ASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..?

ಪಕ್ಷಿಗಳು, ಅದರಲ್ಲೂ ಕಾಗೆಗಳ ಸಾವು ಗಂಡಾಂತರದ ಮುನ್ಸೂಚನೆ ಎನ್ನುತ್ತಾರೆ ಶಕುನಶಾಸ್ತ್ರ ಬಲ್ಲವರು.   

Written by - Zee Kannada News Desk | Last Updated : Jan 11, 2021, 12:36 PM IST
  • ಕಾಗೆಗಳ ಮಾರಣಹೋಮಕ್ಕೆ ಪಕ್ಷಿ ಜ್ವರ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.
  • ಇಷ್ಟೊಂದು ಪಕ್ಷಿಗಳು, ಅದರಲ್ಲೂ ಕಾಗೆಗಳ ಸಾವು ಗಂಡಾಂತರದ ಮುನ್ಸೂಚನೆ ಎನ್ನುತ್ತಾರೆ ಶಕುನಶಾಸ್ತ್ರ ಬಲ್ಲವರು.
  • ಅಸ್ತಂಗತ ಸ್ಥಿತಿಯಲ್ಲಿ ಶನಿಗ್ರಹ, ಇದು ಮಹಾಗಂಡಾಂತರಕ್ಕೆ ಕಾರಣವಾಗಬಹುದು.
ASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..? title=
ಅಸ್ತಂಗತ ಸ್ಥಿತಿಯಲ್ಲಿ ಶನಿಗ್ರಹ

ನವದೆಹಲಿ : ಕೆಲವೊಂದು ವಿಚಾರಗಳನ್ನು ಅವಲೋಕಿಸಿದರೆ, 2021ಅಪಶಕುನಗಳೊಂದಿಗೆ ಶುರುವಾಗಿದೆ.  ಭಾರತ ಸೇರಿದಂತೆ ಹಲವೊಂದು ದೇಶಗಳಲ್ಲಿ ಹಕ್ಕಿಗಳು ಅದರಲ್ಲೂ ವಿಶೇಷವಾಗಿ ಕಾಗೆ ತುಪ ತುಪ ಸತ್ತು ಬೀಳುತ್ತಿವೆ. ಕಾಗೆಗಳ ಮಾರಣಹೋಮಕ್ಕೆ ಪಕ್ಷಿ ಜ್ವರ (Bird Flu) ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಆದರೆ, ಸಾಮಾನ್ಯರು ಅದನ್ನು ಅಪಶಕುನ ಎನ್ನುತ್ತಾರೆ. ಮುಂದಾಗುವ ಗಂಡಾಂತರದ ಮುನ್ಸೂಚನೆ ಇದಾಗಿರಬಹುದು ಎಂಬ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಇಷ್ಟೊಂದು ಪಕ್ಷಿಗಳು, ಅದರಲ್ಲೂ ಕಾಗೆಗಳ ಸಾವು ಗಂಡಾಂತರದ ಮುನ್ಸೂಚನೆ ಎನ್ನುತ್ತಾರೆ ಶಕುನಶಾಸ್ತ್ರ ಬಲ್ಲವರು. 
 
ಇದು ಸಂಕ್ರಮಣ ಕಾಲ :
ಇದೊಂದು ರೀತಿಯ ಸಂಕ್ರಮಣ ಕಾಲ ಎನ್ನುತ್ತಾರೆ ಜ್ಯೋತಿಷಿಗಳು (Astroogy). ಈ ಹೊತ್ತಿನಲ್ಲಿ ಗ್ರಹಗಳ ದಿಕ್ಕು ಕೂಡಾ ಬದಲಾಗುತ್ತಿದೆ. ಅದಕ್ಕೆ ಸರಿಯಾಗಿ ರಾಶಿಫಲ ಕೂಡಾ ಬದಲಾಗುತ್ತದೆ. ಪ್ರಾಕೃತಿಕ ವಿಪತ್ತು, ಮಹಾಮಾರಿ ರೋಗ(Disease) , ಹಣಕಾಸು ನಷ್ಟ  (Financial Loss)ಇತ್ಯಾದಿ ದುರ್ದೆಸೆಗಳಿಗೆ ಇದು ಕಾರಣವಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. 

ಇದನ್ನೂ ಓದಿ :  Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ

ಶನಿದೇವರ ಚಲನೆ : 
ಗ್ರಹಚಾರಗಳಲ್ಲಿ ಶನಿ ಗ್ರಹದ (Saturn)  ಚಲನೆ ದೊಡ್ಡ ಬದಲಾವಣೆ ತರುತ್ತದೆ. ಶನಿಯ ಕಾರಣದಿಂದಾಗಿ ಶುಭ ಮತ್ತು ಅಶುಭ ಫಲಗಳು ಒಂದು ಕ್ಷಣದಲ್ಲಿ ಬದಲಾಗುತ್ತದೆ. ಶನಿ ದೇವರು (Shani Dev) ಕರ್ಮಫಲ ದಾತ. ಗ್ರಹಚಾರ ಅವಲೋಕನ ಮಾಡಿದರೆ, ಪೌಷ ಕೃಷ್ಣ ನವಮಿ (ಜ.7) ಸಂಜೆ 4 ಗಂಟೆಗೆ ಶನಿ ಗ್ರಹ ಅಸ್ತಂಗತ ಆಗಿರುತ್ತದೆ. 

ಸಾಂಕ್ರಾಮಿಕ ರೋಗಗಳು ಹೆಚ್ಚಲಿವೆ : 
ಮಾಘ ಕೃಷ್ಣ ಚತುರ್ದಶಿ (ಜ.10) ರ ತನಕ  ಶನಿ ಗ್ರಹ ಅಸ್ತಂಗತ ರೂಪದಲ್ಲಿಯೇ ಇರಲಿದೆ. ಕೆಲವೊಂದು ಪಂಚಾಂಗ ಪ್ರಕಾರ ಶನಿ ಗ್ರಹ ಜನವರಿ 4 ರಂದೇ ಅಸ್ತಂಗತವಾಗಿದೆ. ಇನ್ನೊಂದು ವಿಚಾರದಲ್ಲಿ ನೋಡಿದರೆ, ಶನಿ ಗ್ರಹವು ಹೆಚ್ಚುಕಡಿಮೆ 35 ದಿನ ಅಸ್ತಂಗತ ರೂಪದಲ್ಲಿಯೇ ಇರಲಿದೆ. ಈ ದಿನಮಾನಗಳಲ್ಲಿ ಸಾಂಕ್ರಮಿಕ ರೋಗಗಳು ಹೆಚ್ಚಲಿವೆ ಎನ್ನುತ್ತಾರೆ. 

ಇದನ್ನೂ ಓದಿ : ಅಕಾಲ ಮೃತ್ಯು ಭಯ ನಿವಾರಣೆಗೆ ಶನಿವಾರ ಈ ಕೆಲಸ ತಪ್ಪದೆ ಮಾಡಿ

ಸಾಮಾನ್ಯವಾಗಿ ಗ್ರಹಗಳು ಸೂರ್ಯನಿಗೆ (Sun) ತೀರಾ ನಿಕಟ ಬಂದಾಗ ಅವು ಅಸ್ತಂಗತವಾಗುತ್ತವೆ. ಸೂರ್ಯನಿಗೆ ಹತ್ತಿರ ಬಂದಾಗ ಸೂರ್ಯನ ಪ್ರಕಾಶದ ಎದುರು ಅವು ಕಾಣಿಸುವುದಿಲ್ಲ. ಹಾಗಾಗಿ, ಗ್ರಹಗಳು ಅಸ್ತಂಗತವಾಗಿವೆ ಎನ್ನುತ್ತೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News