ಒಂದು ತಿಂಗಳಲ್ಲಿ 5 ಕೆ.ಜಿ ತೂಕ ಇಳಿಸುವುದು ಸಾಧ್ಯ ! ಈ ವಿಧಾನ ಅನುಸರಿಸಿ ನೋಡಿ !

Quick weight loss tips: ತೂಕವನ್ನು ಕಳೆದುಕೊಳ್ಳಲು, ಕ್ಯಾಲೋರಿ ಬರ್ನ್ ಮಾಡುವ ಬದಲು ಕಡಿಮೆ ಕ್ಯಾಲೊರಿಗಳನ್ನು ಬಳಸಬೇಕಾಗುತ್ತದೆ.  ಕೆಲವು ಸ್ರಾಳ ವಿಧಾನಗಳನ್ನು ಅನುಸರಿಸುವ ಮೂಲಕ ಒಂದು ತಿಂಗಳಲ್ಲಿ ಸುಮಾರು 5 ಕೆ.ಜಿ. ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ. 

Written by - Ranjitha R K | Last Updated : Apr 3, 2023, 12:40 PM IST
  • ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ.
  • ಹೃದ್ರೋಗ, ಮಧುಮೇಹ, ಕೀಲು ನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
  • ತಿಂಗಳಿಗೆ 5 ಕೆ.ಜಿ. ತೂಕ ಕಳೆದುಕೊಳ್ಳಲು ಹೀಗೆ ಮಾಡಿ
ಒಂದು ತಿಂಗಳಲ್ಲಿ 5 ಕೆ.ಜಿ ತೂಕ ಇಳಿಸುವುದು ಸಾಧ್ಯ ! ಈ ವಿಧಾನ ಅನುಸರಿಸಿ  ನೋಡಿ !  title=

Quick weight loss tips : ಇಂದು ನಾವು ಅನುಸರಿಸುತ್ತಿರುವ ಜೀವನಶೈಲಿಯಿಂದಾಗಿ ತೂಕ ಹೆಚ್ಚಾಗುವುದು  ಸಾಮಾನ್ಯ ಸಮಸ್ಯೆಯಾಗಿದೆ. ಸ್ಥೂಲಕಾಯತೆಯು ದೈಹಿಕ ರೂಪದ ಮೇಲೆ ಪರಿಣಾಮ ಬೀರುವುದಲ್ಲದೆ ಹೃದ್ರೋಗ, ಮಧುಮೇಹ, ಕೀಲು ನೋವು ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳಿಗೂ  ಕಾರಣವಾಗುತ್ತದೆ. ಆದ್ದರಿಂದ, ತೂಕವನ್ನು ಕಳೆದುಕೊಳ್ಳುವುದು ಆರೋಗ್ಯಕರ ಜೀವನಶೈಲಿಯ ಪ್ರಮುಖ ಅಂಶವಾಗಿದೆ. ನಾವು  ತಿಳಿಸುವ ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಒಂದು ತಿಂಗಳಲ್ಲಿ ಸುಮಾರು 5 ಕೆ.ಜಿ. ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ. 

ಕಡಿಮೆ ಕ್ಯಾಲೋರಿ ಸೇವನೆ :
ತೂಕವನ್ನು ಕಳೆದುಕೊಳ್ಳಲು, ಕ್ಯಾಲೋರಿ ಬರ್ನ್ ಮಾಡುವ ಬದಲು ಕಡಿಮೆ ಕ್ಯಾಲೊರಿಗಳನ್ನು ಬಳಸಬೇಕಾಗುತ್ತದೆ. ತೂಕ ನಷ್ಟದ ಸುರಕ್ಷಿತ ಮತ್ತು ಸಮರ್ಥನೀಯ ಮಾನ ದಂಡವೊಂದಿದೆ.  ಅಂದರೆ  ದಿನಕ್ಕೆ 500-1000 ಕ್ಯಾಲೊರಿಗಳನ್ನು ಕಡಿಮೆ ಮಾಡಬೇಕಾಗುತ್ತದೆ.

ಇದನ್ನೂ ಓದಿ : ಋತುಚಕ್ರದ ಸಮಯದಲ್ಲಿ ಚಹಾ ಕುಡಿಯುವುದು ಎಷ್ಟು ಅಪಾಯಕಾರಿ ಗೊತ್ತಾ..?

ಆರೋಗ್ಯಕರ ಆಹಾರ :
ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಲೀನ್ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಂತಹ ಸಂಪೂರ್ಣ, ಪೌಷ್ಟಿಕಾಂಶ-ಭರಿತ ಆಹಾರಗಳನ್ನು ತಿನ್ನುವುದರ ಮೇಲೆ ಗಮನ ಹರಿಸಿ. ಹೆಚ್ಚಿನ ಕ್ಯಾಲೋರಿಗಳು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಸಂಸ್ಕರಿಸಿದ ಆಹಾರ ಮತ್ತು ಜಂಕ್ ಫುಡ್ ಗಳಿಂದ ದೂರವಿರಿ. ಆಹಾರ ಡೈರಿ ಅಥವಾ ಕ್ಯಾಲೋರಿ ಟ್ರ್ಯಾಕಿಂಗ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಕ್ಯಾಲೋರಿ ಸೇವನೆಯನ್ನು ಟ್ರ್ಯಾಕ್ ಮಾಡಿ.

ನಿಯಮಿತವಾಗಿ ವ್ಯಾಯಾಮ ಮಾಡಿ : 
ದಿನಕ್ಕೆ ಕನಿಷ್ಠ 30 ನಿಮಿಷಗಳಷ್ಟು ವ್ಯಾಯಾಮ ಮಾಡಿ. ನಡಿಗೆ, ಸೈಕ್ಲಿಂಗ್, ಈಜು ಅಥವಾ ಸ್ಟ್ರೆಂತ್ ಟ್ರೈನಿಂಗ್ ನಂಥಹ ಚಟುವಟಿಕೆಗಳನ್ನು ಮಾಡಿ. ವ್ಯಾಯಾಮವು ಕ್ಯಾಲೊರಿಗಳನ್ನು  ಬರ್ನ್ ಮಾಡಲು, ಮಸಲ್ಸ್ ಬಿಲ್ಡ್ ಮಾಡಲು, ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ :  Diabetes: ಮಧುಮೇಹ ನಿಯಂತ್ರಿಸಲು ಈ ಎಣ್ಣೆಯಿಂದ ಮಾಡಿದ ಆಹಾರ ಸೇವಿಸಿ

ಸಾಕಷ್ಟು ನೀರು ಕುಡಿಯಿರಿ :
ಹಸಿವನ್ನು ನಿಗ್ರಹಿಸಲು ಹೈಡ್ರೇಟೆಡ್ ಆಗಿ ಉಳಿಯುವುದು ಅವಶ್ಯಕ.  ಚಯಾಪಚಯವನ್ನು ಹೆಚ್ಚಿಸಲು ಮತ್ತು ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರನ್ನು ಕುಡಿಯುವ ಗುರಿಯನ್ನು  ಇಟ್ಟು ಕೊಂಡಿರಿ. 

ಸಾಕಷ್ಟು ನಿದ್ರೆ ಮಾಡಿ : 
ನಿದ್ರೆಯ ಕೊರತೆಯು ಹಸಿವು ಮತ್ತು ಚಯಾಪಚಯವನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಅಡ್ಡಿಪಡಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ತೂಕ ನಷ್ಟ ಮಾಡಬೇಕು ಎನ್ನುವ ಗುರಿ ಹೊಂದಿದ್ದರೆ ಪ್ರತಿ ರಾತ್ರಿ 7-8 ಗಂಟೆಗಳ ನಿದ್ರೆಗೆ ಬೇಕೇ ಬೇಕು. 

ಇದನ್ನೂ ಓದಿ :  Surgery For Diabetes: ಮಧುಮೇಹಿಗಳಿಗೊಂದು ಸಂತಸದ ಸುದ್ದಿ, ಔಷಧಿಗಳಿಂದ ಮುಕ್ತಿ ನೀಡಿ ದೀರ್ಘಾವಧಿಯವರೆಗೆ ಮಧುಮೇಹ ನಿಯಂತ್ರಿಸುತ್ತೆ ಈ ಚಿಕಿತ್ಸೆ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News