Zodiac Sign: ನಿತ್ಯ ಗ್ರಹಗಳ ಸ್ಥಿತಿ ಬದಲಾವಣೆಯಾಗುವ ಕಾರಣ ವ್ಯಕ್ತಿಗಳ ಜೀವನದ ಮೇಲೂ ಕೂಡ ಅವುಗಳ ಪ್ರಭಾವ ಗೋಚರಿಸುತ್ತದೆ. ಇದೇ ಕಾರಣದಿಂದ ಪ್ರತಿನಿತ್ಯದ ರಾಶಿ ಫಲ ಕೂಡ ವಿಭಿನ್ನವಾಗಿರುತ್ತದೆ. ನಾಳೆಯ ನನ್ನ ದಿನ ಉತ್ತಮವಾಗಿರಬೇಕು, ತಾಯಿ ಲಕ್ಷ್ಮಿಯ ಕೃಪೆ ಸದಾ ನನ್ನ ಮೇಲಿರಬೇಕು ಎಂದು ಪ್ರತಿಯೊಬ್ಬ ಬಯಸುತ್ತಾನೆ. ಹೀಗಿರುವಾಗ ಗ್ರಹ ಮತ್ತು ನಕ್ಷತ್ರಗಳ ಸ್ಥಿತಿಯೇ ಪ್ರತಿಯೋರ್ವ ವ್ಯಕ್ತಿಯ ದಿನವನ್ನು ಉತ್ತಮ ಅಥವಾ ವಿಶೇಷವನ್ನಾಗಿಸುತ್ತವೆ. ನಾಳೆ ಅಂದರೆ ಜೂನ್ 22ರ ದಿನ ಕೆಲ ರಾಶಿಗಳ ಜಾತಕದವರ ಪಾಲಿಗೆ ತುಂಬಾ ಮಹತ್ವಪೂರ್ಣ ಸಾಬೀತಾಗಲಿದೆ. ನಾಳಿನ ದಿನ ಅವರ ಮೇಲೆ ದೇವಿ ಲಕ್ಷ್ಮಿಯ ಅಪಾರ ಕೃಪೆ ಇರಲಿದೆ. ತಿಳಿದುಕೊಳ್ಳೋಣ ಬನ್ನಿ
ಜೋತಿಷ್ಯ ಶಾಸ್ತ್ರದಲ್ಲಿ ಬುಧವಾರದ ದಿನ ಶ್ರೀಗಣೇಶನಿಗೆ ಸಮರ್ಪಿತವಾಗಿದೆ. ಈ ದಿನ ವಿಧಿ-ವಿಧಾನಗಳ ಮೂಲಕ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸುವುದರಿಂದ ಗಜಾನನ ಕೃಪೆ ಪ್ರಾಪ್ತಿಯಾಗುತ್ತದೆ ಹಾಗೂ ಭಕ್ತಾದಿಗಳ ಎಲ್ಲಾ ಸಂಕಷ್ಟ ದೂರಾಗುತ್ತವೆ. ಇದರ ಜೊತೆಗೆ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಗ್ರಹ ಹಾಗೂ ನಕ್ಷತ್ರಗಳ ಸ್ಥಿತಿ ಯಾವ ರಾಶಿಯ ಜನರ ಪಾಲಿಗೆ ಶುಭ ಸಾಬೀತಾಗಲಿದೆ ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ- ನಾಳಿನ ನಿಮ್ಮ ದಿನ ವಿಶೇಷವಾಗಿರಲಿದೆ. ತಂದೆಯ ಸಹಕಾರದಿಂದ ಧನಲಾಭ. ವೃತ್ತಿ ಜೀವನದಲ್ಲಿ ಹೊಸ ಅವಕಾಶ, ಕಲೆ ಹಾಗೂ ಸಂಗೀತದಲ್ಲಿ ಅಭಿರುಚಿ ಹೆಚ್ಚಾಗಲಿದೆ. ಸ್ನೇಹಿತರ ಬೆಂಬಲ ಸಿಗಲಿದೆ. ಆದರೆ, ಸ್ವಭಾವದಲ್ಲಿ ಕಿರಿಕಿರಿ ಅನುಭವಿಸುವಿರಿ. ಕಾರ್ಯಕ್ಷೇತ್ರದಲ್ಲಿ ಪರಿಶ್ರಮ ಇರಲಿದೆ. ಆದರೆ, ಅವುಗಳ ಪರಿಣಾಮ ಸಂತೋಷ ಮತ್ತು ನೆಮ್ಮದಿ ತರಲಿದೆ.
ತುಲಾ ರಾಶಿ- ನಾಳಿನ ಬುಧವಾರ ನಿಮ್ಮ ಪಾಲಿಗೆ ಮಹತ್ವದ್ದಾಗಿರಲಿದೆ. ದಾರ್ಮಿಕ ಸಂಗೀತದಲ್ಲಿ ಅಭಿರುಚಿ ಹೆಚ್ಚಾಗಲಿದೆ. ಜೀವನ ಸುಖಮಯವಾಗಿರಲಿದೆ. ವಾಹನ ಖರೀದಿಯ ಯೋಗವಿದೆ. ಧಾರ್ಮಿಕ ಯಾತ್ರೆ ಕೈಗೊಳ್ಳುವಿರಿ. ಕುಟುಂಬದ ಬೆಂಬಲ ಸಿಗಲಿದೆ. ಈ ಅವಧಿಯಲ್ಲಿ ಒತ್ತಡದಿಂದ ದೂರವಿರಿ. ನೌಕರಿಯಲ್ಲಿ ವರಿಷ್ಠರ ಬೆಂಬಲ ಸಿಗಲಿದೆ. ಅಭಿವೃದ್ಧಿಯ ಹೊಸ ದಾರಿಗಳು ತೆರೆದುಕೊಳ್ಳಲಿವೆ. ಸ್ನೇಹಿತರ ಬೆಂಬಲ ಸಿಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ.
ಕುಂಭ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರ ಆತ್ಮವಿಶ್ವಾಸ ನಾಳೆ ಹೆಚ್ಚಾಗಿರಲಿದೆ. ತಂದೆಯ ಆರೋಗ್ಯದಲ್ಲಿ ಚೇತರಿಕೆ ಇರಲಿದೆ. ಕುಟುಂಬದಲ್ಲಿ ಸುಖ-ಶಾಂತಿ ಇರಲಿದೆ. ನೌಕರಿಯ ಹೊಸ ಅವಕಾಶಗಳಿಂದ ಧನಲಾಭದ ಸಾಧ್ಯತೆ ಇದೆ. ವಿವಾದಗಳಿಂದ ದೂರವಿರಿ.
ಇದನ್ನೂ ಓದಿ-ಈ ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ..!
(ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.