Makar Sankranti 2022 : ಮಕರ ಸಂಕಾಂತಿಯ ದಿನ ಯಾವ ರಾಶಿಯ ಜನರು ಯಾವ ಉಪಾಯ ಮಾಡಿದರೆ ಯಶಸ್ಸು ಸಿಗಲಿದೆ?

Makar Sankranti 2022 : ಮಕರ ಸಂಕ್ರಾಂತಿ ಹಬ್ಬದ ವಿಶೇಷ ಸಂಬಂಧ ಸೂರ್ಯ ಮತ್ತು ಶನಿಯ ಜೊತೆಗೆ ಇರುವುದರಿಂದ ಇದು ಬಹಳ ವಿಶೇಷವಾದ ಹಬ್ಬವಾಗಿದೆ. ಈ ಹಬ್ಬವನ್ನು ದಾನಕ್ಕೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಎಳ್ಳು ದಾನಕ್ಕೆ ಹೆಚ್ಚಿನ ಮಹತ್ವವಿದೆ.

Written by - Nitin Tabib | Last Updated : Jan 11, 2022, 08:23 PM IST
  • ಹೊಸ ವರ್ಷ ಬಂತೆಂದರೆ ಜನರಲ್ಲಿ ಹಬ್ಬದ ಉತ್ಸಾಹ ಇಮ್ಮಡಿಯಾಗುತ್ತದೆ.
  • ಹೊಸ ವರ್ಷ 2022 ರ ಆಗಮನದ ನಂತರ, ಪ್ರತಿಯೊಬ್ಬರೂ ವರ್ಷದ ಮೊದಲ ಹಬ್ಬವನ್ನು ಆಚರಿಸಲು ಸಂತೋಷ ಮತ್ತು ಉತ್ಸಾಹದಲ್ಲಿರುತ್ತಾರೆ.
  • ಮುಂಬರುವ ಪವಿತ್ರ ಹಬ್ಬ ಮಕರ ಸಂಕ್ರಾಂತಿ ಜನವರಿ 14 ರಂದು ಆಚರಿಸಲಾಗುತ್ತಿದೆ.
Makar Sankranti 2022 : ಮಕರ ಸಂಕಾಂತಿಯ ದಿನ ಯಾವ ರಾಶಿಯ ಜನರು ಯಾವ ಉಪಾಯ ಮಾಡಿದರೆ ಯಶಸ್ಸು ಸಿಗಲಿದೆ? title=
Makara Sankranti 2022

Makar Sankranti 2022 : ಹೊಸ ವರ್ಷ ಬಂತೆಂದರೆ ಜನರಲ್ಲಿ ಹಬ್ಬದ ಉತ್ಸಾಹ ಇಮ್ಮಡಿಯಾಗುತ್ತದೆ. ಹೊಸ ವರ್ಷ 2022 ರ ಆಗಮನದ ನಂತರ, ಪ್ರತಿಯೊಬ್ಬರೂ ವರ್ಷದ ಮೊದಲ ಹಬ್ಬವನ್ನು ಆಚರಿಸಲು ಸಂತೋಷ ಮತ್ತು ಉತ್ಸಾಹದಲ್ಲಿರುತ್ತಾರೆ. ಮುಂಬರುವ ಪವಿತ್ರ ಹಬ್ಬ ಮಕರ ಸಂಕ್ರಾಂತಿ ಜನವರಿ 14 ರಂದು ಆಚರಿಸಲಾಗುತ್ತಿದೆ. ಭಾರತದ ಎಲ್ಲಾ ಜನರು ಈ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಮಕರ ಸಂಕ್ರಾಂತಿಯ ದಿನದಂದು ಗ್ರಹಗಳ ರಾಜನಾದ ಸೂರ್ಯನು (Lord Sun) ಧನು ರಾಶಿಯನ್ನು ತೊರೆದು ತನ್ನ ಪುತ್ರ ಶನಿಯ ರಾಶಿ ಪ್ರವೇಶಿಸುತ್ತಾನೆ. ಮಕರ ಸಂಕ್ರಾಂತಿಯ ಹಬ್ಬದ ಜೊತೆಗೆ ಸೂರ್ಯ ಮತ್ತು ಶನಿಯ (Shani Dev) ನೇರ ಸಂಬಂಧ ಇರುವುದರಿಂದ ಇದು ಬಹಳ ಮುಖ್ಯವಾದ ಪರ್ವವಾಗಿದೆ. ಶುಕ್ರ ಗ್ರಹದ ಉದಯವೂ ಇದೇ ಸಮಯದಲ್ಲಿ ಸಂಭವಿಸುತ್ತದೆ, ಆದ್ದರಿಂದ ಈ ಹಬ್ಬದ ನಂತರ ಎಲ್ಲಾ ಒಳ್ಳೆಯ ಮತ್ತು ಮಂಗಳಕರ ಕೆಲಸಗಳು ಪ್ರಾರಂಭವಾಗುತ್ತವೆ. ಈ ಹಬ್ಬವನ್ನು ದಾನಕ್ಕೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಎಳ್ಳು ದಾನಕ್ಕೆ (Daan) ವಿಶೇಷ ಮಹತ್ವವಿದೆ.

ಮಕರ ಸಂಕ್ರಾಂತಿಯ (Makar Sankranti 2022) ದಿನದಂದು ಯಾವ ರಾಶಿಯವರು (Astrology)  ಏನನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಂತೋಷ ಲಭಿಸುತ್ತದೆ. ಇದರ ಜೊತೆಗೆ ಆರೋಗ್ಯ, ಐಶ್ವರ್ಯ ಮತ್ತು ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಈ ದಿನ ದಾನಕ್ಕೆ ಹೆಚ್ಚಿನ ಮಹತ್ವವಿದೆ. ವಿವಿಧ ರಾಶಿಗಳಿಗೆ (Zodiac Signs) ಅನುಗುಣವಾಗಿ ಯಾವ ರಾಶಿಯ ಜನರು ಏನನ್ನು ದಾನ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ - ಮಕರ ಸಂಕ್ರಾಂತಿಯ ದಿನದಂದು ಬೆಲ್ಲ, ಕಡಲೆಕಾಳು ಮತ್ತು ಎಳ್ಳನ್ನು ಅಗತ್ಯವಿರುವವರಿಗೆ ದಾನ ಮಾಡಿ. ಇದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ವೃಷಭ ರಾಶಿ - ಸೂರ್ಯ ದೇವರ ಆಶೀರ್ವಾದ ಪಡೆಯಲು, ವೃಷಭ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಖಂಡಿತವಾಗಿಯೂ ದಾನ ಮಾಡಬೇಕು. ಈ ದಿನ ನೀವು ಬಿಳಿ ಬಟ್ಟೆ, ಮೊಸರು ಮತ್ತು ಎಳ್ಳನ್ನು ದಾನ ಮಾಡಿ. ಇದರಿಂದ ನಿಮ್ಮ ಆರೋಗ್ಯವು ಉತ್ತಮವಾಗಿರಲಿದೆ ಮತ್ತು ಯಾರಿಗಾದರು ಕಾನೂನಿನ ಸಮಸ್ಯೆ ಇದ್ದರೆ, ಅದರಿಂದ ಮುಕ್ತಿ ಸಿಗಲಿದೆ.

ಮಿಥುನ ರಾಶಿ - ಮಿಥುನ ರಾಶಿಯ ಜನರು ಮಕರ ಸಂಕ್ರಾಂತಿಯ ದಿನದಂದು ಬೆಂಡೆಕಾಯಿ, ಅಕ್ಕಿ ಮತ್ತು ಕಂಬಳಿಗಳನ್ನು ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ಅವರ ಜೀವನದಲ್ಲಿ ಬಿಕ್ಕಟ್ಟು ನಿವಾರಣೆಯಾಗುತ್ತದೆ ಮತ್ತು ಈ ದಾನವು ಉದ್ಯೋಗ ಮತ್ತು ವ್ಯಾಪಾರಕ್ಕೆ ಮಂಗಳಕರವಾಗಿರುತ್ತದೆ.
 
ಕರ್ಕ ರಾಶಿ - ಈ ದಿನ ಅಕ್ಕಿ, ಬೆಳ್ಳಿ ಮತ್ತು ಬಿಳಿ ಎಳ್ಳನ್ನು ದಾನ ಮಾಡುವುದರಿಂದ  ಕರ್ಕ ರಾಶಿಯವರಿಗೆ ಶುಭ ಫಲಿತಾಂಶಗಳು ದೊರೆಯಲಿವೆ. ಉದ್ಯೋಗದಲ್ಲಿ ಬರುವ ಅಡೆತಡೆಗಳಿಂದ ಮುಕ್ತಿ ಸಿಗಲಿದೆ. ಶುಭ ಮುಹೂರ್ತದಲ್ಲಿ ದಾನ ಮಾಡುವುದು ಉತ್ತಮ ಎಂಬುದು ನೆನಪಿನಲ್ಲಿಡಬೇಕಾದ ವಿಷಯ.
 
ಸಿಂಹ ರಾಶಿ - ಮಕರ ಸಂಕ್ರಾಂತಿಯ ದಿನದಂದು ಸಿಂಹ ರಾಶಿಯವರು ತಾಮ್ರ, ಗೋಧಿ ದಾನವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಬರುವ ಸಮಸ್ಯೆಗಳು ದೂರವಾಗುತ್ತವೆ ಮತ್ತು ಸಾಗಿ ಬಂದಿರುವ ವಿವಾದಗಳಿಂದ ಮುಕ್ತಿ ಸಿಗಲಿದೆ.
 
ಕನ್ಯಾ ರಾಶಿ - ಕನ್ಯಾ ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಕಿಚಡಿ, ಹೊದಿಕೆ ಮತ್ತು ಹಸಿರು ಬಟ್ಟೆಗಳನ್ನು ದಾನ ಮಾಡುವುದರಿಂದ ಅವರ ಜೀವನದಲ್ಲಿನ ಒತ್ತಡ ಕಡಿಮೆಯಾಗುತ್ತದೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಶುಭ ಮುಹೂರ್ತದಲ್ಲಿ ನಿರ್ಗತಿಕರಿಗೆ ಅಥವಾ ನಪುಂಸಕನಿಗೆ ದಾನ ನೀಡುವುದು ವಿಶೇಷ ಫಲಿತಾಂಶವನ್ನು ನೀಡಲಿದೆ.
 
ತುಲಾ ರಾಶಿ - ತುಲಾ ರಾಶಿಯವರು ಮಕರ ಸಂಕ್ರಾಂತಿಯ ದಿನದಂದು ಅಗತ್ಯವಿರುವವರಿಗೆ ಬಿಳಿ ವಜ್ರ, ಸಕ್ಕರೆ ಮತ್ತು ಹೊದಿಕೆಗಳನ್ನು ದಾನ ಮಾಡಿ. ಇದು ವೈವಾಹಿಕ ಜೀವನದಲ್ಲಿ ಮಾಧುರ್ಯವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಐಶ್ವರ್ಯವನ್ನು ತರುತ್ತದೆ.
 
ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರು ತಮ್ಮ ಜೀವನದಲ್ಲಿ ಸಂತೋಷವನ್ನು ಪಡೆಯಲು ಯಾವುದೇ ನಿರ್ಗತಿಕರಿಗೆ ಅಥವಾ ಬಡವರಿಗೆ ಮಕರ ಸಂಕ್ರಾಂತಿಯ ದಿನದಂದು ಹವಳ, ಕೆಂಪು ಬಟ್ಟೆ ಮತ್ತು ಎಳ್ಳನ್ನು ದಾನ ಮಾಡಬೇಕು. ಈ ದಾನವು ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
 
ಧನು ರಾಶಿ - ಮಕರ ಸಂಕ್ರಾಂತಿಯ ದಿನದಂದು, ಧನು ರಾಶಿಯವರು ಹಳದಿ ಬಟ್ಟೆ, ಅರಿಶಿನ ಬೇರು ಮತ್ತು ಬೆಲ್ಲವನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಸಂಪತ್ತು ಹಾಗೂ ಧಾನ್ಯಗಳ ಅನುಗ್ರಹ ಸಿಗಲಿದೆ.
 
ಮಕರ ರಾಶಿ - ಮಕರ ಸಂಕ್ರಾಂತಿಯ ದಿನದಂದು ಸೂರ್ಯನನ್ನು ಮೆಚ್ಚಿಸಲು ಮತ್ತು ಜೀವನದಲ್ಲಿ ಆತನ ಆಶೀರ್ವಾದ ಪಡೆಯಲು, ಮಕರ ರಾಶಿಯವರು ಕಪ್ಪು ಕಂಬಳಿ, ಎಣ್ಣೆ ಮತ್ತು ಎಳ್ಳನ್ನು ದಾನ ಮಾಡಬೇಕು. ಇದರಿಂದಾಗಿ ಜೀವನದಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.

ಇದನ್ನೂ ಓದಿ-Numerology: ಶನಿಯೊಂದಿಗೆ ನೇರ ಸಂಬಂಧವನ್ನು ಹೊಂದಿದ್ದಾರೆ ಈ ದಿನಾಂಕಗಳಲ್ಲಿ ಜನಿಸಿದ ಜನ
 
ಕುಂಭ ರಾಶಿ - ಕುಟುಂಬದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯ  ಪಡೆಯಲು ಕುಂಭ ರಾಶಿಯವರು ಸೂರ್ಯನ ಪ್ರಸನ್ನತೆ ಮತ್ತು ಸೂರ್ಯನ ಅನುಗ್ರಹವನ್ನು ಪಡೆಯುವುದು ಬಹಳ ಮುಖ್ಯ, ಮಕರ ಸಂಕ್ರಾಂತಿಯ ದಿನದಂದು ಮಾಡುವ ದಾನವು ವಿಶೇಷ ಫಲಿತಾಂಶವನ್ನು ನೀಡುತ್ತದೆ. ಕುಂಭ ರಾಶಿಯವರು ಈ ದಿನ ಕಪ್ಪು ಬಟ್ಟೆ, ಉದ್ದಿನ ಬೇಳೆ, ಖಿಚಡಿ ಮತ್ತು ಎಳ್ಳನ್ನು ದಾನ ಮಾಡಬೇಕು.

ಇದನ್ನೂ ಓದಿ-Dream Interpretation: ನಿಮ್ಮ ಕನಸಿನಲ್ಲಿ ಪೂರ್ವಜರು ಈ ರೂಪದಲ್ಲಿ ಕಾಣಿಸಿಕೊಂಡರೆ ಏನರ್ಥ..?
 
ಮೀನ ರಾಶಿ - ಮಕರ ಸಂಕ್ರಾಂತಿಯ ದಿನದಂದು ದಾನ ಮಾಡುವುದರಿಂದ ಯಶಸ್ಸು ಸಿಗುತ್ತದೆ, ವಿಶೇಷವಾಗಿ ಈ ದಿನ ಮೀನ ರಾಶಿಯವರು ರೇಷ್ಮೆ ಬಟ್ಟೆ, ಬೇಳೆ, ಅಕ್ಕಿ ಮತ್ತು ಎಳ್ಳನ್ನು ದಾನ ಮಾಡಬೇಕು. ಇದರಿಂದ ಸೂರ್ಯನ ಆಶೀರ್ವಾದ ಲಭಿಸುತ್ತದೆ  ಮತ್ತು  ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಜಯ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-Garuda Purana: ಮಹಿಳೆಯರು ಈ 2 ಕೆಲಸ ಮಾಡುವಾಗ ಪುರುಷರು ಅಪ್ಪಿ-ತಪ್ಪಿಯೂ ಕೂಡ ನೋಡಬಾರದು, ಇಲ್ದಿದ್ರೆ ಯಮಯಾತನೆ ತಪ್ಪಿದ್ದಲ್ಲ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News