ನಿಮಗೂ ನಿಮ್ಮ Best Friend ಮೇಲೆ ಪ್ರೀತಿ ಹುಟ್ಟಿದೆಯೇ? ಈ Love Signಗಳನ್ನು ತಿಳಿದುಕೊಳ್ಳಿ

Love Signs - ಪ್ರತಿಯೊಂದು ಸಂಬಂಧಕ್ಕೂ (Relationship) ತನ್ನದೇ ಆದ ಘನತೆ ಮತ್ತು ನಿರೀಕ್ಷೆಗಳಿವೆ. ಬೆಸ್ಟ್ ಫ್ರೆಂಡ್‌ (Best Friend)ನೊಂದಿಗಿನ ನಿಮ್ಮ ಸಂಬಂಧವು ತುಂಬಾ ಆಳವಾಗಿರಬಹುದು, ಆದರೆ ಈ ಸಂಬಂಧದಲ್ಲಿ, ಪ್ರೀತಿಯಲ್ಲಿ (Love) ಬೀಳುವ ಹೆಚ್ಚಿನ ಸಾಧ್ಯತೆ ಇರುತ್ತದೆ ಎಂಬುದು ನಿಮಗೆ ನಿಮಗೆ ತಿಳಿದಿದೆಯೇ? ನಿಮಗೂ ನಿಮ್ಮ ಬೆಸ್ಟ್ ಫ್ರೆಂಡ್ (Friendship) ಮೇಲೆ ಪ್ರೀತಿ ಹುಟ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಈ ವರದಿಯನ್ನೊಮ್ಮೆ ಓದಿ.

Written by - Nitin Tabib | Last Updated : Feb 21, 2021, 04:57 PM IST
  • ಬೆಸ್ಟ್ ಫ್ರೆಂಡ್ ಪ್ರೀತಿಗೆ ಬೀಳುವುದು ಸಾಮಾನ್ಯ.
  • ಹೃದಯಕ್ಕೆ ತೀರಾ ಹತ್ತಿರವಾಗಿರುತ್ತದೆ ಬೆಸ್ಟ್ ಫ್ರೆಂಡ್ ಸಂಬಂಧ
  • ಪ್ರೀತಿ ವ್ಯಕ್ತಪಡಿಸಲು ತಡಮಾಡಬೇಡಿ.
ನಿಮಗೂ ನಿಮ್ಮ Best Friend ಮೇಲೆ ಪ್ರೀತಿ ಹುಟ್ಟಿದೆಯೇ? ಈ Love Signಗಳನ್ನು ತಿಳಿದುಕೊಳ್ಳಿ title=
Love Relationship (File Photo)

ನವದೆಹಲಿ: Relationship Signs - ಶಾರುಕ್ ಖಾನ್ (Sharukh Khan) ಹಾಗೂ  Kajol ಅಭಿನಯದ ಚಿತ್ರ 'ಕುಚ್ ಕುಚ್ ಹೋತಾ ಹೈ' ಚಿತ್ರದ ಮೂಲಕ ಪ್ರೀತಿಯ ಎರಡನೇ ಹೆಸರು ಸ್ನೇಹ (Friendship) ಎಂಬುದು ನಿಮ್ಮೆಲ್ಲರಿಗೂ ತಿಳಿದೇ ಇರಬೇಕು.  ತಮ್ಮ ಬೆಸ್ಟ್ ಫ್ರೆಂಡ್ ಮೇಲೂ ಕೂಡ ಪ್ರೀತಿ ಹುಟ್ಟಿಕೊಳ್ಳಬಹುದು ಎಂಬುದರ ಅರಿವು ಜನರಲ್ಲಿ ಈ ಚಿತ್ರ ಮೂಡಿಸುತ್ತದೆ. ಗೆಳೆತನದ ಸಂಬಂಧ ತುಂಬಾ ವಿಶೇಷವಾಗಿರುತ್ತದೆ ಹಾಗೂ ಪರಸ್ಪರ ಹತ್ತಿರ ಬರಲು ಇದರಲ್ಲಿ ಹೆಚ್ಚು ಸಮಯಾವಕಾಶ ಬೇಕಾಗುವುದಿಲ್ಲ.

ಗೆಳೆಯನ ಜೊತೆಗೂ ಪ್ರಿತಿಯಾಗಬಹುದು
ಹಲವು ಪ್ರೀತಿಯಿಂದ ತುಂಬಿದ ಸಂಬಂಧಗಳು (Relationship Signs) ಸ್ನೇಹದ ಮುದ್ರೆಯೋತ್ತಿದ ಕಾರಣ ಅರ್ಧಕ್ಕೆ ನಿಂತುಹೋಗುತ್ತವೆ. ಸ್ನೇಹ ಸಂಬಂಧದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಇದು ಜನರು ಹಿಂಜರಿಯುತ್ತಾರೆ. ಕಲವರಂತು ತಮ್ಮ ಭಾವನೆಗಳನ್ನು ತಿಳಿದುಕೊಳ್ಳುವುದೇ ಇಲ್ಲ. ಇನ್ನುಳಿದವರಲ್ಲಿ ಗೆಳೆತನದಲ್ಲಿ ಬಿರುಕು ಉಂಟಾಗಬಹುದೆಂಬ ಭಯ ಕಾಡುತ್ತದೆ. ಗೆಳೆತನದ ಸಂಬಂಧ ಪ್ರೀತಿಗೆ ತಿರುಗಲು ಹೆಚ್ಚಿನ ಸಮಯಾವಕಾಶ ಬೇಕಾಗುವುದಿಲ್ಲ.

ಪರಸ್ಪರ ಹತ್ತಿರ ಇರುವುದು, ಪ್ರತಿ ಸಿಕ್ರೆಟ್  ಹಂಚಿಕೊಳ್ಳುವುದು ಮತ್ತು ಇಷ್ಟ-ಕಷ್ಟಗಳನ್ನು ಹಂಚಿಕೊಂಡು ಬದುಕುವ ಮೂಲಕ, ಉತ್ತಮ ಸ್ನೇಹಿತರ ಸಂಬಂಧವು ತುಂಬಾ ಬಲಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರೀತಿಯ ಹೂವುಗ ಅಲ್ಲಿ ಅರಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನೀವೂ ಸಹ ನಿಮ್ಮ ಉತ್ತಮ ಸ್ನೇಹಿತನನ್ನು ಪ್ರೀತಿಸುತ್ತಿದ್ದರೆ, ಈ ಸಂಕೇತಗಳ ಮೂಲಕ ನಿಮ್ಮ ಹೃದಯದ ಸ್ಥಿತಿಯನ್ನು ನೀವು ಅರ್ಥಮಾಡಿಕೊಳ್ಳಬಹುದು.

ಖುಷಿಯಾಗಿರಿಸಲು ಪ್ರಯತ್ನಿಸುವುದು
ಪ್ರತಿಯೊಂದು ಸಂಬಂಧಕ್ಕೂ ಕೆಲವು ಮಿತಿಗಳಿವೆ. ಸ್ನೇಹಕ್ಕೂ ಕೂಡ ತನ್ನದೇ ಆದ ಮಿತಿ ಇದೆ. ನಿಮ್ಮ ಉತ್ತಮ ಸ್ನೇಹಿತನ ಸಂತೋಷಕ್ಕಾಗಿ ನೀವು ಏನನ್ನೂ ಮಾಡಲು ಸಿದ್ಧರಿದ್ದೀರಾ? ನಿಮ್ಮ ಸ್ನೇಹಿತನನ್ನು ನೀವು ನೋಯಿಸಬಾರದು ಅಥವಾ  ಯಾರು ನೋಯಿಸಬಾರದು ಎಂದು ನೀವು ಬಯಸುವಿರಾ? ಹೌದು ಎಂದಾದರೆ, ಒಂದು ಕ್ಷಣ ನೀವು ನಿಮ್ಮ ಕೈಯನ್ನು ನಿಮ್ಮ ಹೃದಯದ ಮೇಲೆ ಇರಿಸಿ ಮತ್ತು ಅದನ್ನು ಹಿಡಿಯಿರಿ. ಬಹುಶಃ ನೀವು ಅವರನ್ನು ಪ್ರೀತಿ (Love) ಸುತ್ತಿರಬಹುದು.

ಇತರೆ ಸ್ನೇಹಿತರಿಂದ ಉರಿಯುವುದು
ನಾವು ಯಾರನ್ನಾದರೂ ಪ್ರೀತಿಸಿದಾಗ, ಆ ವ್ಯಕ್ತಿ ಬೇರೆ ವ್ಯಕ್ತಿಯ ಜೊತೆಗೆ ಮಾತನಾಡುವುದನ್ನು ನಾವು ಇಷ್ಟಪಡುವುದಿಲ್ಲ. ಒಂದು ವೇಳೆ ನಿಮಗೂ ಕೂಡ ನಿಮ್ಮ ಬೆಸ್ಟ್ ಫ್ರೆಂಡ್ ಇತರರೊಂದಿಗೆ ಮಾತನಾಡುವುದು ಇಷ್ಟವಾಗುತ್ತಿಲ್ಲ ಎಂದೆನೆಸಿದರೆ, ಅದರ ಅರ್ಥವೇನು ಎಂಬುದನ್ನು ನೀವು ನಿಮ್ಮ ಹೃದಯಕ್ಕೆ ಕೇಳಿ. ಏನಾದರೊಂದು ಉತ್ತರ ಬಂದೆ ಬರುತ್ತದೆ.

ಜೊತೆಗಿಲ್ಲದಿದ್ದರೂ ಕೂಡ ಜೊತೆಗಿರುವ ಭಾವನೆ
ನಾವು ಯಾರೊಂದಿಗಾದರೂ ಹೆಚ್ಚು ಸಮಯ ಕಳೆಯುವಾಗ ಅಥವಾ ಅವನೊಂದಿಗೆ ಬಾಂಧವ್ಯವನ್ನು ಹೊಂದಿರುವಾಗ, ಅವನು ಸುತ್ತಮುತ್ತ ಇಲ್ಲದಿದ್ದಾಗಲೂ ನಾವು ಅವನ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಅವರ ಬಗ್ಗೆ ಯೋಚಿಸುವುದರಿಂದ ಹಾಗೂ ಮಾತನಾಡುವುದರಿಂದ ಹೃದಯಕ್ಕೆ ಆನಂದ ಸಿಗುತ್ತದೆ. ಒಂದು ವೇಳೆ ನಿಮ್ಮ ವಿಷಯದಲ್ಲಿಯೂ ಕೂಡ ಇದೆ ನಡೆಯುತ್ತಿದ್ದರೆ, ನಿಮ್ಮ ಪ್ರೀತಿಯ ದೋಣಿಯ ಪಯಣ ಕೂಡ ಆರಂಭಗೊಂಡಿದೆ ಎಂದು ತಿಳಿದುಕೊಳ್ಳಿ.

ಇದನ್ನೂ ಓದಿ- ಮದುವೆಗಾಗಿ ಟ್ವಿಂಕಲ್ ಅಕ್ಷಯ್ ಕುಮಾರ್‌ಗೆ ಹಾಕಿದ್ದ ಷರತ್ತೇನು? ಇಲ್ಲಿದೆ Love Story

ಪರ್ಫೆಕ್ಟ್ ಆಗಿರಲು ಯತ್ನಿಸುವುದು
ಯಾರ ಮುಂದ ನಾವು ಮನಸು ಬಿಚ್ಚಿಸಲೀಸಾಗಿ  ನಗುತ್ತೇವೆ ಹಾಗೂ ಮಾತನಾಡುತ್ತೇವೆಯೋ ಅವರೇ ನಮ್ಮ ಬೆಸ್ಟ್ ಫ್ರೆಂಡ್ ಆಗಿರುತ್ತಾರೆ. ಅವರ ಮುಂದೆ ಕಣ್ಣೀರಿಡುವುದರಲ್ಲಿಯೂ ತಪ್ಪಿಲ್ಲ. ಸಾಮಾನ್ಯವಾಗಿ ನಮ್ಮ ತೀರಾ ಹತ್ತಿರವಿರುವ ಸ್ನೇಹಿತ ನಮ್ಮ ಎಲ್ಲಾ ರೂಪಗಳನ್ನು ನೋಡಿರುತ್ತಾರೆ. ಆದರೂ ಕೂಡ ನಿಮ್ಮ ಹತ್ತಿರದ ಸ್ನೇಹಿತನ ಮುಂದೆ ನಿಮಗೆ ಬಣ್ಣಬಣ್ಣದ ಬಟ್ಟೆ ಉಡುಗೆ ಧರಿಸಲು ಇಷ್ಟವಾಗುತ್ತಿದ್ದರೆ, ನಿಮಗೆ ಹೆಚ್ಚೇನೂ ಮಾಡಬೇಕಾಗಿಲ್ಲ. ನಿಮ್ಮ ಮನಸ್ಸಿನ ಸ್ಥಿತಿಯನ್ನು ನೀವೇ ಅರ್ಥಮಾಡಿಕೊಳ್ಳಬೇಕು.

ಇದನ್ನೂ ಓದಿ-ಈ ಕಾರಣಕ್ಕಾಗಿ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಬಲಪಡಿಸುವುದು ಅಗತ್ಯ!

ಈ ಎಲ್ಲಾ ಸಂಕೇತಗಳು ನಿಮ್ಮಲ್ಲಿ ನಿಮಗೆ ಕಾಣಿಸುತ್ತಿದ್ದರೆ ನಿಮ್ಮ ಬೆಸ್ಟ್ ಫ್ರೆಂಡ್ ಮುಂದೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು (Love Prapose) ತಡಮಾಡಬೇಡಿ. ಒಂದು ವೇಳೆ ನೀವು ಮಾಡಲು ಹೊರಟಿರುವ ಪ್ರಪೋಸ್ ನಿಂದ ನಿಮ್ಮ ಗೆಳೆತನದ ಸಂಬಂಧ ಪ್ರಭಾವಿತಗೊಳ್ಳಬಹುದು ಎಂಬ ಭಯ ನಿಮಗೆ ಕಾಡುತ್ತಿದ್ದರೆ, ಅದನ್ನು ಬಚ್ಚಿಟ್ಟು ಕೂಡ ನಿಮಗೆ ಯಾವುದೇ ಲಾಭವಾಗುವುದಿಲ್ಲ.

ಇದನ್ನೂ ಓದಿ-ಈ ಸಂಗತಿಗಳನ್ನು ಗಮನದಲ್ಲಿಟ್ಟು ಬಾಳ ಸಂಗಾತಿಯ ಆಯ್ಕೆ ಮಾಡಿ ಭವಿಷ್ಯದ ತೊಂದರೆಗಳಿಂದ ಪಾರಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News