ನವದೆಹಲಿ: ನಿಮ್ಮ ದೇಹವು ಹೇಗೆ ದಣಿಯುತ್ತದೋ ಅದೇ ರೀತಿ ನಿಮ್ಮ ಮೆದುಳು ಕೂಡ ದಣಿದಿರುತ್ತದೆ. ಈ ಆಯಾಸದಿಂದ ಕೆಲವೊಮ್ಮೆ ಮೆದುಳಿನಲ್ಲಿ ಭಾರವೂ ಶುರುವಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ನಿಮಗೆ ಆಯಾಸವಾದಾಗ ತಲೆಯಲ್ಲಿ ಭಾರ, ಮಾನಸಿಕ ಆಯಾಸ, ಸಿಡುಕು, ಸಿಟ್ಟು, ಉದ್ವೇಗ, ಯಾರೊಂದಿಗೂ ಮಾತನಾಡುವ ಆಸೆ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳು ನಿಮ್ಮ ಮೆದುಳಿನ ಆರೋಗ್ಯಕ್ಕೆ ಗಮನ ಕೊಡಬೇಕೆಂದು ಸೂಚಿಸುತ್ತವೆ. ಇದಲ್ಲದೆ ಭಾವನಾತ್ಮಕ ಆರೋಗ್ಯದ ಬಗ್ಗೆ ಗಮನಹರಿಸುವ ಅವಶ್ಯಕತೆಯಿದೆ. ಮೆದುಳಿನ ಭಾರಕ್ಕೆ ಇತರ ಕಾರಣಗಳು ಯಾವುವು ಮತ್ತು ಅದನ್ನು ಹೇಗೆ ನಿವಾರಿಸಬಹುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಈ ಕಾರಣಕ್ಕೆ ಮಾನಸಿಕ ಆಯಾಸ ಉಂಟಾಗುತ್ತದೆ
ಮಾನಸಿಕ ಆಯಾಸವು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಆಯಾಸದ ಕಾರಣಗಳು ಪ್ರತಿಯೊಬ್ಬ ವ್ಯಕ್ತಿಗೆ ವಿಭಿನ್ನವಾಗಿರಬಹುದು. ಉದಾಹರಣೆಗೆ ದೀರ್ಘಕಾಲದ ಅನಾರೋಗ್ಯ, ಔಷಧಿಗಳ ದೀರ್ಘಕಾಲದ ಬಳಕೆ, ಹೆಚ್ಚು ಒತ್ತಡ ತೆಗೆದುಕೊಳ್ಳುವುದು. ಈ ಎಲ್ಲಾ ಕಾರಣಗಳು ಮಾನಸಿಕ ಆಯಾಸದಿಂದ ಉಂಟಾಗಬಹುದು.
ಇದನ್ನೂ ಓದಿ: Curd Benefits : ಮೊಸರಿನ ಜೊತೆ ಸೇವಿಸಿ ಈ ಆಹಾರ ಪದಾರ್ಥಗಳನ್ನು, ರೋಗಗಳಿಂದ ದೂರವಿರಿ
ಈ ಆಯುರ್ವೇದ ಔಷಧಗಳಿಂದ ಮಾನಸಿಕ ಆಯಾಸಕ್ಕೆ ಪರಿಹಾರ
- ಮಾನಸಿಕ ಆಯಾಸವನ್ನು ತಪ್ಪಿಸಲು ನೀವು 3 ಆಯುರ್ವೇದ ಔಷಧಿಗಳನ್ನು ಸಹ ಬಳಸಬಹುದು. ಇದು ಖಂಡಿತವಾಗಿಯೂ ನಿಮಗೆ ಪರಿಹಾರವನ್ನು ನೀಡುತ್ತದೆ. ಇದು ಅಶ್ವಗಂಧ, ಶಂಖಪುಷ್ಪಿ ಮತ್ತು ಬ್ರಾಹ್ಮಿಗಳನ್ನು ಒಳಗೊಂಡಿದೆ.
- ಅಶ್ವಗಂಧವು ದೈವಿಕ ಔಷಧವಾಗಿದೆ, ಇದು ನಿಮ್ಮನ್ನು ಮಾನಸಿಕ ಒತ್ತಡದಿಂದ ರಕ್ಷಿಸುತ್ತದೆ. ಈ ಔಷಧಿಯನ್ನು ಅನಾರೋಗ್ಯದ ಸಮಯದಲ್ಲಿ ಮಾತ್ರ ಸೇವಿಸಬೇಕೆಂದೆನಿಲ್ಲ, ಸಕ್ರಿಯವಾಗಿರಲು ನೀವು ಇದನ್ನು ಬಳಸಬಹುದು.
- ಬ್ರಾಹ್ಮಿ ನಿಮ್ಮ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಲ್ಲದು. ಇದರೊಂದಿಗೆ ಇದು ಮಾನಸಿಕ ಆಯಾಸವನ್ನು ನಿವಾರಿಸಲು ಮತ್ತು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ಸಮಸ್ಯೆ ಇದ್ದರೆ ನೀವು ಬ್ರಾಹ್ಮಿಯನ್ನು ಸೇವಿಸಬೇಕು.
- ಅದೇ ರೀತಿ ಮೂರನೇ ಔಷಧವು ಮನಸ್ಸನ್ನು ಚುರುಕುಗೊಳಿಸಲಿದೆ. ಇದನ್ನು ಶಂಖಪುಷ್ಪಿ ಎಂದು ಕರೆಯಲಾಗುತ್ತದೆ. ಇದನ್ನು ಸೇವಿಸುವುದರಿಂದ ದೇಹ ಮತ್ತು ಮನಸ್ಸು ಎರಡೂ ತಾಜಾತನವನ್ನು ಪಡೆಯುತ್ತದೆ.
ಇದನ್ನೂ ಓದಿ: ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಹಣ್ಣನ್ನು ಈ ರೀತಿ ಬಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.