ಈ ಪ್ರೇಮಿಗಳ ನಡುವಿನ ಜಗಳ ಒಂಥರಾ ವಿಭಿನ್ನ. ಹುಡುಗಿ ಏನೋ ತನ್ನ ಲವ್ವರ್ ನನಗೆ ದಿನ 24 ಗಂಟೆ ಮೆಸೇಜ್ ಮಾಡ್ತಾ ಇರ್ಬೇಕು, ನನ್ನ ಜೊತೆಗೆ ಮಾತನಾಡಬೇಕು, ನನಗಾಗಿಯೇ ಸಮಯ ಕೊಡಬೇಕು ಅಂತ ಭಾವಿಸ್ತಾರೆ. ಆದರೆ ಹುಡುಗರು ಮಾತ್ರ ಗಂಟೆಗಟ್ಟಲೆ ಮಾತಾಡಿದ್ರೂ ಸರಿ, ಮೆಸೇಜ್ ಮಾಡೋದು ಅಂದ್ರೆ ಅವರಿಗೆ ಕೊಂಚ ಉದಾಸೀನ. ಆದರೆ ಈ ಹೊತ್ತಿಗೆ ಅದೆಲ್ಲಾ ಏನೋನು ಮನಸ್ಸಿನಲ್ಲಿ ಅಂದುಕೊಂಡು ಹುಡುಗಿಯರು ನೋವುಂಟು ಮಾಡಿಕೊಳ್ಳುತ್ತಾರೆ. ಕೆಲವೊಂದು ಬಾರಿ ಈ ಮನಸ್ಥಿತಿ ಹುಡುಗರಲ್ಲೂ ಇರುತ್ತದೆ.
ಇದನ್ನೂ ಓದಿ: Hair Care Tips: ಕೂದಲು ಉದುರುವಿಕೆಗೆ ನೈಸರ್ಗಿಕ ಪರಿಹಾರ
ನನ್ನನ್ನು ಪ್ರೀತಿಸುತ್ತಿಲ್ಲವೇನೋ! ನನ್ನನ್ನು ದೂರ ಮಾಡುತ್ತಿದ್ದಾರೆನೋ ಎಂದೆಲ್ಲಾ ಅಂದುಕೊಳ್ಳೋದು ಈ ಪ್ರೀತಿಯಲ್ಲಿ ಜಗಳ ಆಗುವಾಗ ತಲೆಗೆ ಮೊದಲು ಹೋಗುವ ಆಲೋಚನೆ. ಆದರೆ ಒಮ್ಮೊಮ್ಮೆ ಇದು ನಿಜವೂ ಆಗಿರುತ್ತದೆ. ಇನ್ನು ನಿಮ್ಮ ಸಂಗಾತಿಗೆ ಸಾವಿರ ಮೆಸೇಜ್ ಮಾಡಿದ್ರೆ ಒಂದು ರಿಪ್ಲೈ ಕೂಡ ಬರುತ್ತಿಲ್ಲ ಎಂದಾದರೆ ಅದಕ್ಕೆ ಕೆಲವು ಕಾರಣಗಳಿರಬಹುದು. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಇಲ್ಲಿ ಮಾಹಿತಿ ನೀಡಲಿದ್ದೇವೆ.
ಬ್ಯುಸಿ ಇರುವುದು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸೆಟಲ್ ಆಗಬೇಕು ಎಂದು ಭಾವಿಸುತ್ತಾರೆ. ಈ ವಿಚಾರವಾಗಿಯೇ ಸಂಪಾದನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇವೆಲ್ಲದರ ಮಧ್ಯೆ ಪ್ರೀತಿ ಪ್ರೇಮ ಅಂತ ಬಂದರೆ ಅದಕ್ಕೂ ಕೊಂಚ ಸಮಯ ನೀಡಬೇಕಾಗುತ್ತದೆ. ಬ್ಯುಸಿ ಸಮಯದಲ್ಲಿ ನಿಮ್ಮ ಸಂಗಾತಿ ನಿಮಗೆ ಮೆಸೇಜ್ ಮಾಡದೇ ಇರಬಹುದು. ಈ ವಿಚಾರದ ಬಗ್ಗೆ ಜಗಳವಾಡಬೇಡಿ. ಏಕೆಂದರೆ ಅವರವರ ಸಮಯದಲ್ಲಿ ಅವರವರ ಬದುಕು ಕಟ್ಟಿಕೊಳ್ಳುವ ಪರಿಯನ್ನು ಹುಡುಕುತ್ತಿರುತ್ತಾರೆ. ಈ ಮಧ್ಯೆ ನೀವು ಮಾಡುವ ಜಗಳ ಅವರಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಇದು ಸಂಬಂಧ ಹಾಳಾಗಲು ಪ್ರಮುಖ ಕಾರಣ.
ಮನಸ್ಥಿತಿ: ಕೆಲವೊಂದು ಬಾರಿ ಮನಸ್ಸಿಗೆ ನೋವಾದಾಗ ಒಬ್ಬಂಟಿಯಾಗಿರಬೇಕು ಎಂದೆನಿಸುತ್ತದೆ. ಅಂತಹ ಸಮಯದಲ್ಲಿ ಮೆಸೇಜ್, ಕಾಲ್ ಮಾಡದೇ ಇರಬಹುದು. ಅಥವಾ ಮೊಬೈಲ್ ಬಿಟ್ಟು ಎಲ್ಲಾದರೂ ಹೊರಗಡೆ ಹೋಗಿರಬಹುದು. ಈ ಎಲ್ಲಾ ಸಂದರ್ಭದಲ್ಲಿ ಗಲಾಟೆ ಮಾಡಬೇಡಿ. ಬದಲಾಗಿ ಅವರ ಜೊತೆ ಕುಳಿತು ಮಾತನಾಡಿ. ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ.
ಕಿರಿಕಿರಿ ಮಾಡುತ್ತೀರಾ? ಕೆಲವೊಂದು ಬಾರಿ ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತಿದ್ದರೆ ಇಂಥವರ ಜೊತೆ ಮಾತನಾಡುವುದೇ ಕಷ್ಟ ಅಂತಾ ನಾವು ಅವರನ್ನು ಅವಾಯ್ಡ್ ಮಾಡುತ್ತೇವೆ. ಇಲ್ಲಸಲ್ಲದ ಗಾಸಿಪ್ ಮಾತನಾಡುವುದು ಕೂಡ ಅನೇಕರಿಗೆ ಇಷ್ಟವಾಗುವುದಿಲ್ಲ.
ಇದನ್ನೂ ಓದಿ: Naga Sadhu: ಮಹಿಳೆಯರು ನಾಗಾಸಾಧು ಆಗುವ ಪ್ರಕ್ರಿಯೆಯೇ ಬಹಳ ವಿಚಿತ್ರ.! ನಿಗೂಢ ಲೋಕದ ವಿಸ್ಮಯಕಾರಿ ವಿಚಾರ ಇಲ್ಲಿದೆ
ಮರೆತು ಬಿಡುವುದು: ಕೆಲವರು ಬೇಕು ಅಂತಲೇ ಮರೆತಿರಬಹುದು, ಇನ್ನೂ ಕೆಲವರು ತಮ್ಮ ಕೆಲಸದ ಒತ್ತಡದಿಂದ ಮರೆತಿರಬಹುದು. ಆದರೆ ಮುಖ್ಯವ್ಯಕ್ತಿಯನ್ನು ಮರೆಯಲು ಸಾಧ್ಯವೇ? ಎನ್ನಬೇಡಿ. ಮರೆವು ಅನ್ನೋದು ಮಾನವನ ಸಹಜ ಗುಣ. ಹಾಗಂದ ಮಾತ್ರಕ್ಕೆ ಪ್ರತೀ ದಿನ ನಿಮ್ಮನ್ನು ನೆನಪಿಸಿಕೊಳ್ಳಬೇಕೆಂದೇನಿಲ್ಲ. ಮೆಸೇಜ್ ಗೆ ಕೆಲಸದ ಸಮಯದಲ್ಲಿ ರಿಪ್ಲೈ ಮಾಡಲು ಮರೆತಿರಬಹುದು ಅಷ್ಟೇ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.