10 ದಿನಗಳಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳಿ! ಹೇಗೆ ಗೊತ್ತಾ?

Weight Loss Tips: 10 ದಿನಗಳಲ್ಲಿ ತೂಕ ಕಳೆದುಕೊಳ್ಳುವುದು ಸ್ವಲ್ಪ ಸವಾಲಿನ ಕೆಲಸ. ಆದರೆ ನೀವು ಅದನ್ನು ಸರಿಯಾದ ರೀತಿಯಲ್ಲಿ ಪ್ರಯತ್ನಿಸಿದರೆ ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳಬಹುದು.

Written by - Chetana Devarmani | Last Updated : Apr 8, 2024, 10:01 AM IST
  • ತೂಕ ಕಳೆದುಕೊಳ್ಳುವುದು ಸ್ವಲ್ಪ ಸವಾಲಿನ ಕೆಲಸ
  • 10 ದಿನಗಳಲ್ಲಿ 5 ಕೆಜಿ ತೂಕ ಕಳೆದುಕೊಳ್ಳಬಹುದು.
  • ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಬೇಕು
10 ದಿನಗಳಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳಿ! ಹೇಗೆ ಗೊತ್ತಾ? title=

diet plan for weight loss: ಇತ್ತೀಚಿನ ವೈದ್ಯಕೀಯ ಅಧ್ಯಯನವು 2035 ರ ವೇಳೆಗೆ ಜನಸಂಖ್ಯೆಯ ಅರ್ಧದಷ್ಟು ಜನರು ಬೊಜ್ಜು ಹೊಂದಿರುತ್ತಾರೆ ಎಂದು ಸೂಚಿಸಿದೆ. ಪ್ರಸ್ತುತ, ವಿಶ್ವದ ಜನಸಂಖ್ಯೆಯ 35 ಪ್ರತಿಶತದಷ್ಟು ಜನರು ಅಧಿಕ ತೂಕ ಹೊಂದಿದ್ದಾರೆ. ಸ್ಥೂಲಕಾಯತೆಯು ದೇಹದಲ್ಲಿ ವಿವಿಧ ರೋಗಗಳನ್ನು ಉಂಟುಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ನಾವು ದಿನನಿತ್ಯ ಕೆಲವು ವಿಧಾನ ಅನುಸರಿಸಿದರೆ 10 ದಿನಗಳಲ್ಲಿ 5 ಕೆಜಿ ತೂಕ ಕಳೆದುಕೊಳ್ಳಬಹುದು. 10 ದಿನಗಳಲ್ಲಿ ತೂಕ ಕಳೆದುಕೊಳ್ಳುವುದು ಸ್ವಲ್ಪ ಸವಾಲಿನ ಕೆಲಸ. ಆದರೆ ನೀವು ಅದನ್ನು ಸರಿಯಾದ ರೀತಿಯಲ್ಲಿ ಪ್ರಯತ್ನಿಸಿದರೆ ಖಂಡಿತವಾಗಿಯೂ ತೂಕವನ್ನು ಕಳೆದುಕೊಳ್ಳಬಹುದು. 

ಆಹಾರ ಪದ್ಧತಿ:

ಸಕ್ಕರೆಯುಕ್ತ ಆಹಾರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಪಿಷ್ಟ ಆಹಾರಗಳನ್ನು ತಪ್ಪಿಸಿ. ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಆಹಾರದಲ್ಲಿ ಹೆಚ್ಚು ಸೇರಿಸಬೇಕು. ಹಾಗೆಯೇ ಹೆಚ್ಚು ನೀರು ಕುಡಿಯಬೇಕು.

ಇದನ್ನೂ ಓದಿ: Kidney Health: ಕಿಡ್ನಿ ವೈಫಲ್ಯದ ಮುನ್ಸೂಚನೆ ಪಾದಗಳಲ್ಲಿ ಕಾಣುವ ಈ ಬದಲಾವಣೆ !!

ಕಾರ್ಬೋಹೈಡ್ರೇಟ್‌ ಸಮೃದ್ಧ ಆಹಾರ : 

ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಇವುಗಳ ಬದಲು ಪ್ರೋಟೀನ್ ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ವ್ಯಾಯಾಮ ಮತ್ತು 7 ಗಂಟೆ ನಿದ್ರೆ ಮಾಡಬೇಕು. 

ಆರೋಗ್ಯಕರ ಆಹಾರ:

ತೂಕ ಇಳಿಸಿಕೊಳ್ಳಲು ಬಯಸಿದರೆ ಕಟ್ಟುನಿಟ್ಟಾದ ಆಹಾರವನ್ನು ಅನುಸರಿಸಬೇಕು. ಸಾಮಾನ್ಯವಾಗಿ ಸೇವಿಸುವ ಆಹಾರಗಳ ಬದಲಿಗೆ ಇತರ ಆರೋಗ್ಯಕರ ಆಹಾರಗಳನ್ನು ಸೇವಿಸಬಹುದು. ಉದಾಹರಣೆಗೆ, ಮನೆಯಲ್ಲಿ ಅಡುಗೆ ಎಣ್ಣೆಯ ಬದಲಿಗೆ, ನೀವು 10 ದಿನಗಳವರೆಗೆ ತುಪ್ಪವನ್ನು ಬಳಸಬಹುದು. ನಿಮಗೆ ಸಿಹಿ ತಿನ್ನಲು ಅನಿಸಿದರೆ, ನೀವು ಸ್ವಲ್ಪ ಹಣ್ಣು ತಿನ್ನಬಹುದು.

ಇದನ್ನೂ ಓದಿ: Diabetes Diet: ಮಧುಮೇಹಿಗಳು ಬೆಳಗಿನ ಉಪಹಾರದಲ್ಲಿ ಈ ಆಹಾರಗಳನ್ನು ಸೇವಿಸಿದರೆ ಹೆಚ್ಚಾಗುತ್ತೆ ಶುಗರ್ ಲೆವೆಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News