Heart Disease: ನಿಮ್ಮ ಹೃದಯ ದುರ್ಬಲವಾಗಿದೆಯೇ? ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಹೃದ್ರೋಗದ ಎಚ್ಚರಿಕೆ ಲಕ್ಷಣಗಳು: ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ. ನಮ್ಮ ದೇಹವು ಕೆಲವು ವಿಚಿತ್ರ ಸಂಕೇತಗಳನ್ನು ನೀಡುತ್ತಿದ್ದರೆ, ಅದರ ಅಪಾಯವನ್ನು ಗುರುತಿಸುವುದು ಸಹ ಅಗತ್ಯವಾಗಿದೆ.

Written by - Puttaraj K Alur | Last Updated : Jun 23, 2023, 12:37 PM IST
  • ಭಾರತ ಸೇರಿದಂತೆ ವಿಶ್ವದಾದ್ಯಂತ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ
  • ಹೃದಯಾಘಾತಕ್ಕೆ ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರವೇ ಮುಖ್ಯ ಕಾರಣ
  • ಸರಿಯಾದ ಸಮಯಕ್ಕೆ ಹೃದ್ರೋಗದ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ
Heart Disease: ನಿಮ್ಮ ಹೃದಯ ದುರ್ಬಲವಾಗಿದೆಯೇ? ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ title=
ಹೃದಯಾಘಾತದ ಲಕ್ಷಣಗಳು

ಹೃದಯಾಘಾತದ ಲಕ್ಷಣಗಳು: ಭಾರತ ಸೇರಿದಂತೆ ವಿಶ್ವದಾದ್ಯಂತ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರವೇ ಮುಖ್ಯ ಕಾರಣ. ಆದರೆ ಅನೇಕ ಬಾರಿ ಫಿಟ್ ಆದ ಜನರು ಸಹ ಇಂತಹ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ, ಕನ್ನಡದ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್, ಗಾಯಕ ಕೆಕೆ ಮತ್ತು ರಾಜು ಶ್ರೀವಾಸ್ತವ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸರಿಯಾದ ಸಮಯಕ್ಕೆ ಹೃದ್ರೋಗದ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ನೀವು ಸಹ ಜೀವಕ್ಕೆ ಅಪಾಯ ಎದುರಿಸಬಹುದು. ನಿಮ್ಮ ಹೃದಯವು ದುರ್ಬಲವಾಗುತ್ತಿದೆ ಎಂಬುದನ್ನು ಕಂಡುಹಿಡಿಯುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Ash Gourd Benefits: ಬೂದು ಕುಂಬಳಕಾಯಿ ದೃಷ್ಟಿ ತೆಗೆಯಲು ಮಾತ್ರವಲ್ಲ... ಆರೋಗ್ಯಕ್ಕೂ ಪ್ರಯೋಜನಕಾರಿ ..!

ಹೃದಯ ವೈಫಲ್ಯದ ಲಕ್ಷಣಗಳು

1. ಎದೆ ನೋವು: ನೀವು ಆಗಾಗ್ಗೆ ಎದೆ ನೋವು ಅಥವಾ ಎದೆ ಭಾರವನ್ನು ಅನುಭವಿಸುತ್ತಿದ್ದರೆ, ನಿಮ್ಮ ಆರೋಗ್ಯ ಸರಿಯಾಗಿಲ್ಲವೆಂದು ಅರ್ಥಮಾಡಿಕೊಳ್ಳಿ. ಈ ಸಂದರ್ಭದಲ್ಲಿ ತಕ್ಷಣವೇ ನೀವು ವೈದ್ಯರನ್ನು ಸಂಪರ್ಕಿಸಬೇಕು. ಬಳಿಕ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ನಿಮಗೆ ಹೃದಯ ಕಾಯಿಲೆ ಇರುವ ಸಾಧ್ಯತೆಯಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಿರಿ.

2. ವಾಂತಿ: ಎದೆ ನೋವಿನ ನಂತರ ಅನೇಕ ಬಾರಿ ವಾಂತಿ ಸಂಭವಿಸುತ್ತದೆ, ಇದು ಹೃದಯ ಕಾಯಿಲೆಗಳನ್ನು ಸೂಚಿಸುವ ಅಪಾಯಕಾರಿ ಲಕ್ಷಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ಅಜಾಗರೂಕತೆಯು ಅಪಾಯಕಾರಿ.

3. ಹೊಟ್ಟೆ ನೋವು: ಹಲವು ಕಾರಣಗಳಿಂದ ಹೊಟ್ಟೆ ನೋವು ಬರಬಹುದು. ಆದರೆ ಇದು ಹೃದ್ರೋಗಗಳ ಎಚ್ಚರಿಕೆಯ ಸಂಕೇತವೂ ಆಗಿರಬಹುದು, ಹೀಗಾಗಿ ಇದನ್ನು ಲಘುವಾಗಿ ಪರಿಗಣಿಸಬೇಡಿ ಮತ್ತು ಸರಿಯಾದ ಕಾರಣಗಳನ್ನು ಕಂಡುಹಿಡಿಯಬೇಕು.

4. ದವಡೆಯಲ್ಲಿ ನೋವು: ನೀವು ಆಗಾಗ್ಗೆ ದವಡೆಯಲ್ಲಿ ನೋವು ಹೊಂದಿದ್ದರೆ, ಇದು ಹೃದಯ ಕಾಯಿಲೆಗಳಿಗೆ ಸಂಬಂಧಿಸಿರಬಹುದು. ಇದಕ್ಕಾಗಿ ತಕ್ಷಣವೇ ನಿಮ್ಮ ಆರೋಗ್ಯ ಪರಿಶೀಲಿಸುವುದು ಅವಶ್ಯಕ, ಇಲ್ಲದಿದ್ದರೆ ಜೀವಕ್ಕೆ ಅಪಾಯವಿರಬಹುದು.

5. ಹಠಾತ್ ಬೆವರುವಿಕೆ: ಬೇಸಿಗೆಯಲ್ಲಿ ಅಥವಾ ಜಿಮ್‌ನಲ್ಲಿ ವ್ಯಾಯಾಮದ ಸಮಯದಲ್ಲಿ ಬೆವರುವುದು ಸಾಮಾನ್ಯ. ಆದರೆ ನಿಮ್ಮ ದೇಹವು ಎಸಿ ರೂಂನಲ್ಲಿ ಮತ್ತು ಯಾವುದೇ ಕಾರಣವಿಲ್ಲದೆ ಬೆವರುತ್ತಿದ್ದರೆ ಅದು ಹೃದಯಾಘಾತದ ಸಂಕೇತವಾಗಿರಬಹುದು.

ಇದನ್ನೂ ಓದಿ: Health Tips: 50 ವರ್ಷದ ನಂತರವೂ ನೀವು ಆರೋಗ್ಯವಾಗಿರಬೇಕೇ..? ಈ ಅಭ್ಯಾಸ ರೂಢಿಸಿಕೊಳ್ಳಿ

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆ ತೆಗೆದುಕೊಳ್ಳಿ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News