ಹೀಗಾಗಿ ಬೇವಿನ ಕಷಾಯವು ಪ್ರಯೋಜನಕಾರಿಯಾಗಿದೆ. ತೂಕ ನಷ್ಟಕ್ಕೆ ಬೇವಿನ ಕಷಾಯವನ್ನು ನಿಂಬೆ ರಸ ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯಬೇಕು.

ಕಷಾಯ ಮಾಡುವುದು ಹೇಗೆ..?

  • ಬೇವಿನ ಕಷಾಯ ಮಾಡಲು ಮೊದಲು ತಾಜಾ ಬೇವಿನ ಎಲೆಗಳನ್ನು ತೆಗೆದುಕೊಳ್ಳಬೇಕು.
  • ಈ ಎಲೆಗಳನ್ನು ತೊಳೆದು ಚೆನ್ನಾಗಿ ಸ್ವಚ್ಛಗೊಳಿಸಬೇಕು.
  • ಈಗ 2-3 ಗ್ಲಾಸ್ ನೀರನ್ನು ತೆಗೆದುಕೊಂಡು ಗ್ಯಾಸ್ ಮೇಲೆ ಕುದಿಸಲು ಸಿದ್ಧಪಡಿಸಬೇಕು.
  • ನೀರು ಕುದಿ ಬಂದಾಗ ಬೇವಿನ ಸೊಪ್ಪನ್ನು ನೀರಿಗೆ ಹಾಕಬೇಕು.
  • ಬೇವಿನ ಎಲೆಗಳ ಪೇಸ್ಟ್ ಅನ್ನು ಕಷಾಯದಲ್ಲಿ ಹಾಕಬಹುದು.
  • ಈಗ ಚೆನ್ನಾಗಿ ಕುದಿಯಲು ಬಿಡಿ.
  • ಬಳಿಕ ಇದಕ್ಕೆ ಶುಂಠಿ ಮತ್ತು ಕರಿಮೆಣಸು ಸೇರಿಸಿ.
  • ನೀರು ತಳದಲ್ಲಿ ಸ್ವಲ್ಪವೇ ಉಳಿದಾಗ ಬೆಂಕಿಯನ್ನು ಆರಿಸಬೇಕು.
  • ಸ್ವಚ್ಛವಾದ ಹತ್ತಿ ಬಟ್ಟೆಯಿಂದ ಅದನ್ನು ಫಿಲ್ಟರ್ ಮಾಡಬೇಕು.
  • ಅದರಲ್ಲಿ ನಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಿರಿ.

ಇದನ್ನೂ ಓದಿ: ಡಯಾಬಿಟಿಸ್ ರೋಗಿಗಳು ಬೆಲ್ಲ ತಿನ್ನಬಹುದೇ? ತಜ್ಞರು ಏನು ಹೇಳುತ್ತಾರೆ ಗೊತ್ತಾ ?

ಖಾಲಿ ಹೊಟ್ಟೆಯಲ್ಲಿ ಈ ಕಷಾಯವನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ. ಕುಡಿದ ನಂತರ ಒಂದು ಗಂಟೆಯವರೆಗೆ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬಾರದು.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News