April 25 ರಿಂದ ಈ 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

Mercury Transit 2022: ಬುಧನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಬುಧನ ಈ ಗೋಚರದಿಂದ ಕೆಲ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳಲಿದ್ದು, ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.  

Written by - Nitin Tabib | Last Updated : Apr 19, 2022, 02:05 PM IST
  • ಏಪ್ರಿಲ್ 25ರಂದು ಬುಧನ ರಾಶಿ ಪರಿವರ್ತನೆ
  • ಶುಕ್ರಾಧಿಪ ವೃಷಭ ರಾಶಿಗೆ ಬುಧನ ಪ್ರವೇಶ
  • ಯಾವ ಯಾವ ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭ ತಿಳಿಯೋಣ ಬನ್ನಿ
April 25 ರಿಂದ ಈ 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ title=
Mercury Transit 2022

Budh Gochar 2022 April: ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹ ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ರಾಶಿಯಿಂದ ಇನ್ನೊಂದಕ್ಕೆ ಸಾಗುತ್ತದೆ. ಗ್ರಹಗಳ ಈ ರಾಶಿಯ ಪರಿವರ್ತನೆ ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜೋತಿಷ್ಯದಲ್ಲಿ ಬುಧವನ್ನು ಸಾಮಾನ್ಯವಾಗಿ ಬುದ್ಧಿವಂತಿಕೆ ಮತ್ತು ವ್ಯವಹಾರ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 25 ರಂದು ಬುಧ ಶುಕ್ರಾಧಿಪ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧನ ಈ ಸ್ಥಾನಪಲ್ಲಟ ಕೆಲ ರಾಶಿಗಳ ಜನರಿಗೆ ತುಂಬಾ ಪ್ರಯೋಜನಕಾರಿ ಸಾಬೀತಾಗಲಿದೆ. ಬುಧ ಗ್ರಹದ ಅನುಗ್ರಹದಿಂದ ಈ ರಾಶಿಯವರಿಗೆ ಏಪ್ರಿಲ್ 25 ರಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಮೇಷ - ಬುಧನ ಈ ವೃಷಭ ಗೋಚರ ಮೇಷ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರುವ ನಿರೀಕ್ಷೆ ಇದೆ. ಬುಧ ನಿಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿ ಪ್ರವೇಶಿಸುತ್ತಿದ್ದಾನೆ. ಈ ಮನೆಯನ್ನು ಆರ್ಥಿಕ ಮತ್ತು ಮಾತಿನ ಸ್ಥಳ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ನಿಮಗೆ ಹಠಾತ್ ಧನಾಗಮನವಾಗಲಿದೆ. ವ್ಯವಹಾರದಲ್ಲಿ ಹೊಸ ಒಪ್ಪಂದ ಅಂತಿಮವಾಗುವ ಸಾಧ್ಯತೆ ಇದೆ. ನಿಮ್ಮ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಬುಧ ಆಗಿರುವುದರಿಂದ ನಿಮ್ಮ ಶಕ್ತಿಯು ಹೆಚ್ಚಾಗಲಿದೆ. ಸಹೋದರ ಮತ್ತು ಸಹೋದರಿಯರ ಬೆಂಬಲ ಸಿಗಲಿದೆ.

ಕರ್ಕ - ಬುಧನ ಈ ಸ್ಥಾನಪಲ್ಲಟ ಕರ್ಕ ರಾಶಿಯ ಜನರಿಗೆ ಪ್ರಯೋಜನಕಾರಿ ಸಾಬೀತಾಗಲಿದೆ. ಬುಧ ನಿಮ್ಮ ಜಾತಕದ 11ನೇ ಮನೆಗೆ ಪ್ರವೇಶಿಸುತ್ತಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಇದನ್ನು ಆದಾಯ ಮತ್ತು ವೃತ್ತಿಯ ಮೌಲ್ಯದ ಸ್ಥಾನ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ವಾಹನ ಮತ್ತು ಕಟ್ಟಡದಿಂದ ನಿಮಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ತಾಯಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಸುಧಾರಣೆಯಾಗಲಿದೆ. ಶಕ್ತಿ ಹೆಚ್ಚಾಗಿ, ಶತ್ರುಗಳ ಮೇಲೆ ಜಯ ಸಾಧಿಸುವಿರಿ.

ಇದನ್ನೂ ಓದಿ-Numerology:ಈ ರೀತಿಯ ಜನರ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ, ಇವರು ಸಿರಿವಂತರಾಗುವುದು ಖಚಿತ

ಸಿಂಹ - ಸಿಂಹ ರಾಶಿಯವರಿಗೆ ಬುಧನ ಈ ರಾಶಿ ಪರಿವರ್ತನೆಯಿಂದ ಲಾಭ ಸಿಗಲಿದೆ. ಬುಧನು ನಿಮ್ಮ ರಾಶಿಯ ಹತ್ತನೇ ಮನೆಗೆ ಪ್ರವೇಶಿಸುತ್ತಿದ್ದಾನೆ. ಸಾಮಾನ್ಯವಾಗಿ ಇದನ್ನು ವೃತ್ತಿ ಮತ್ತು ಉದ್ಯೋಗದ ಸ್ಥಾನ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ನಿಮಗೆ ಹೊಸ ಉದ್ಯೋಗದ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವಿಸ್ತರಣೆಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸದ ಶೈಲಿಯು ಕೂಡ ಸುಧಾರಣೆಯಾಗಲಿದೆ. ಕಚೇರಿಯಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಹಿರಿಯ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗಲಿದೆ. ದೀರ್ಘಕಾಲದಿಂದ ಬರಬೇಕಿರುವ ಹಣ ಬರಲಿದೆ.

ಇದನ್ನೂ ಓದಿ-Weekly Horoscope: ಈ ರಾಶಿಗಳ ಜನರಿಗೆ ಸಿಗಲಿದೆ ಗುಡ್ ನ್ಯೂಸ್, ಮುಂದಿನ ಒಂದು ವಾರ ನಿಮ್ಮ ಪಾಲಿಗೆ ಹೇಗಿರಲಿದೆ?

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News