ಜನವರಿ ತಿಂಗಳ ಅದೃಷ್ಟದ ರಾಶಿಗಳಿವು .! ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಆಗುವುದು ಧನವೃಷ್ಟಿ

ಜನವರಿಯ ಮಾಸಿಕ ಜಾತಕದ ಪ್ರಕಾರ, ಕೆಲವು  ರಾಶಿಯವರು ವೈವಾಹಿಕ ಜೀವನದಲ್ಲಿ ಅಪಾರ ಸಂತೋಷವನ್ನು ಅನುಭವಿಸುತ್ತಾರೆ. ಒಂಟಿಯಾಗಿರುವವರು ಜೋಡಿಯಾಗುವ ಕಾಲ ಹತ್ತಿರವಾಗಬಹುದು.  

Written by - Ranjitha R K | Last Updated : Dec 20, 2022, 03:31 PM IST
  • ಜನವರಿ 2023 ಈ ಜನರಿಗೆ ತುಂಬಾ ಮಂಗಳಕರ
  • ಉದ್ಯೋಗದಲ್ಲಿ ಆಗುವುದು ಪ್ರಗತಿ
  • ವರ್ಷದ ಆರಂಭದಲ್ಲಿಯೇ ಧನವೃಷ್ಟಿ
ಜನವರಿ ತಿಂಗಳ ಅದೃಷ್ಟದ ರಾಶಿಗಳಿವು .! ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಆಗುವುದು ಧನವೃಷ್ಟಿ  title=
Monthly Horoscope

ಬೆಂಗಳೂರು : ಜನವರಿ 2023 ತಿಂಗಳು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಮಂಗಳಕರವಾಗಿರುತ್ತದೆ. 2023 ರ ಮೊದಲ ತಿಂಗಳಲ್ಲಿಯೇ ಕೆಲವು ರಾಶಿಯವರ ಜೀವನದಲ್ಲಿ ಪ್ರಗತಿ ಗೋಚರಿಸುತ್ತದೆ. ಜನವರಿಯ ಮಾಸಿಕ ಜಾತಕದ ಪ್ರಕಾರ, ಕೆಲವು  ರಾಶಿಯವರು ವೈವಾಹಿಕ ಜೀವನದಲ್ಲಿ ಅಪಾರ ಸಂತೋಷವನ್ನು ಅನುಭವಿಸುತ್ತಾರೆ. ಒಂಟಿಯಾಗಿರುವವರು ಜೋಡಿಯಾಗುವ ಕಾಲ ಹತ್ತಿರವಾಗಬಹುದು.

ಜನವರಿ 2023 ಈ ಜನರಿಗೆ ತುಂಬಾ ಮಂಗಳಕರ :  
ವೃಷಭ ರಾಶಿ :
ವೃಷಭ ರಾಶಿಯವರಿಗೆ ಜನವರಿ ಬಹಳ ಮಂಗಳಕರವಾಗಿರುತ್ತದೆ. ಈ ರಾಶಿಯವರ ವೈವಾಹಿಕ ಜೀವನ ಸಂತೋಷವಾಗಿರುತ್ತದೆ. ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಆದರೆ ಕಚೇರಿ ರಾಜಕೀಯದಿಂದ ದೂರವಿರಬೇಕು ಎನ್ನುವುದು ನೆನಪಿರಲಿ. 

ಇದನ್ನೂ ಓದಿ : Astrology 2023: ಹೊಸ ವರ್ಷದಲ್ಲಿ ಈ ಕರ್ಮ ಪ್ರಧಾನ ಗ್ರಹದ ರಾಶಿ ಪರಿವರ್ತನೆ, ಈ ಜನರಿಗೆ ಜಬ್ಬರ್ದಸ್ತ್ ಲಾಭ

ಕನ್ಯಾ ರಾಶಿ  : 
ಕನ್ಯಾ ರಾಶಿಯವರಿಗೆ ಜನವರಿಯಲ್ಲಿ ಇದ್ದಕ್ಕಿದ್ದಂತೆ ಧನ ಲಾಭವಾಗಲಿದೆ.  ಉದ್ಯಮಿಗಳ ಮನಸ್ಸಿನಲ್ಲಿ ಬರುವ ಹೊಸ ಸೃಜನಶೀಲ ಆಲೋಚನೆಗಳು ಲಾಭವನ್ನು ತಂದು ಕೊಡುತ್ತವೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು.  ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಪಡೆಯುವಿರಿ. 

ತುಲಾ ರಾಶಿ :
ಜನವರಿ ತಿಂಗಳು ತುಲಾ ರಾಶಿಯವರಿಗೆ ಅನೇಕ ವಿಷಯಗಳಲ್ಲಿ ಲಾಭವನ್ನು ತಂದು ಕೊಡಲಿದೆ.  ಮನೆಯಲ್ಲಿ ಸಂತಸದ ವಾತಾವರಣ  ನೆಲೆಯಾಗಲಿದೆ.  ಹೊಸ ಕೆಲಸದ ಆಫರ್ ಬರಬಹುದು. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. 

ಇದನ್ನೂ ಓದಿ : Vastu Tips For Camphor: ನಿಮ್ಮ ಹಲವು ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ನೀಡುತ್ತದೆ ಕರ್ಪೂರದ ಸಣ್ಣ ತುಂಡು

ಧನು ರಾಶಿ  :
ಜನವರಿ 2023 ಧನು ರಾಶಿಯವರಿಗೆ ಮಂಗಳಕರವಾಗಿರುತ್ತದೆ.  ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಉದ್ಯೋಗಿಗಳ ಮೇಲೆ ಕೆಲಸದ ಹೊರೆ ಇರುತ್ತದೆ. ಆದರೆ ಅವರು ಅದನ್ನು ಚೆನ್ನಾಗಿ ನಿಭಾಯಿಸುತ್ತಾರೆ. ನೀವು ಮಾಡುವ ಕೆಲಸದಿಂದ ನಿಮ್ಮ ಮೇಲಾಧಿಕಾರಿಗಳು ಸಂತೋಷಗೊಳ್ಳುತ್ತಾರೆ.  

ಮಕರ ರಾಶಿ  :
ಜನವರಿ ತಿಂಗಳು ಮಕರ ರಾಶಿಯವರ ಬಾಳಿನಲ್ಲಿ ಸಂತೋಷ ತರುತ್ತದೆ.  ಕುಟುಂಬದ ಸದಸ್ಯರಿಗೆ ಸಂಬಂಧಿಸಿದಂತೆ ಶುಭ ಸುದ್ದಿ ಸಿಗಲಿದೆ. ಹೆಂಡತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರದಲ್ಲಿ ಲಾಭವಾಗಲಿದೆ. 

 

(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಮಾಡಿ 

Trending News