Ganesh Chaturthi 2021: ಗಣೇಶ ಚತುರ್ಥಿಯ ದಿನ ಈ ಕೆಲಸ ಮಾಡಿದರೆ ಹಳೆಯ ಸಾಲದಿಂದ ಮುಕ್ತಿ ಸಿಗುತ್ತದೆಯಂತೆ

ಈ ಬಾರಿಯ ಗಣೇಶ ಚತುರ್ಥಿ ಸೆಪ್ಟೆಂಬರ್ 10 ಅಂದರೆ ನಾಳೆ. ಗಣೇಶೋತ್ಸವ ಆಚರಿಸಲು ದೇಶಾದ್ಯಂತ ಜನ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಬಹಳ ಉತ್ಸಾಹದಿಂದ ಹಬ್ಬದ ಆಚರಣೆಯಲ್ಲಿ  ತೊಡಗಿದ್ದಾರೆ. 

Written by - Ranjitha R K | Last Updated : Sep 9, 2021, 07:27 PM IST
  • ಶುಕ್ರವಾರ ಅಂದರೆ ನಾಳೆ ಗಣೇಶ ಚತುರ್ಥಿ
  • ಗಣೇಶ ಚತುರ್ಥಿ ದಿನ ನಿರ್ಗತಿಕರಿಗೆ ದಾನ ಮಾಡಿ
  • ವಿನಾಯಕನಿಗೆ ಲಡ್ಡೂಗಳನ್ನು ಅರ್ಪಿಸಿ
Ganesh Chaturthi 2021: ಗಣೇಶ ಚತುರ್ಥಿಯ ದಿನ ಈ ಕೆಲಸ ಮಾಡಿದರೆ ಹಳೆಯ ಸಾಲದಿಂದ ಮುಕ್ತಿ ಸಿಗುತ್ತದೆಯಂತೆ  title=
ಣೇಶ ಚತುರ್ಥಿ ದಿನ ನಿರ್ಗತಿಕರಿಗೆ ದಾನ ಮಾಡಿ (file photo)

ನವದೆಹಲಿ : ಕೆಲವೊಮ್ಮೆ  ಸಾಲದಿಂದ ತೊಂದರೆಗೊಳಗಾಗಿದ್ದು, ಸಾಲ ತೀರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಸಾಲದ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಹೀಗಾಗುತ್ತಿದ್ದರೆ, ಗಣೇಶ ಚತುರ್ಥಿಯ (Ganesha Chathurthi) ದಿನದಂದು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸಿದರೆ , ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆಯಂತೆ. ಹೌದು ವಿಘ್ನ ವಿನಾಶಕ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಾನೆಯಂತೆ.  

ಗಣೇಶ ಚತುರ್ಥಿ :
ಈ ಬಾರಿಯ ಗಣೇಶ ಚತುರ್ಥಿ (Ganesha Chathurti) ಸೆಪ್ಟೆಂಬರ್ 10 ಅಂದರೆ ನಾಳೆ. ಗಣೇಶೋತ್ಸವ ಆಚರಿಸಲು ದೇಶಾದ್ಯಂತ ಜನ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಬಹಳ ಉತ್ಸಾಹದಿಂದ ಹಬ್ಬದ ಆಚರಣೆಯಲ್ಲಿ  ತೊಡಗಿದ್ದಾರೆ. ಗಣಪತಿಯನ್ನು ಮನೆಗೆ ಬರಮಾಡಿಕೊಂಡು,  ವಿಶೇಷ ಪೂಜೆ (Ganesh pooja) ಸಲ್ಲಿಸಲಾಗುತ್ತದೆ. ನಂತರ ಅಷ್ಟೇ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಗುತ್ತದೆ. 

ಇದನ್ನೂ ಓದಿ : ಗುರುವಾರ ಈ ಕೆಲಸಗಳನ್ನು ಮಾಡಿದರೆ ವಿಷ್ಣುವಿನ ಅವಕೃಪೆಗೆ ಪಾತ್ರರಾಗಬೇಕಗುತ್ತದೆ..! ಹಣಕಾಸಿನ ಅಭಾವವೂ ಎದುರಾಗಬಹುದು

ಗಣೇಶ ಚತುರ್ಥಿಯ ದಿನ ಈ ಕೆಲಸಗಳನ್ನು ಮಾಡಿದರೆ ಆರ್ಥಿಕ ಸಮಸ್ಯೆ ಪರಿಹಾರವಾಗುತ್ತದೆಯಂತೆ : 

ನಿರ್ಗತಿಕರಿಗೆ ದಾನ :
ಅನೇಕ ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿದ್ದರೆ,  ಗಣೇಶ ಚತುರ್ಥಿಯ ದಿನದಂದು ಹಸಿರು ಬಟ್ಟೆಯಲ್ಲಿ ಕೊತ್ತಂಬರಿ ಸುತ್ತಿ ದಾನ ಮಾಡಿ. ಹೀಗೆ ಮಾಡುವುದರಿಂದ ಸಾಲದಿಂದ ಮುಕ್ತಿ ಸಿಗುತ್ತದೆ ಎನ್ನುವುದು ನಂಬಿಕೆ. 

ಹಸುವಿಗೆ ಹುಲ್ಲು ತಿನ್ನಿಸಿ : 

ಮನೆಯಲ್ಲಿ ಹಣಕಾಸಿನ ಸಮಸ್ಯೆಗಳಿದ್ದು, ಮೂಲಭೂತ ಅಗತ್ಯಗಳಿಗಾಗಿ ಕೂಡ ಹಣವನ್ನು ಉಳಿಸಲು ಸಾಧ್ಯವಾಗದಿದ್ದರೆ, ಗಣೇಶ ಚತುರ್ಥಿಯ ದಿನ, ಹಸುವಿಗೆ ಹುಲ್ಲು ಅಥವಾ ಹಸಿ ಹಸಿರು ತರಕಾರಿಗಳನ್ನು (Vegetables)ತಿನ್ನಿಸಿ. ಇದನ್ನು ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ನಿರ್ಮೂಲವಾಗುತ್ತದೆಯಂತೆ. 

ಇದನ್ನೂ ಓದಿ :  Planetary Transits: ಶುಕ್ರ, ಮಂಗಳನ ರಾಶಿ ಪರಿವರ್ತನೆ; ಈ 3 ರಾಶಿಯವರಿಗೆ ಅದೃಷ್ಟ

ವಿನಾಯಕನಿಗೆ ಲಡ್ಡೂಗಳನ್ನು ಅರ್ಪಿಸಿ : 
ಗಣೇಶ ಚತುರ್ಥಿಯ ದಿನ ಸಂಬಂಧಿಕರಿಂದ ಪಡೆದ ಸಾಲ ತೀರಿಸಲು ವಿನಾಯಕನಿಗೆ (Lord Ganesha) 5 ಲಡ್ಡುಗಳನ್ನು ಅರ್ಪಿಸಿ. ಅದರ ನಂತರ ಅದರ ಸುತ್ತಲೂ ನೀರನ್ನು ಸಿಂಪಡಿಸಿ. ಸಾಲದಿಂದ ಮುಕ್ತಿ ನೀಡುವಂತೆ, ಗಣೇಶನನ್ನು ಪ್ರಾರ್ಥಿಸಿ. 

ಋಣಭಾರದಿಂದ ಮುಕ್ತಿ  :
ಹಣದ ಅಗತ್ಯವನ್ನು ಪೂರೈಸಲು, ಪತ್ನಿಯ ಆಭರಣಗಳನ್ನು ಅಡಮಾನ ಇಟ್ಟು, ಅದನ್ನು ಬಿಡಿಸಿಕೊಂಡು ಬರಲು ಸಾಧ್ಯವಾಗದೆ ಹೋದರೆ,  ಗಣೇಶ ಚತುರ್ಥಿಯ ದಿನ 21 ಗರಿಕೆಯನ್ನು ಅರ್ಪಿಸಿ. ಅದರೊಂದಿಗೆ ಬೆಲ್ಲವನ್ನೂ (jagrery) ಅರ್ಪಿಸಿ. ಹೀಗೆ ಮಾಡುವುದರಿಂದ ಗಣೇಶನು ಸಂತುಷ್ಟನಾಗುತ್ತಾನೆ ಮತ್ತು ಋಣಭಾರದಿಂದ ಮುಕ್ತಿ  ಸಿಗುತ್ತದೆಯಂತೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News