Gemology: ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲು ಈ ರತ್ನವನ್ನು ಧರಿಸಿ

ರತ್ನಗಳ ವಿಶೇಷ ಮಹತ್ವವನ್ನು ರತ್ನಶಾಸ್ತ್ರದಲ್ಲಿ ಹೇಳಲಾಗಿದೆ. ವ್ಯಕ್ತಿಯ ಜೀವನದಲ್ಲಿ ಗ್ರಹಗಳ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ರತ್ನ ಶಾಸ್ತ್ರದಲ್ಲಿ ರತ್ನಗಳನ್ನು ಧರಿಸಲು ಸಲಹೆ ನೀಡಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : May 1, 2022, 06:40 AM IST
  • ಹಿಂದೂ ಧರ್ಮದಲ್ಲಿ ರತ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ
  • ಗ್ರಹ ತನ್ನ ಸ್ಥಾನ ಬದಲಾಯಿಸಿದಾಗ ವ್ಯಕ್ತಿಯ ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮ ಕಂಡುಬರುತ್ತದೆ
  • ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಯಾವ ರತ್ನ ಧರಿಸುವುದು ಸೂಕ್ತ?
Gemology: ವೃತ್ತಿಯಲ್ಲಿ ಯಶಸ್ಸನ್ನು ಪಡೆಯಲು ಈ ರತ್ನವನ್ನು ಧರಿಸಿ  title=
ವೃತ್ತಿಜೀವನಕ್ಕೆ ಯಾವ ರತ್ನ ಧರಿಸುವುದು ಸೂಕ್ತ?

ನವದೆಹಲಿ: ಹಿಂದೂ ಧರ್ಮದಲ್ಲಿ ರತ್ನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಗ್ರಹವು ತನ್ನ ಸ್ಥಾನವನ್ನು ಬದಲಾಯಿಸಿದಾಗ ಅದರ ಶುಭ ಮತ್ತು ಅಶುಭ ಪರಿಣಾಮಗಳು ವ್ಯಕ್ತಿಯ ಜೀವನದ ಮೇಲೆ ಕಂಡುಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ರತ್ನ ಶಾಸ್ತ್ರದಲ್ಲಿ ಕೆಲವು ರತ್ನಗಳನ್ನು ಉಲ್ಲೇಖಿಸಲಾಗಿದೆ. ಇವುಗಳನ್ನು ಧರಿಸುವುದರಿಂದ ಗ್ರಹಗಳ ದುಷ್ಪರಿಣಾಮಗಳು ಕಡಿಮೆಯಾಗಬಹುದು ಮತ್ತು ಶುಭ ಪರಿಣಾಮಗಳು ಹೆಚ್ಚಬಹುದು. ಇಂತಹ ಪರಿಸ್ಥಿತಿಯಲ್ಲಿ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಯಾವ ರತ್ನವನ್ನು ಧರಿಸುವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳಿರಿ.   

ಯಾವ ವೃತ್ತಿಗೆ ಯಾವ ರತ್ನ ಧರಿಸಬೆಕು..?

ವೈದ್ಯರು ಮತ್ತು ವೈದ್ಯಕೀಯ ವೃತ್ತಿ

ಒಬ್ಬ ವ್ಯಕ್ತಿಯು ವೈದ್ಯ ಅಥವಾ ವೈದ್ಯಕೀಯ ವೃತ್ತಿಯಯಲ್ಲಿದ್ದರೆ ಸೂರ್ಯ, ಚಂದ್ರ, ಶುಕ್ರ ಮತ್ತು ಮಂಗಳ ಗ್ರಹಗಳು ಬಲವಾಗಿರಬೇಕು. ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಮಾಣಿಕ್ಯ, ಮುತ್ತು ಮತ್ತು ವಜ್ರದಂತಹ ರತ್ನಗಳನ್ನು ಧರಿಸುವುದು ಸೂಕ್ತವಾಗಿದೆ.

ಇದನ್ನೂ ಓದಿ: Dream Interpretation : ಈ ಕನಸುಗಳು ಶನಿ ದೇವನಿಗೆ ಸಂಬಂಧಿಸಿವೆ, ಇವು ಶುಭ-ಅಶುಭ ಸೂಚನೆಗಳಿಗೆ ಕಾರಣ

ಅದೇ ರೀತಿ ಒಬ್ಬ ವ್ಯಕ್ತಿಯು ಶಸ್ತ್ರಚಿಕಿತ್ಸಕನಾಗಿ ಕೆಲಸ ಮಾಡುತ್ತಿದ್ದರೆ, ಅವರು ಮಾಣಿಕ್ಯ ರತ್ನಗಳು ಅಥವಾ ಹವಳದ ರತ್ನಗಳನ್ನು ಧರಿಸಲು ಸಲಹೆ ನೀಡಲಾಗಿದೆ. ಇದರ ಹೊರತಾಗಿ ಆಯುರ್ವೇದ ಅಥವಾ ಹೋಮಿಯೋಪತಿ ಕ್ಷೇತ್ರದಲ್ಲಿರುವವರು ಮುತ್ತು ರತ್ನವನ್ನು ಧರಿಸಬೇಕು.

ಇಂಜಿನಿಯರ್

ಜ್ಯೋತಿಷ್ಯದ ಪ್ರಕಾರ ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರವು ಶನಿಯೊಂದಿಗೆ ಸಂಬಂಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಲು ಬಯಸುವವರು ಶನಿ ರತ್ನವಾದ ನೀಲಮಣಿಯನ್ನು ಧರಿಸಬೇಕು.

ವಕೀಲರು ಮತ್ತು ಕಾನೂನು ಅಧಿಕಾರಿ

ವಕೀಲರು ಮತ್ತು ಕಾನೂನು ಅಧಿಕಾರಿ ಅಥವಾ ನ್ಯಾಯಾಲಯಕ್ಕೆ ಸಂಬಂಧಿಸಿದ ವೃತ್ತಿಜೀವನದಲ್ಲಿ ಶನಿ, ಗುರು ಮತ್ತು ಬುಧ ಸಹಾಯಕವಾಗಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಈ ಕ್ಷೇತ್ರದಲ್ಲಿ ವೃತ್ತಿಜೀವನಕ್ಕೆ ಪ್ರಯತ್ನಿಸುತ್ತಿರುವ ಜನರು ಹಳದಿ ನೀಲಮಣಿ ಮತ್ತು ಪಚ್ಚೆಯನ್ನು ಧರಿಸಬೇಕು. ಇದರಿಂದ ಅವರಿಗೆ ಅನುಕೂಲವಾಗಲಿದೆ.

ಕಂಪ್ಯೂಟರ್ & ಸಾಫ್ಟ್‌ವೇರ್‌

ಕಂಪ್ಯೂಟರ್ ತಂತ್ರಜ್ಞಾನ ಅಥವಾ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ವೃತ್ತಿಯನ್ನು ಮಾಡುತ್ತಿರುವ ಜನರಿಗೆ ಓನಿಕ್ಸ್ ರತ್ನವು ಪ್ರಯೋಜನಕಾರಿಯಾಗಿದೆ. ಇವರು ಜ್ಯೋತಿಷ್ಯದ ಸಲಹೆಯೊಂದಿಗೆ ಈ ರತ್ನವನ್ನು ಧರಿಸಬಹುದು.

ಇದನ್ನೂ ಓದಿ: Relationship Tips : ನಿಮ್ಮ ಸಂಗಾತಿಗೆ ಈ 4 ಭರವಸೆಗಳನ್ನು ನೀಡಿ, ಜೀವನ ಪೂರ್ತಿ ಸುಖವಾಗಿರಿ

ರಾಜಕೀಯ ಮತ್ತು ಆಡಳಿತ

ಪ್ರತಿಯೊಬ್ಬರಿಗೂ ರಾಜಕೀಯ ಮತ್ತು ಆಡಳಿತಾತ್ಮಕ ಉದ್ಯೋಗದ ಆಸೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಖ್ಯಾತಿ ಮತ್ತು ಯಶಸ್ಸನ್ನು ಪಡೆಯಲು ಹಳದಿ ನೀಲಮಣಿ ಧರಿಸುವುದು ಸೂಕ್ತ. ಅದೇ ರೀತಿ ಆಡಳಿತಾತ್ಮಕ ಕೆಲಸದಲ್ಲಿ ಗೌರವದೊಂದಿಗೆ ಸಾಮಾಜಿಕ ಪ್ರತಿಷ್ಠೆಯನ್ನು ಪಡೆಯಲು ಸೂರ್ಯ, ಚಂದ್ರ ಮತ್ತು ಗುರುವನ್ನು ಮೆಚ್ಚಿಸುವುದು ಬಹಳ ಮುಖ್ಯ. ಇದಕ್ಕಾಗಿ ಜ್ಯೋತಿಷಿಗಳು ಹಳದಿ ನೀಲಮಣಿಯನ್ನು ಧರಿಸಲು ಜನರಿಗೆ ಸಲಹೆ ನೀಡುತ್ತಾರೆ.

ಕಲೆ ಮತ್ತು ಮಾಧ್ಯಮ

ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರಿಗೆ ಶುಕ್ರ ಮತ್ತು ಬುಧಕ್ಕೆ ಸಂಬಂಧಿಸಿದ ರತ್ನಗಳನ್ನು ಧರಿಸಲು ಸಲಹೆ ನೀಡಲಾಗಿದೆ. ನಟನೆ, ಮಾಧ್ಯಮ, ಗಾಯನ, ಆಂಕರಿಂಗ್, ಮಾಡೆಲಿಂಗ್ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದವರು ಜ್ಯೋತಿಷ್ಯದ ಸಲಹೆಯೊಂದಿಗೆ ಮಾತ್ರ ರತ್ನಗಳನ್ನು ಧರಿಸಬೇಕು.

ಗ್ಲಾಮರ್ ಮತ್ತು ಶೋಬಿಜ್

ಮತ್ತೊಂದೆಡೆ ಗ್ಲಾಮರ್ ಮತ್ತು ಶೋಬಿಜ್ ಜಗತ್ತಿನಲ್ಲಿ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ಶುಕ್ರ ಗ್ರಹದ ರತ್ನವಾದ ವಜ್ರವನ್ನು ಧರಿಸಬೇಕು. ಅದೇ ರೀತಿ ನೀವು ಕಲಾವಿದರಾಗಲು ಬಯಸಿದರೆ ಚಂದ್ರ ಗ್ರಹದ ರತ್ನವಾದ ಮುತ್ತು ಧರಿಸಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News