Vaishakh Month 2022: ಧನವೃಷ್ಟಿಯ ಸಮಯ ಆರಂಬವಾಗಿದೆ, ವೈಶಾಖ ಮಾಸದಲ್ಲಿ ಬರುವ ವೃತ-ಹಬ್ಬಗಳ ಪಟ್ಟಿ ಇಲ್ಲಿದೆ

Vaishakh Month 2022 Begins: ಇಂದಿನಿಂದ ಅಂದರೆ ಮೇ 17ರಿಂದ ವೈಶಾಖ ಮಾಸ ಆರಂಭವಾಗಿದೆ. ಇದು ಮೇ 16ರವರೆಗೆ ಇರಲಿದೆ. ಈ ಅವಧಿಯಲ್ಲಿ ಎಲ್ಲಾ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಈ ತಿಂಗಳು ವಿಷ್ಣು, ಪರಶುರಾಮ ಮತ್ತು ದೇವಿಯ ಉಪಾಸನೆ ನಡೆಸಲಾಗುತ್ತದೆ.

Written by - Nitin Tabib | Last Updated : Apr 17, 2022, 05:00 PM IST
  • ಇಂದಿನಿಂದ ವೈಶಾಖ ಮಾಸ ಆರಂಭ
  • ಎಲ್ಲಾ ಶುಭಕಾರ್ಯಗಳು ನೆರವೇರಿಸಲಾಗುತ್ತದೆ
  • ಧನಾಗಮನಕ್ಕೆ ಈ ಮಾಸ ಹೆಸರುವಾಸಿಯಾಗಿದೆ
Vaishakh Month 2022: ಧನವೃಷ್ಟಿಯ ಸಮಯ ಆರಂಬವಾಗಿದೆ, ವೈಶಾಖ ಮಾಸದಲ್ಲಿ ಬರುವ ವೃತ-ಹಬ್ಬಗಳ ಪಟ್ಟಿ ಇಲ್ಲಿದೆ title=
Vaishakh Month Begins

Vaishakh Month 2022: ಇಂದು ಅಂದರೆ ಏಪ್ರಿಲ್ 17 ರಿಂದ ವೈಶಾಖ ಮಾಸ ಆರಂಭವಾಗಿದೆ. ವೈಶಾಖದಲ್ಲಿ ಸಿರಿಸಂಪತ್ತು ಮತ್ತು ಪುಣ್ಯ ಪ್ರಾಪ್ತಿಗೆ ಹಲವು ಅವಕಾಶಗಳಿವೆ. ಈ ಮಾಸದಲ್ಲಿ ವಿಷ್ಣು, ಪರಶುರಾಮ ಮತ್ತು ದೇವಿಯನ್ನು ಉಪಾಸನೆಗಳನ್ನು ನಡೆಸಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ, ಬಾಂಕೆ ಬಿಹಾರಿ (ಕೃಷ್ಣ) ಚರಣ್ ದರ್ಶನವನ್ನು ಈ ತಿಂಗಳಲ್ಲಿ ಮಾಡಲಾಗುತ್ತದೆ.ಈ ಮಾಸದಲ್ಲಿ ಗಂಗಾ ಅಥವಾ ಸರೋವರ ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಅವಧಿಯಲ್ಲಿ ಎಲ್ಲಾ ಶುಭ ಕಾರ್ಯಗಳು ಆರಂಭಗೊಳ್ಳುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಹಾಗಾದರೆ ಬನ್ನಿ ವೈಶಾಖ ಮಾಸದಲ್ಲಿ ಬರುವ ಹಬ್ಬಗಳು ಮತ್ತು ವ್ರತಗಳ ಕುರಿತು ತಿಳಿದುಕೊಳ್ಳೋಣ.

ವೈಶಾಖ ಮಾಸವು ಮೇ 16 ರವರೆಗೆ ಇರಲಿದೆ 
ವೈಶಾಖ ಮಾಸವು ಸಾಮಾನ್ಯವಾಗಿ ಏಪ್ರಿಲ್ ನಿಂದ ಮೇ ವರೆಗೆ ಇರುತ್ತದೆ. ವಿಶಾಖ ನಕ್ಷತ್ರಕ್ಕೆ ಸಂಬಂಧಿಸಿರುವುದರಿಂದ ಇದನ್ನು ವೈಶಾಖ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಧನಾಗಮನದ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬಾರಿ ವೈಶಾಖ ಮಾಸವು ಏಪ್ರಿಲ್ 17 ರಿಂದ ಮೇ 16 ರವರೆಗೆ ಇರಲಿದೆ.

ವೈಶಾಖ ಮಾಸದಲ್ಲಿ ಬೀಳುವ ವ್ರತ-ಹಬ್ಬಗಳು (ಏಪ್ರಿಲ್ ತಿಂಗಳು)
- ಏಪ್ರಿಲ್ 17, ಭಾನುವಾರ, ವೈಶಾಖ ಮಾಸದ ಆರಂಭ, ಈಸ್ಟರ್
- ಏಪ್ರಿಲ್ 19, ಮಂಗಳವಾರ, ಸಂಕಷ್ಟ ಚತುರ್ಥಿ ಉಪವಾಸ
- 23 ಏಪ್ರಿಲ್, ಶನಿವಾರ, ಕಾಲಾಷ್ಟಮಿ ಉಪವಾಸ
- 26 ಏಪ್ರಿಲ್, ಮಂಗಳವಾರ, ವರುತಿನಿ ಏಕಾದಶಿ ಉಪವಾಸ
- ಏಪ್ರಿಲ್ 28, ಗುರುವಾರ, ಗುರು ಪ್ರದೋಷ ವ್ರತ
- 29 ಏಪ್ರಿಲ್, ಶುಕ್ರವಾರ, ವೈಶಾಖ ಮಾಸಿಕ ಶಿವರಾತ್ರಿ
- ಏಪ್ರಿಲ್ 30, ಶನಿವಾರ, ವೈಶಾಖ ಅಮವಾಸ್ಯೆ, ಶನಿ ಜಯಂತಿ (ದಕ್ಷಿಣ ಭಾರತ).

ಇದನ್ನೂ ಓದಿ-Weekly Horoscope: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಹಾನಿ ಸಾಧ್ಯತೆ, 7 ದಿನಗಳವರೆಗೆ ಎಚ್ಚರದಿಂದಿರಿ

ಈ ವ್ರತ-ಹಬ್ಬಗಳು ಮೇ ತಿಂಗಳಲ್ಲಿ ನಡೆಯಲಿದೆ
- ಮೇ 01, ಭಾನುವಾರ, ಸೂರ್ಯಗ್ರಹಣ
- ಮೇ 03, ಮಂಗಳವಾರ, ಅಕ್ಷಯ ತೃತೀಯ, ಪರಶುರಾಮ ಜಯಂತಿ
- ಮೇ 08, ಭಾನುವಾರ, ಗಂಗಾ ಸಪ್ತಮಿ
- ಮೇ 10, ಮಂಗಳವಾರ, ಸೀತಾ ನವಮಿ
- ಮೇ 12, ಗುರುವಾರ, ಮೋಹಿನಿ ಏಕಾದಶಿ
- ಮೇ 13, ಶುಕ್ರವಾರ, ಪ್ರದೋಷ ವ್ರತ
- ಮೇ 14, ಶನಿವಾರ, ನರಸಿಂಹ ಜಯಂತಿ
- ಮೇ 15, ಭಾನುವಾರ, ವೈಶಾಖ ಪೂರ್ಣಿಮಾ, ವೃಷಭ ಸಂಕ್ರಾಂತಿ

ಇದನ್ನೂ ಓದಿ-Vastu Tips: ಮಲಗುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ, ಒಂದರ ಮೇಲೊಂದರಂತೆ ಯಶಸ್ಸು ನಿಮ್ಮದಾಗಲಿದೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News