ಡ್ಯಾಮೆಜ್‌ ಆಗಿರುವ ಕೂದಲಿಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು..ಟ್ರೈ ಮಾಡಿ ನೋಡಿ

Mask For Damaged Hair : ಸುಂದರವಾದ ಉದ್ದನೆಯ ಕೂದಲನ್ನು ಹೊಂದಬೇಕು ಎನ್ನುವುದು ಪ್ರತಿಯೊಬ್ಬ ಮಹಿಳೆಯ ಬಯಕೆಯು ಹೌದು. ಆದರೆ ನೀರು, ಮಾಲಿನ್ಯದಿಂದಾಗಿ ಕೂದಲು ಉದುರುವುದು, ಸೀಳಾಗುವುದು, ಮುಂತಾದ ಸಮಸ್ಯೆಗಳನ್ನು ಎದುರಿದಬೇಕಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಕಷ್ಟು ಜನ ಹಾತೊರೆಯುತ್ತಿದ್ದಾರೆ.   

Written by - Zee Kannada News Desk | Last Updated : Apr 16, 2023, 01:48 PM IST
  • ಹಾನಿಗೊಳಗಾದ ಕೂದಲನ್ನು ಸರಿಪಡಿಸುವುದು ಹೇಗೆ ಎನ್ನುವ ಪ್ರಶ್ನೆಗಳು ನಿಮ್ಮನ್ನು ಸಾಕಷ್ಟು ಸಲ ಕಾಡಿರಬಹುದು
  • ಏನು ಮಾಡಬೇಕು ಎನ್ನುವ ಗೊಂದಲಗಳನ್ನು ನೀವು ಎದುರಿಸಿರಬೇಕು
  • ಕೂದಲುಗಳು ಅನೇಕ ಸಮಸ್ಯೆಗಳಿಂದ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿವೆ
ಡ್ಯಾಮೆಜ್‌ ಆಗಿರುವ ಕೂದಲಿಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು..ಟ್ರೈ ಮಾಡಿ ನೋಡಿ  title=

Damaged Hair : ಹಾನಿಗೊಳಗಾದ ಕೂದಲನ್ನು ಸರಿಪಡಿಸುವುದು ಹೇಗೆ ಎನ್ನುವ ಪ್ರಶ್ನೆಗಳು ನಿಮ್ಮನ್ನು ಸಾಕಷ್ಟು ಸಲ ಕಾಡಿರಬಹುದು. ಏನು ಮಾಡಬೇಕು ಎನ್ನುವ ಗೊಂದಲಗಳನ್ನು ನೀವು ಎದುರಿಸಿರಬೇಕು. ಏಕೆಂದರೆ ಕೂದಲುಗಳು ಅನೇಕ ಸಮಸ್ಯೆಗಳಿಂದ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿವೆ ಅವುಗಳಿಗೆ ಮರುಜೀವ ತುಂಬುವ ಕೆಲವು ನೈಸರ್ಗಿಕ ಹೇರ್‌ ಪ್ಯಾಕ್ ಗಳಿವೆ. 

*ಬಾಳೆಹಣ್ಣು ಮತ್ತು ಆಲಿವ್ ಆಯಿಲ್ ಮಾಸ್ಕ್
1 ಮಾಗಿದ ಬಾಳೆಹಣ್ಣನ್ನು ತೆಗೆದುಕೊಂಡು ಅದರ ಜೊತೆ 1 ಚಮಚ ಬಾದಾಮಿ ಎಣ್ಣೆ, ಆಲಿವ್ ಎಣ್ಣೆ, ಅರ್ಗಾನ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. 

ಇದನ್ನೂ ಓದಿ-ಮಸೂರ್‌ ದಾಲ್‌ನಿಂದ ತ್ವಚೆಗೆ ಆಗುವ ಅನುಕೂಲಗಳಿವು..!

*ಸೂರ್ಯಕಾಂತಿ ಎಣ್ಣೆಯ ಮಾಸ್ಕ್
ಸೂರ್ಯಕಾಂತಿ ಎಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ ತಲೆಗೆ ಹಚ್ಚಿಕೊಳ್ಳಿ. ಆದರೆ ಈ ಎಣ್ಣೆ ತಲೆಯಲಗಲಿ 3 ಗಂಟೆಗಳಿಂತ ಹೆಚ್ಚು ಇರದಂತೆ ನೋಡಿಕೊಳ್ಳಿ. 

*ಜೇನುತುಪ್ಪ ಮತ್ತು ಆಲಿವ್ ಎಣ್ಣೆ
ಜೇನುತುಪ್ಪಕ್ಕೆ ಜೇನುತುಪ್ಪದ ಅರ್ಧದಷ್ಟು ಆಲಿವ್‌ ಎಣ್ಣೆಯನ್ನು ಮಿಶ್ರಣಮಾಡಿ ಕೂದಲಿಗೆ ಹಚ್ಚಿ. ಬುಡದಿಂದ ತುದಿಯವರೆಗೂ ಹಚ್ಚಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. 

ಇದನ್ನೂ ಓದಿ-Health Tipes: ಹರಿವೆ ಸೊಪ್ಪಿನ ಬಗ್ಗೆ ಅರಿವು ಇದೆಯೇ 

*ಕುಂಬಳಕಾಯಿ ಮತ್ತು ಹನಿ ಮಾಸ್ಕ್
ಒಂದು ಕಪ್‌ ಕುಂಬಳಕಾಯಿಯ ರಸವನ್ನು ತೆಗೆದುಕೊಂಡು 1-2 ಟೇಬಲ್ಸ್ಪೂನ್ ಜೇನುತುಪ್ಪದೊಂದಿಗೆ ಮಿಶ್ರಣಮಾಡಿ ತಲೆಗೆ ಅನ್ವಯಿಸಿ ನಂತರ ತೊಳೆಯಿರಿ. 

Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News