Monthly Shivratri: ಮಾಸಿಕ ಶಿವರಾತ್ರಿಯ ಮಹತ್ವ ಮತ್ತು ಪೂಜಾ ವಿಧಾನ ತಿಳಿಯಿರಿ

ಭೋಲೆನಾಥನ ಆರಾಧನೆಯ ಹಬ್ಬವಾದ ಶಿವರಾತ್ರಿಯು ಪ್ರತಿ ತಿಂಗಳು ಬಂದರೂ, ಮಾರ್ಗಶಿರ ಮಾಸದಲ್ಲಿ ಶಿವರಾತ್ರಿಯ ಮಹತ್ವ ಸ್ವಲ್ಪ ಹೆಚ್ಚಾಗುತ್ತದೆ. ಈ ದಿನದಂದು ಪೂಜಿಸುವುದು ಮತ್ತು ಉಪವಾಸ ಮಾಡುವುದರಿಂದ ವ್ಯಕ್ತಿಯ ಪ್ರತಿಯೊಂದು ಆಸೆಯೂ ಈಡೇರುತ್ತದೆ ಎಂದು ನಂಬಲಾಗಿದೆ.

Written by - Puttaraj K Alur | Last Updated : Nov 20, 2022, 11:15 AM IST
  • ಮಾಸಿಕ ಶಿವರಾತ್ರಿಯ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಬೇಕು
  • ನೀರು, ಶುದ್ಧ ತುಪ್ಪ, ಹಾಲು, ಸಕ್ಕರೆ, ಜೇನುತುಪ್ಪ, ಮೊಸರಿನಿಂದ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿ
  • ಶಿವನ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ರೆ ನಿಮ್ಮ ಆಸೆಗಳು ಈಡೇರುತ್ತವೆ
Monthly Shivratri: ಮಾಸಿಕ ಶಿವರಾತ್ರಿಯ ಮಹತ್ವ ಮತ್ತು ಪೂಜಾ ವಿಧಾನ ತಿಳಿಯಿರಿ title=
ಮಾಸಿಕ ಶಿವರಾತ್ರಿಯ ಮಹತ್ವ

ನವದೆಹಲಿ: ಸನಾತನ ಧರ್ಮದಲ್ಲಿ ಶಿವರಾತ್ರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಾಸಿಕ ಶಿವರಾತ್ರಿಯನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ದಿನದಂದು ಪೂಜೆ ಮತ್ತು ಉಪವಾಸವನ್ನು ಮನಃಪೂರ್ವಕವಾಗಿ ಮಾಡಿದರೆ, ಮನುಷ್ಯನ ಪ್ರತಿಯೊಂದು ಕಷ್ಟದ ಕೆಲಸವೂ ಸುಲಭವಾಗುತ್ತದೆ ಎಂಬುದು ನಂಬಿಕೆ. ಹಿಂದೂ ಧರ್ಮದಲ್ಲಿ ಈ ತಿಂಗಳಿಗೆ ತನ್ನದೇ ಆದ ಮಹತ್ವವಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಾಸದಲ್ಲಿ ಬರುವ ಶಿವರಾತ್ರಿ ವಿಶೇಷವಾಗುತ್ತದೆ. ಈ ಬಾರಿ ಮಾಸಿಕ ಶಿವರಾತ್ರಿಯನ್ನು ಅಕ್ಟೋಬರ್ 22ರಂದು ಅಂದರೆ ಮಂಗಳವಾರ ಆಚರಿಸಲಾಗುತ್ತದೆ.

ಫಲಪ್ರದ ಶಿವರಾತ್ರಿ

ಮಾರ್ಗಶಿರ ಮಾಸದಲ್ಲಿ ಬರುವ ಈ ಶಿವರಾತ್ರಿಯನ್ನು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಈ ಶಿವರಾತ್ರಿಯಂದು ಭಕ್ತಿಯಿಂದ ಉಪವಾಸ ಮಾಡಿ ಭಗವಾನ್ ಭೋಲೇನಾಥನನ್ನು ಪೂಜಿಸುವ ಯಾವುದೇ ಭಕ್ತನಿಗೆ ದೇವರ ಕೃಪೆ ದೊರೆಯಲಿದೆ. ಅವರ ಪ್ರತಿಯೊಂದು ಆಸೆಯೂ ಈಡೇರಲು ದಾರಿ ಸುಗಮವಾಗಿದೆ.

ಇದನ್ನೂ ಓದಿ: Today Horoscope: ಇಂದು ಈ ರಾಶಿಯವರಿಗೆ ಪ್ರಾಣಿಗಳಿಂದ ಎದುರಾಗಬಹುದು ಸಮಸ್ಯೆ!

ದಿನಾಂಕ: ಮಾರ್ಗಶಿರದಲ್ಲಿ ಬೀಳುವ ಶಿವರಾತ್ರಿಯು ನವೆಂಬರ್ 22ರಂದು ಬೆಳಗ್ಗೆ 8:49 ಕ್ಕೆ ಪ್ರಾರಂಭವಾಗುತ್ತದೆ ಮತ್ತು ನವೆಂಬರ್ 23ರಂದು ಬೆಳಗ್ಗೆ 6:53 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉದಯತಿಥಿ ಪ್ರಕಾರ ಈ ಬಾರಿಯ ಶಿವರಾತ್ರಿಯನ್ನು ನವೆಂಬರ್ 22ರಂದು ಮಾತ್ರ ಆಚರಿಸಲಾಗುತ್ತದೆ.

ಪೂಜಾ ವಿಧಾನ: ಮಾಸಿಕ ಶಿವರಾತ್ರಿಯ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಬೇಕು. ಇದರ ನಂತರ ಶಿವ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಬೇಕು. ನೀರು, ಶುದ್ಧ ತುಪ್ಪ, ಹಾಲು, ಸಕ್ಕರೆ, ಜೇನುತುಪ್ಪ, ಮೊಸರುಗಳಿಂದ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಬೇಕು. ಇದರ ನಂತರ ಬಿಲ್ವ ಪತ್ರೆಯನ್ನು ಸಹ ಅರ್ಪಿಸಬೇಕು. ಬಳಿಕ ಶಿವನನ್ನು ಧೂಪ, ದೀಪ, ಹಣ್ಣು ಮತ್ತು ಹೂವುಗಳಿಂದ ಪೂಜಿಸಬೇಕು.

ಇದನ್ನೂ ಓದಿ: Guru Margi 2022: ನ.24ರಿಂದ ಈ 5 ರಾಶಿಯ ಜನರಿಗೆ ಅದೃಷ್ಟದ ಜೊತೆಗೆ ಅಪಾರ ಸಂಪತ್ತು ಸಿಗಲಿದೆ!

ಶಿವ ಚಾಲೀಸಾ ಪಠಣ: ಈ ಸಮಯದಲ್ಲಿ ಶಿವ ಪುರಾಣ, ಶಿವ ಸ್ತುತಿ, ಶಿವ ಅಷ್ಟಕ, ಶಿವ ಚಾಲೀಸಾ ಮತ್ತು ಶಿವನ ಶ್ಲೋಕಗಳನ್ನು ಪಠಿಸುವುದು ಅತ್ಯಂತ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಉಪವಾಸ ಮಾಡುವವರು ಈ ದಿನ ಆಹಾರ ಸೇವಿಸಬಾರದು. ಸಂಜೆ ಹಣ್ಣುಗಳನ್ನು ತಿನ್ನಿರಿ. ಮರುದಿನ ಭೋಲೆನಾಥನ ಪೂಜೆ ಮಾಡಿ ದಾನ ಮಾಡಿದ ನಂತರವೇ ಉಪವಾಸವನ್ನು ಕೊನೆಗೊಳಿಸಿರಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News