Evil Eye : ಮಗು, ಮನೆ, ವ್ಯವಹಾರಕ್ಕೆ ಬಿದ್ದ ದೃಷ್ಟಿ ನಿವಾಳಿಸಿ ತೆಗೆಯುವುದು ಹೇಗೆ..?

ಕೆಟ್ಟ ದೃಷ್ಟಿ ಇದೆಯೋ ಇಲ್ಲವೋ ಗೊತ್ತಿಲ್ಲ.  ಯಾರದ್ದೂ ಕೆಟ್ಟ ದೃಷ್ಟಿ (Evil Eye)  ತಾಗದೇ ಇರಲಿ ಎಂದು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದನ್ನು ನಾವು ನೋಡುತ್ತೇವೆ. 

Written by - Ranjitha R K | Last Updated : Feb 2, 2021, 09:20 AM IST
  • ಮಗು, ಮನೆ, ವ್ಯವಹಾರಕ್ಕೆ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂಬ ಮುನ್ನೆಚ್ಚರಿಕೆ ಇರುತ್ತದೆ
  • ಮಗುವಿಗೆ ದೃಷ್ಟಿ ತೆಗೆಯುವುದು ಹೇಗೆ, ಕೆಟ್ಟ ದೃಷ್ಟಿಯಿಂದ ಮನೆಯನ್ನು ಹೇಗೆ ರಕ್ಷಿಸಬೇಕು
  • ದೃಷ್ಟಿ ತೆಗೆದ ಮೇಲೆ ನಿಮ್ ಉದ್ಯಮ ಉದ್ದಾರವಾಗುತ್ತಾ..?
Evil Eye : ಮಗು, ಮನೆ, ವ್ಯವಹಾರಕ್ಕೆ  ಬಿದ್ದ ದೃಷ್ಟಿ ನಿವಾಳಿಸಿ ತೆಗೆಯುವುದು ಹೇಗೆ..? title=
Evil Eye (file photo)

ಬೆಂಗಳೂರು : ಕೆಟ್ಟ ದೃಷ್ಟಿ ಇದೆಯೋ ಇಲ್ಲವೋ ಗೊತ್ತಿಲ್ಲ.  ಯಾರದ್ದೂ ಕೆಟ್ಟ ದೃಷ್ಟಿ (Evil Eye)  ತಾಗದೇ ಇರಲಿ ಎಂದು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದನ್ನು ನಾವು ನೋಡುತ್ತೇವೆ. ಮನೆಯಲ್ಲಿ ಅಜ್ಜಿ, ಅಮ್ಮ  ಯಾರದೋ ಕೆಟ್ಟ ದೃಷ್ಟಿ ತಾಗದೇ ಇರಲಿ ಎಂದು ಹೇಳಿಕೊಂಡು ವಿಧ ವಿಧಾನಗಳಿಂದ  ಉಪಚಾರ ಮಾಡುವುದನ್ನು ನೋಡಿದ್ದೇವೆ. ಅದರಲ್ಲೂ, ಸಣ್ಣ ಮಕ್ಕಳಿಗೆ (Kid) ದೃಷ್ಟಿ ಬೀಳದಿರಲಿ ಎನ್ನುವ ಮುಂಜಾಗ್ರತೆ ಬಲವಾಗಿರುತ್ತೆ.  ದೃಷ್ಟಿ ಬಿದ್ದಿದೆ ಅನ್ನೋ ಅನುಮಾನ ಬಂದು ಬಿಟ್ಟರೆ ದೃಷ್ಟಿ ತೆಗೆದು ಬಿಡುತ್ತಾರೆ. ಹಾಗಾದರೆ, ದೃಷ್ಟಿ  ಬಿದ್ದ ಲಕ್ಷಣಗಳೇನು,,? ಅದನ್ನು ತೆಗೆಯುವುದು ಹೇಗೆ..? (Evil Eye Home Remedies)

ದೃಷ್ಟಿ ಬಿದ್ದಾಗ ಮಕ್ಕಳು ಅಳೋದನ್ನು ನಿಲ್ಲಿಸುವುದಿಲ್ಲ..!
ಮಕ್ಕಳಿಗೆ ಬೇಗ ದೃಷ್ಟಿ ತಾಗುತ್ತದೆ. ಆಗ ಮಕ್ಕಳು ಏನು ಮಾಡಿದರೂ ಅಳು ನಿಲ್ಲಿಸುವುದಿಲ್ಲ.  ಊಟ ತಿಂಡಿ (Food) ಬಿಟ್ಟು ರಚ್ಚೆ ಮಾಡುತ್ತವೆ. ಹಾಗೇ ಏನಾದರೂ ಕಂಡು ಬಂದರೆ ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎಂದರ್ಥ. ಅದನ್ನು ತೆಗೆಯಬೇಕು. ಎರಡು ಒಣಮೆಣಸು (Pepper),  ಸ್ವಲ್ಪ ಕಲ್ಲುಪ್ಪು ಮತ್ತು ಸ್ವಲ್ಪ ಸಾಸಿವೆ ಬೀಜ (Mustard) ಹಿಡಿದುಕೊಂಡು ಮಗುವಿನ ಮೇಲೆ ಮೂರು ಸಲ ನಿವಾಳಿಸಿ. ನಂತರ ಅವೆಲ್ಲಾ ವಸ್ತುಗಳನ್ನು ಸುಟ್ಟು ಬಿಡಿ. ಈ ಎಲ್ಲಾ ವಸ್ತುಗಳನ್ನು ಸುಟ್ಟ ಬಳಿಕ ಮಕ್ಕಳಿಗೆ ಬಿದ್ದ ಕೆಟ್ಟ ದೃಷ್ಟಿ ನಿವಾರಣೆಯಾಗುತ್ತದೆ. 

ಇದನ್ನೂ ಓದಿ: Vastu tips : ನಟರಾಜ ಶಿವ, ಮಹಾಕಾಳಿಯ ಮೂರ್ತಿ ಮನೆಯ ಮಂದಿರದಲ್ಲಿ ಏಕಿಡರಬಾರದು..? 2 ಗಣೇಶ ಮೂರ್ತಿ ಇದ್ದರೆ ಏನಾಗುತ್ತದೆ..?

ಹತ್ತಿ ಬತ್ತಿಯಿಂದ ದೃಷ್ಟಿ ತೆಗೆಯುವುದು ಹೇಗೆ..?
ದೃಷ್ಟಿ ತೆಗೆಯಲು ಇನ್ನೊಂದು ವಿಧಾನ ಬಳಸುತ್ತಾರೆ. ಅದೇನೆಂದರೆ, ಒಂದು ಹತ್ತಿ ಬತ್ತಿ (Cotton) ತೆಗೆದುಕೊಳ್ಳಿ. ಅದನ್ನು ಸಾಸಿವೆ ಎಣ್ಣೆಯಲ್ಲಿ ಚೆನ್ನಾಗಿ ಅದ್ದಿ. ಅದ್ದಿದ ಬತ್ತಿಯನ್ನು ಮಗುವಿನ ಮೇಲೆ ಮೂರು ಸಲ ನಿವಾಳಿಸಿ. ಆಮೇಲೆ ಅದನ್ನು ಸುಟ್ಟು ಬಿಡಿ.  ಬತ್ತಿ ಸುಟ್ಟು ಹೋದ ಮೇಲೆ ಮಗುವಿಗೆ ಬಿದ್ದ ಕೆಟ್ಟ ಋಷ್ಟಿ ಕೂಡಾ ಹೋಗುತ್ತದೆಯಂತೆ. 

ಬಿಸಿನೆಸ್ ಗೆ ದೃಷ್ಟಿ ಬಿದ್ದರೆ..?
ನೀವು ನಿರಂತರ ಶ್ರಮ ಪಡುತ್ತಿದ್ದರೂ, ವ್ಯಾಪಾರದಲ್ಲಿ (Business) ನಿಮಗೆ ನಷ್ಟವಾಗುತ್ತಿದ್ದರೆ ಖಂಡಿತ ನಿಮ್ಮ ವ್ಯವಹಾರದ ಮೇಲೆ ಯಾರದ್ದೋ ದೃಷ್ಟಿಯಾಗಿದೆ ಎಂದರ್ಥ.  ಅದಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಶನಿವಾರ ಒಂದು ಹಸಿ ನಿಂಬೆ ಕಾಯಿ (Lemon) ತಂದು  ನಿಮ್ಮ ವ್ಯವಹಾರದ ಜಾಗದ ನಾಲ್ಕೂ ಗೋಡೆಗಳಿಗೆ ಅದನ್ನು ನಿವಾಳಿಸಿ. ನಂತರ ಅದನ್ನು ನಾಲ್ಕು ಕಟ್ ಮಾಡಿ ನಾಲ್ಕೂ ದಿಕ್ಕಿಗೂ ಎಸೆಯಿರಿ. ಹೀಗೆ ಮಾಡಿದರೆ ವ್ಯವಹಾರಕ್ಕೆ ಬಿದ್ದ ದೃಷ್ಟಿ ಹೋಗುತ್ತದೆಯಂತೆ. ಉದ್ಯಮದಲ್ಲಿ ಸಿಕ್ಕಾಪಟ್ಟೆ ನಷ್ಟವಾಗುತ್ತಿದ್ದರೆ ಖಂಡಿತಾ ನಿಮಗೆ ದೃಷ್ಟಿ ಬಿದ್ದಿದೆ ಎಂದು ಅಂದಾಜಿಸಬಹುದು. ಹೀಗಿರುವಾಗ, ವ್ಯವಹಾರ ಕೊಠಡಿಯ ನಾಲ್ಕೂ ಗೋಡೆಗಳಿಗೆ ಮೊಳೆ ಹೊಡೆಯಿರಿ.  ಇದಾದ ಬಳಿಕ ಯಾವ ಕೆಟ್ಟ ದೃಷ್ಟಿಯೂ ನಿಮ್ಮ ವ್ಯವಹಾರದ ಮೇಲೆ ಬೀಳುವುದಿಲ್ಲ. 

ಇದನ್ನೂ ಓದಿ: ನೀವು ಕಡಿಮೆ ಬಜೆಟ್ ನಲ್ಲಿ ಮನೆ ಕಟ್ಟುವುದು ಹೇಗೆ ಗೊತ್ತೇ? ಇಲ್ಲಿನ ಕ್ರಮಗಳನ್ನು ಅನುಸರಿಸಿ

ಮನೆಗೆ ದೃಷ್ಟಿ ಬಿದ್ದಾಗ..?
ಮನೆ ಮೇಲೂ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆಗಳಿರುತ್ತದೆ.  ಹೀಗಾದಾಗ ನೀವು ಅಶೋಕ ಮರದ ಎಲೆಗಳನ್ನು ಉರುಟುರುಟಾಗಿ ಸುತ್ತಿ ಹಾರ ಮಾಡಿ, ಮನೆಯ ಬಾಗಿಲಿಗೆ ನೇತು ಹಾಕಿ.  ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ (Positive Energy)  ಬರುತ್ತದೆ. ಜೊತೆಗೆ ಕೆಟ್ಟ ದೃಷ್ಟಿಯ ಪ್ರಭಾವ ಸಮಾಪ್ತವಾಗುತ್ತದೆ. 

ಮುಖ್ಯ ದ್ವಾರಕ್ಕೆ ಕುದುರೆ ಲಾಳ ಕಟ್ಟಿ
ಮನೆಗೆ  ಬಿದ್ದ ದೃಷ್ಟಿ ತೆಗೆಯಬೇಕಾದರೆ, ಕಪ್ಪು ಕುದುರೆಯ ಲಾಳ ತಂದು ಅದನ್ನು ಸಾಸಿವೆ ಎಣ್ಣೆಯಲ್ಲಿ (Mustard Oil) ಅದ್ದಿ. ನಂತರ ಮುಖ್ಯ ದ್ವಾರ ಬಾಗಿಲಿಗೆ ನೇತುಹಾಕಿ.  ಇದಾದ ಮೇಲೆ ನಿಮ್ಮ ಮನೆಗೆ ಯಾರ ಕೆಟ್ಟ ದೃಷ್ಟಿ ಕೂಡಾ ತಾಗುವುದಿಲ್ಲ.

ಇದನ್ನೂ ಓದಿ: Vastu Tips:ಈ ವಸ್ತುಗಳನ್ನು ಕೂಡಲೇ ಮನೆಯಿಂದ ಹೊರಹಾಕಿ

ಇದು ಖಂಡಿತವಾಗಿಯೂ ನಂಬಿಕೆಗೆ ಸಂಬಂಧಪಟ್ಟವಿಚಾರ. ಹಾಗೆಂದುಕೊಂಡು ಎಲ್ಲಾ ಸಂದರ್ಭದಲ್ಲೂ ದೃಷ್ಟಿ ಆಗಿದೆ ಎಂದುಕೊಳ್ಳವುದು ಸರಿಯಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News