Sanatan Dharma Rules : ಮಲಗಿರುವವರನ್ನು ಏಕೆ ದಾಟಬಾರದು? ಇದು ಮಹಾಭಾರತದ ಕಥೆ!

ಒಬ್ಬ ವ್ಯಕ್ತಿಯು ಮಲಗಿದ್ದರೆ ಅವರನ್ನು ದಾಟಿ ಹೋಗಬಾರದು. ಹೀಗೆ ಮಾಡುವುದು ಅಶುಭವೆಂದು ಎಂದು ಹೇಳಲಾಗುತ್ತದೆ, ಹಾಗಾದರೆ ಮಲಗುವ ವ್ಯಕ್ತಿಯನ್ನು ಏಕೆ ದಾಟಬಾರದು? ಇದಕ್ಕೆ ಉತ್ತರ ಮಹಾಭಾರತದಲ್ಲಿ ನಡೆದ ಘಟನೆಯಲ್ಲಿ ಹೇಳಲಾಗಿದೆ. ಅದು ಇಲ್ಲಿದೆ ಓದಿ..

Written by - Channabasava A Kashinakunti | Last Updated : Nov 12, 2022, 08:25 PM IST
  • ಸನಾತನ ಧರ್ಮದಲ್ಲಿ ಹಲವು ರೀತಿಯ ನಂಬಿಕೆಗಳು
  • ಧರ್ಮದಲ್ಲಿ ಅಶುಭವೆಂದು ಪರಿಗಣಿಸಲಾದ ಸಂಪ್ರದಾಯಗಳಿವೆ
  • ಮಹಾಭಾರತದಲ್ಲಿ ನಡೆದ ಘಟನೆ ಏನು?
Sanatan Dharma Rules : ಮಲಗಿರುವವರನ್ನು ಏಕೆ ದಾಟಬಾರದು? ಇದು ಮಹಾಭಾರತದ ಕಥೆ! title=

Sanatan Dharma Rules : ಸನಾತನ ಧರ್ಮದಲ್ಲಿ ಹಲವು ರೀತಿಯ ನಂಬಿಕೆಗಳು ಚಾಲ್ತಿಯಲ್ಲಿವೆ. ಧರ್ಮದಲ್ಲಿ ಅಶುಭವೆಂದು ಪರಿಗಣಿಸಲಾದ ಸಂಪ್ರದಾಯಗಳಿವೆ. ಬಾಲ್ಯದಿಂದಲೂ ನಮಗೆ ಹಲವಾರು ರೀತಿಯ ರೀತಿ-ರಿವಾಜುಗಳನ್ನು ಕಲಿಸಲಾಗುತ್ತದೆ. ಅದರಲ್ಲಿ ಒಂದು ನಿಯಮ ನಿಮಗೆ ತುಂಬಾ ಚನ್ನಾಗಿ ಗೊತ್ತು. ಒಬ್ಬ ವ್ಯಕ್ತಿಯು ಮಲಗಿದ್ದರೆ ಅವರನ್ನು ದಾಟಿ ಹೋಗಬಾರದು. ಹೀಗೆ ಮಾಡುವುದು ಅಶುಭವೆಂದು ಎಂದು ಹೇಳಲಾಗುತ್ತದೆ, ಹಾಗಾದರೆ ಮಲಗುವ ವ್ಯಕ್ತಿಯನ್ನು ಏಕೆ ದಾಟಬಾರದು? ಇದಕ್ಕೆ ಉತ್ತರ ಮಹಾಭಾರತದಲ್ಲಿ ನಡೆದ ಘಟನೆಯಲ್ಲಿ ಹೇಳಲಾಗಿದೆ. ಅದು ಇಲ್ಲಿದೆ ಓದಿ..

ಮಹಾಭಾರತದಲ್ಲಿ ನಡೆದ ಘಟನೆ ಏನು?

ಮಹಾಭಾರತದ ಕಥೆಯ ಪ್ರಕಾರ, ಒಮ್ಮೆ ಭೀಮನು ಯುದ್ಧಕ್ಕೆ ಹೋಗುತ್ತಿದ್ದನು, ಆ ಸಮಯದಲ್ಲಿ ಹನುಮಂತನು ಭೀಮನನ್ನು ತಡೆಯಲು ದಾರಿಯಲ್ಲಿ ಮಲಗಲು ವಯಸ್ಸಾದ ಕೋತಿಯಾದನು. ಈ ಕಾರಣಕ್ಕಾಗಿ ಅವನ ಬಾಲವು ಇಡೀ ಮಾರ್ಗವನ್ನು ಅಡ್ಡಿಪಡಿಸಿತು. ಭೀಮನು ಆ ದಾರಿಯಲ್ಲಿ ಹಾದುಹೋದಾಗ ಅವನು ಬಾಲವನ್ನು ದಾಟಲಿಲ್ಲ. 

ಇದನ್ನೂ ಓದಿ : Chanakya Niti : ನಿಮ್ಮ ಸಂತೋಷದ ಜೀವನಕ್ಕೆ ಚಾಣಕ್ಯನ ಸಲಹೆಗಳು!

ಕಾರಣ ಹೇಳಿದ ಭೀಮ

ಭೀಮನು ಹನುಮಾನಿಗೆ ಬಾಲವನ್ನು ತೆಗೆಯುವಂತೆ ಕೇಳಿದನು, ಆದರೆ ಹನುಮಾನು ಬಲಹೀನತೆಯಿಂದ ಬಾಲವನ್ನು ತೆಗೆಯಲು ನಿರಾಕರಿಸಿ, ಬಾಲವನ್ನು ದಾಟಿ ಹೋಗಬೇಕೆಂದು ಹೇಳಿದನು, ಆದರೆ ಭೀಮನು ಹಾಗೆ ಮಾಡಲಿಲ್ಲ, ಆಗ ಭೀಮನು ಈ ಪ್ರಪಂಚದ ಎಲ್ಲಾ ಜೀವಿಗಳಲ್ಲಿ , ದೇವರಿದ್ದಾನೆ, ಭಾಗ ಅಸ್ತಿತ್ವದಲ್ಲಿದೆ, ಹಾಗಾಗಿ, ಯಾವುದೇ ಜೀವಿಯನ್ನು ದಾಟುವುದು ಎಂದರೆ ದೇವರನ್ನು ಅಗೌರವಿಸಿದಂತೆ ಎಂದು ಉತ್ತರಿಸಿದ.

ಆಗ ಭೀಮ ಮಾಡಿದ್ದೇನು?

ಈ ಕಾರಣದಿಂದ ಭೀಮನು ಹನುಮಾನ ಬಾಲವನ್ನು ದಾಟಲಿಲ್ಲ, ತಾನೆ ಬಾಲವನ್ನು ತೆಗೆದನು, ಆದರೆ ಆ ಸಮಯದಲ್ಲಿ ಭೀಮನು ತನ್ನ ಪೂರ್ಣ ಶಕ್ತಿ  ಹಾಕಿ ಹನುಮಾನ ಬಾಲವನ್ನು ತೆಗೆಯಲು ಆಗಲಿಲ್ಲ, ಆಗ ಅವನಿಗೆ ಅರ್ಥವಾಯಿತು, ಇದು ಸಾಮಾನ್ಯ ಕೋತಿಯಲ್ಲ ಎಂದು. ನಂತರ ಹನುಮಂತನು ಭೀಮನಿಗೆ ತನ್ನನ್ನು ಪರಿಚಯಿಸಿಕೊಂಡು, ತನ್ನ ಬೃಹತ್ ರೂಪವನ್ನು ತೋರಿಸಿದನು, ನಂತರ ಹನುಮಂತನು ಭೀಮನಿಗೆ ಯುದ್ಧವನ್ನು ಗೆಲ್ಲುವಂತೆ ಆಶೀರ್ವದಿಸಿದನು.

ಇದನ್ನೂ ಓದಿ : Sunset Tips : ಮುಸ್ಸಂಜೆ ವೇಳೆಯಲ್ಲಿ ತಪ್ಪಿಯೂ ಮಾಡಬೇಡಿ ಈ 5 ಕೆಲಸ, ಇವು ಅಶುಭ ಸಂಕೇತ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News