Lucky Zodiac Signs: ಈ ರಾಶಿಗಳ ಜನರ ಮೇಲಿರುತ್ತೆ ಶ್ರೀಗಣೇಶನ ವಿಶೇಷ ಅನುಗ್ರಹ, ನಿಮ್ ರಾಶಿ ಯಾವ್ದು?

Lucky Zodiac Sign: ಶ್ರೀಗಣೇಶನನ್ನು ವಿಘ್ನಹರ್ತಾ ಎಂದು ಕರೆಯಲಾಗುತ್ತದೆ. ತನ್ನನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸುವವರ ವಿಘ್ನಗಳನ್ನು ಗಣೇಶ ದೂರ ಮಾಡುತ್ತಾನೆ ಎಂಬುದು ಜನರ ನಂಬಿಕೆ. ಗಣಪತಿ ಬಪ್ಪಾ ಕೃಪಾಶಿರ್ವಾದ ಪಡೆದುಕೊಂಡರೆ ಜೀವನವೇ ಧನ್ಯವಾಗುತ್ತದೆ ಎನ್ನಲಾಗುತ್ತದೆ.  

Written by - Nitin Tabib | Last Updated : Dec 17, 2022, 01:44 PM IST
  • ಮೇಷ ರಾಶಿಯವರಿಗೆ ಗಣೇಶನಿಗೆ ವಿಶೇಷ ಕೃಪೆ ಪ್ರಾಪ್ತಿ ಇದೆ.
  • ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದವರು ಗಣೇಶನನ್ನು ಪ್ರತಿನಿತ್ಯ ವಿಧಿವಿಧಾನಗಳೊಂದಿಗೆ ಪೂಜಿಸಬೇಕು.
  • ಹೀಗೆ ಮಾಡುವುದರಿಂದ ಅವರ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ.
Lucky Zodiac Signs: ಈ ರಾಶಿಗಳ ಜನರ ಮೇಲಿರುತ್ತೆ ಶ್ರೀಗಣೇಶನ ವಿಶೇಷ ಅನುಗ್ರಹ, ನಿಮ್ ರಾಶಿ ಯಾವ್ದು? title=
Lord Ganesh Zodiac Signs

Lord Ganesha Favorite Zodiac: ದೇವಾಧಿದೇವ ಮಹಾದೇವ್ ಹಾಗೂ  ತಾಯಿ ಪಾರ್ವತಿಯ ಪುತ್ರ ಶ್ರೀಗಣೇಶನಿಗೆ ಎಲ್ಲಾ ದೇವ-ದೇವತೆಗಳಲ್ಲಿ ಪ್ರಥಮ ಸ್ಥಾನ ಸ್ಥಾನವನ್ನು ನೀಡಲಾಗಿದೆ. ಹೀಗಾಗಿ ಯಾವುದೇ ಧಾರ್ಮಿಕ ಅಥವಾ ಮಂಗಳಕರ ಕೆಲಸಗಳಿದ್ದರೆ, ಮೊದಲು ಶ್ರೀ ಗಣೇಶನನ್ನು ಪೂಜಿಸಲಾಗುತ್ತದೆ. ಮೊದಲು ಆತನನ್ನು ಪೂಜಿಸುವುದರಿಂದ ಎಲ್ಲಾ ಕಾರ್ಯಗಳು ನಿರ್ವಿಘ್ನ ರೀತಿಯಲ್ಲಿ ನೆರವೇರುತ್ತದೆ ಎಂಬುದು ನಂಬಿಕೆ. ಅವನು ತನ್ನ ಭಕ್ತರ ಎಲ್ಲಾ ಸಂಕಷ್ಟಗಳನ್ನು ನಿವಾರಿಸುತ್ತಾನೆ, ಆದ್ದರಿಂದ ಆತನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ. ಕೆಲ ರಾಶಿಗಳ ಜಾತಕದವರ ಮೇಲೆ ಶ್ರೀಗಣೇಶ ವಿಶೇಷ ಅನುಗ್ರಹ ಹೊಂದಿರುತ್ತಾನೆ ಎನ್ನಲಾಗುತ್ತದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ
ಮೇಷ ರಾಶಿಯವರಿಗೆ ಗಣೇಶನಿಗೆ ವಿಶೇಷ ಕೃಪೆ ಪ್ರಾಪ್ತಿ ಇದೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದವರು ಗಣೇಶನನ್ನು ಪ್ರತಿನಿತ್ಯ ವಿಧಿವಿಧಾನಗಳೊಂದಿಗೆ ಪೂಜಿಸಬೇಕು. ಹೀಗೆ ಮಾಡುವುದರಿಂದ ಅವರ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಅವರು ಯಾವುದೇ ರೀತಿಯ ತೊಂದರೆಯನ್ನು ಎದುರಿಸಬೇಕಾಗಿಲ್ಲ.

ಮಿಥುನ ರಾಶಿ
ಮಿಥುನ ಜಾತಕದವರ ಮೇಲೂ ಕೂಡ ಶ್ರೀ ಗಣೇಶ ಯಾವಾಗಲೂ ಕೃಪೆ ತೋರುತ್ತಾನೆ. ಆತನ ಕೃಪೆಯಿಂದ ಈ ರಾಶಿಯ ಜನರ ಬುದ್ದಿವಂತಿಕೆ ಬಹಳ ಚುರುಕಾಗುತ್ತದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇವರು ಉತ್ತಮ ಸಾಧನೆ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಈ ರಾಶಿಯ ಜನರೂ ಕೂಡ ಗಣಪತಿ ಬಪ್ಪನನ್ನು ನಿಯಮಿತವಾಗಿ ಪೂಜಿಸಬೇಕು.

ಇದನ್ನೂ ಓದಿ-New Year 2023: ಹೊಸ ವರ್ಷದ ಮೊದಲ ದಿನವೇ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಯಾರಿಗೆ ಲಾಭ?

ಮಕರ ರಾಶಿ
ಮಕರ ರಾಶಿಯ ಜನರು ಪ್ರಾಮಾಣಿಕರು ಮತ್ತು ನಂಬಲರ್ಹರು ಮತ್ತು ತುಂಬಾ ಕಠಿಣ ಶ್ರಮಜೀವಿಗಳು ಆಗಿರುತ್ತಾರೆ. ಇವರನ್ನು ನೀವು ಕಣ್ಮುಚ್ಚಿ ನಂಬಬಹುದು, ಅದಕ್ಕಾಗಿಯೇ ಈ ರಾಶಿಚಕ್ರದ ಜನರು ಗಣೇಶನಿಗೆ ತುಂಬಾ ಪ್ರಿಯರಾಗಿದ್ದಾರೆ. ಮಕರ ರಾಶಿಯವರು ಪ್ರತಿದಿನ ಗಣಪತಿ ಬಪ್ಪನನ್ನು ಧ್ಯಾನಿಸಬೇಕು.

ಇದನ್ನೂ ಓದಿ-Kharmas 2022: ನಾಳೆಯಿಂದ ಖರ್ಮಾಸ್ ಆರಂಭ, 4 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News