How to contro high BP : ಈ ಮೂರು ಅಭ್ಯಾಸಗಳಿಂದ ಹೆಚುತ್ತದೆ ಹೈ ಬ್ಲಡ್ ಪ್ರೆಶರ್ ಅಪಾಯ . ! ಇಂದೇ ಬದಲಾಯಿಸಿಕೊಳ್ಳಿ ನಿಮ್ಮ ಜೀವನಶೈಲಿ

How to contro high BP : ಅಧಿಕ ರಕ್ತದೊತ್ತಡದ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯುವುದು ಬಹಳ ಮುಖ್ಯ.  ಮಾಡುವ ಸಣ್ಣ ತಪ್ಪುಗಳಿಂದಾಗಿ ಅಧಿಕ ರಕ್ತದೊತ್ತಡದ ಸಮಸ್ಯೆಯು ದೀರ್ಘಕಾಲ ಉಳಿಯಬಹುದು. ಹಾಗಿದ್ದರೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ತಪ್ಪಿಸಲು ಯಾವ ಅಭ್ಯಾಸಗಳಿಂದ ದೂರವಿರಬೇಕು ನೋಡೋಣ.

Written by - Ranjitha R K | Last Updated : Apr 18, 2022, 01:51 PM IST
  • ಅಧಿಕ ರಕ್ತದೊತ್ತಡವು ಗಂಭೀರವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ.
  • ಅಧಿಕ ರಕ್ತದೊತ್ತಡದ ಮುಖ್ಯ ಕಾರಣಗಳು ಯಾವುವು
  • ಅಧಿಕ ರಕ್ತದೊತ್ತಡವನ್ನು ತಪ್ಪಿಸಲು 3 ಕೆಟ್ಟ ಅಭ್ಯಾಸಗಳಿಂದ ದೂರವಿರಿ
How to contro high BP : ಈ ಮೂರು ಅಭ್ಯಾಸಗಳಿಂದ ಹೆಚುತ್ತದೆ ಹೈ ಬ್ಲಡ್ ಪ್ರೆಶರ್ ಅಪಾಯ . ! ಇಂದೇ ಬದಲಾಯಿಸಿಕೊಳ್ಳಿ ನಿಮ್ಮ ಜೀವನಶೈಲಿ  title=
How to contro high BP (file photo)

ಬೆಂಗಳೂರು  : How to contro high BP : ಅಧಿಕ ರಕ್ತದೊತ್ತಡವು ಗಂಭೀರವಾದ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಹೃದ್ರೋಗಕ್ಕೆ ಪ್ರಮುಖ ಕಾರಣವಾಗಿದೆ. ಅಧಿಕ ರಕ್ತದೊತ್ತಡವನ್ನು ಅಧಿಕ ಬಿಪಿ ಸಮಸ್ಯೆ ಎಂದು ಕರೆಯಲಾಗುತ್ತದೆ. ಇದರಲ್ಲಿ ಅಪಧಮನಿಗಳಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ. ಈ ಒತ್ತಡದ ಹೆಚ್ಚಳದಿಂದಾಗಿ, ರಕ್ತನಾಳಗಳಲ್ಲಿ ರಕ್ತದ ಹರಿವನ್ನು ಕಾಪಾಡಿಕೊಳ್ಳಲು ಹೃದಯವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ, ಅಧಿಕ ರಕ್ತದೊತ್ತಡದ ಸಮಸ್ಯೆಯು ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದ ಎದುರಾಗುತ್ತದೆ. 

ಅಧಿಕ ರಕ್ತದೊತ್ತಡದ ಮುಖ್ಯ ಕಾರಣಗಳು :
- ಬೊಜ್ಜು
- ಧೂಮಪಾನ  - ಮದ್ಯ ಸೇವನೆ
- ಅಸಮತೋಲನ ಆಹಾರ ಪದ್ದತಿ, 
- ನಿದ್ರೆಯ  ಕೊರತೆ -
-ಉದ್ವೇಗ ಅಥವಾ ಖಿನ್ನತೆ 
-ದೈಹಿಕ ಚಟುವಟಿಕೆ ಕಡಿಮೆ

ಅಧಿಕ ರಕ್ತದೊತ್ತಡವನ್ನು ತಪ್ಪಿಸಲು 3 ಕೆಟ್ಟ ಅಭ್ಯಾಸಗಳಿಂದ ದೂರವಿರಿ : 
ಅಧಿಕ ರಕ್ತದೊತ್ತಡದ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯುವುದು ಬಹಳ ಮುಖ್ಯ.  ಮಾಡುವ ಸಣ್ಣ ತಪ್ಪುಗಳಿಂದಾಗಿ ಅಧಿಕ ರಕ್ತದೊತ್ತಡದ ಸಮಸ್ಯೆಯು ದೀರ್ಘಕಾಲ ಉಳಿಯಬಹುದು. ಹಾಗಿದ್ದರೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ತಪ್ಪಿಸಲು ಯಾವ ಅಭ್ಯಾಸಗಳಿಂದ ದೂರವಿರಬೇಕು ನೋಡೋಣ. 

ಇದನ್ನೂ ಓದಿ : ಮಧುಮೇಹದ ಈ ಸಾಮಾನ್ಯ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ

1. ಹೆಚ್ಚುವರಿ ಉಪ್ಪು ಸೇವನೆ :
ಉಪ್ಪು ಅಥವಾ ಅದರಲ್ಲಿ ಕಂಡುಬರುವ ಸೋಡಿಯಂ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಧಿಕ ಉಪ್ಪು ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ದೇಹವನ್ನು ಚೈತನ್ಯವಾಗಿಡಲು ಮತ್ತು ಕೆಲಸ ಮಾಡುವ ಶಕ್ತಿಯನ್ನು ನೀಡಲು ಸ್ವಲ್ಪ ಪ್ರಮಾಣದ ಉಪ್ಪು ಅಗತ್ಯವಿದ್ದರೂ, ಅತಿಯಾದ ಸೇವನೆಯು ಅಧಿಕ ಬಿಪಿ ಸಮಸ್ಯೆಯನ್ನು ಹೆಚ್ಚಿಸುತ್ತದೆ. 

2. ಅಧಿಕ ಕೊಬ್ಬಿನ ಆಹಾರವನ್ನು ಸೇವಿಸುವುದು :
ರಕ್ತದೊತ್ತಡವನ್ನು ನಿಯಂತ್ರಿಸಲು, ಹೆಚ್ಚಿನ ಕೊಬ್ಬಿನ ಆಹಾರವನ್ನು ಸೇವಿಸಬಾರದು. ಪೂರ್ಣ-ಕೊಬ್ಬಿನ ಹಾಲು-ಕೆನೆ, ಬೆಣ್ಣೆ, ರೇಡ್ ಮೀಟ್ ಇತ್ಯಾದಿಗಳಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಸ್ಯಾಚುರೇಟೆಡ್ ಕೊಬ್ಬುಗಳು ರಕ್ತದೊತ್ತಡದ ಜೊತೆಗೆ ದೇಹದಲ್ಲಿನ ವಿವಿಧ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. 

ಇದನ್ನೂ ಓದಿ : ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವುದರಿಂದ ಈ ಸಮಸ್ಯೆಗಳಿಂದ ದೂರ ಉಳಿಯಬಹುದು!

3. ಮದ್ಯಪಾನ :
ರಕ್ತದೊತ್ತಡ ಸಮಸ್ಯೆ ಇರುವವರು ಮದ್ಯಪಾನದಿಂದ ದೂರವಿರಬೇಕು. 2017 ರ ಅಧ್ಯಯನವು ಕಡಿಮೆ ಆಲ್ಕೊಹಾಲ್ ಸೇವನೆ ಮತ್ತು ಕಡಿಮೆ ರಕ್ತದೊತ್ತಡದ ನಡುವಿನ ಸಂಬಂಧವನ್ನು ಕಂಡುಹಿಡಿದಿದೆ. ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರದ ಜನರು ಸಹ, ಮದ್ಯಪಾನದಿಂದ ದೂರವಿರುವುದರಿಂದ ಭವಿಷ್ಯದಲ್ಲಿ ಈ ಅಪಾಯವನ್ನು ಕಡಿಮೆ ಮಾಡಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News