ಮನುಷ್ಯರಿಗಿರಲಿ ಹೋಳಿ ಪ್ರಾಣಿಗಳಿಗಾಗದಿರಲಿ ಹಾನಿ...!

Holy Effects on Animals : ಸಾಕುಪ್ರಾಣಿಗಳ ಮಾಲೀಕರಾಗಿ ಹೋಳಿ ಆಚರಿಸುವ ನಡುವೆ ಅವುಗಳ ಸುರಕ್ಷತೆಯ ವಿಷಯದಲ್ಲಿ ರಾಜಿಮಾಡಿಕೊಳ್ಳದೆ ಇರುವುದು ಮುಖ್ಯ. ಏಕೆಂದರೆ ಹಬ್ಬಗಳು ಅವುಗಳ ಆರೋಗ್ಯ ಹಾಗೂ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದು. ಬೇಸಿಗೆಯ ವಾತಾವರಣ ಹಾಗೂ ಹೋಳಿಯ ಸಂಭ್ರಮದ ನಡುವೆ ನಿಮ್ಮ ಮುದ್ದಿನ ಪ್ರಾಣಿ ಬೇಗನೆ ನಿರ್ಜಲೀಕರಣಕ್ಕೆ ಒಳಗಾಗಬಹುದು. 

Written by - Zee Kannada News Desk | Last Updated : Mar 7, 2023, 07:00 PM IST
  • ದೊಡ್ಡ ಧ್ವನಿಯಲ್ಲಿ ಮ್ಯೂಸಿಕ್‌ ಹಾಕುವುದು,
  • ಅವುಗಳ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿಸಿ.
  • ನಮ್ಮ ಸುತ್ತಮುತ್ತಲಿನ ಪ್ರಾಣಿಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ
ಮನುಷ್ಯರಿಗಿರಲಿ ಹೋಳಿ ಪ್ರಾಣಿಗಳಿಗಾಗದಿರಲಿ ಹಾನಿ...!  title=

ದೊಡ್ಡ ಧ್ವನಿಯಲ್ಲಿ ಮ್ಯೂಸಿಕ್‌ ಹಾಕುವುದು, ಪಟಾಕಿ ಹೊಡೆಯುವುದು, ವಾಟರ್‌ ಬಲೂನ್‌ ಒಡೆಯುವುದು ಇಂತಹ ಶಬ್ದಗಳು ಸಾಕುಪ್ರಾಣಿಗಳಲ್ಲಿ ಒತ್ತಡ, ಆತಂಕ ಉಂಟಾಗಲು ಕಾರಣವಾಗಬಹುದು. ಆ ಕಾರಣಕ್ಕೆ ನಿಮ್ಮ ಮುದ್ದಿನ ಕೂಸನ್ನು ಶಾಂತಿ ಹಾಗೂ ಸುರಕ್ಷಿತ ಜಾಗದಲ್ಲಿ ಇರಿಸುವುದು ಬಹಳ ಮುಖ್ಯ. ಸದ್ದು, ಗದ್ದಲ, ಹೆಚ್ಚು ಜನ ಸೇರಿರುವ ಜಾಗದಿಂದ ದೂರ ಇರಿಸಿ. ಹೊರಗಡೆ ಕರೆದುಕೊಂಡು ಹೋಗಲೇಬೇಕು ಎನ್ನುವ ಹಂಬಲವಿದ್ದರೆ ಅದರ ಕಿವಿಗಳಿಗೆ ಇಯರ್‌ ಫ್ಲಗ್‌ ಅಥವಾ ಹತ್ತಿಯ ಉಂಡೆ ಸಿಕ್ಕಿಸಿ, ಕಣ್ಣುಗಳಿಗೆ ಗಾಗಲ್‌ ಅಥವಾ ಸುರಕ್ಷಿತ ಗ್ಲಾಸ್‌ ತೊಡಿಸಿ.

ಆ ಕಾರಣಕ್ಕೆ ಅವಕ್ಕೆ ಸಾಧ್ಯವಾದಷ್ಟು ತಾಜಾ ನೀರು ಕುಡಿಸಿ. ತಂಪು ಪಾನೀಯ ಹಾಗೂ ಅವುಗಳ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಆಹಾರ ಪದಾರ್ಥಗಳಿಂದ ದೂರವಿರಿಸಿ. ಹೋಳಿ ಸಂಭ್ರಮದಲ್ಲಿ ಸಾಕುಪ್ರಾಣಿಯನ್ನೂ ಸೇರಿಸಿಕೊಳ್ಳಬೇಕು ಎನ್ನುವ ಹಂಬಲ ಇದ್ದರೆ, ಮನೆಯ ಟೆರೆಸ್‌, ಅಂಗಳ, ಕಾರ್‌ಶೆಡ್‌ ಹೀಗೆ ಒಳಾಂಗಣ ಜಾಗವನ್ನೇ ಆರಿಸಿಕೊಳ್ಳಿ. ಸಾಮಾನ್ಯವಾಗಿ ಒಳಾಂಗಣ ಜಾಗಗಳು ಸ್ವಚ್ಛವಾಗಿ, ಸುರಕ್ಷಿತವಾಗಿರುತ್ತವೆ. ಇದರಿಂದ ಗಾಯ, ನೋವು ಉಂಟಾಗವುದನ್ನು ತಪ್ಪಿಸಬಹುದು.

ಇದನ್ನೂ ಓದಿ-Kangana Ranaut:ʼಅದೊಂದೇ  ಕಾರಣಕ್ಕೆ ಆ ಚಿತ್ರಕ್ಕೆ ಸಹಿ  ಮಾಡಿದೆʼ- ಕಂಗನಾ ರಣಾವತ್

ಹೋಳಿಯಾಡಿದ ಬಳಿಕ ನಿಮ್ಮ ಮುದ್ದಿನ ಮರಿಗೆ ಸ್ನಾನ ಮಾಡಿಸುವುದನ್ನು ಮರೆಯಬೇಡಿ. ಸಾಕುಪ್ರಾಣಿಗಳಿಗೆಂದೇ ಇರುವ ಶ್ಯಾಂಪೂ ಮತ್ತು ಬಿಸಿನೀರಿನಿಂದ ಸ್ನಾನ ಮಾಡಿಸಿ. ಇದರಿಂದ ರಾಸಾಯನಿಕಗಳು ಹಾಗೂ ಹಾನಿಕಾರಕ ಅಂಶಗಳು ತುಪ್ಪಳ ಅಥವಾ ಚರ್ಮಕ್ಕೆ ಅಂಟಿಕೊಂಡಿದ್ದರೆ ಸ್ವಚ್ಛವಾಗುತ್ತದೆ. ಸ್ನಾನ ಮಾಡಿಸುವಾಗ ಅವುಗಳ ಕಿವಿ, ತುಪ್ಪ ಹಾಗೂ ಬಾಯಿಯನ್ನು ಮರೆಯದೇ ಸ್ವಚ್ಛ ಮಾಡಿ. 

ನಾವು ಮಾಡುವ ಆಚರಣೆ ಯಾರಿಗೂ ಹಾನಿಯನ್ನು ಉಂಟುಮಾಡಬಾರದು ಅದರಲ್ಲೂ ಪ್ರಾಣಿ ಪಕ್ಷಿಗಳಿಗೆ ನಮ್ಮಿಂದ ಯಾವದೇ ತೊಂದರೆ ಆಗದಂತೆ ಎಚ್ಚರ ವಹಿಸುವುದು ನಮ್ಮೇಲ್ಲರ ಜವಾಬ್ದಾರಿ. ನಮ್ಮ ಸುತ್ತಮುತ್ತಲಿನ ಪ್ರಾಣಿಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಾಣಿಗಳನ್ನು ನಿಮ್ಮ ಜೊತೆ ಹಬ್ಬದಲ್ಲಿ ಬಾಗಿಯಾಗಿಸುವ ಆಸೆಯಿದ್ದರೆ ಆದಷ್ಟು ಅವುಗಳ ರಕ್ಷಣಾ ನಿಯಮಗಳನ್ನು ಪಾಲಿಸಿ ಹೋಳಿ ಆಚರಿಸಿ. 

ಇದನ್ನೂ ಓದಿ-ಯಶ್‌ ಪ್ಯಾನ್ಸ್‌ ಘರ್ಜನೆಗೆ ಹೆದರಿ ಕ್ಷಮೆ ಕೇಳಿದ ʼಕೇಕೆ ಹಾಕಿ ನಕ್ಕಿದ್ದ ನಿರ್ದೇಶಕರುʼ..! 

  ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News