ಕ್ಯಾನ್ಸರ್, ಮಧುಮೇಹ, ತೂಕ ಹೆಚ್ಚಳ ಸಮಸ್ಯೆಗಳಿಗೆ ವರದಾನ ಈ 'ಕಪ್ಪು ಚಿನ್ನ'

Black Wheat Nutritious: ಗೋದಿ ರೊಟ್ಟಿಯಿಂದ ತಯಾರಿಸಲಾಗುವ ಚಪಾತಿ ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಕಪ್ಪು ಗೊದಿಯಿಂದ ತಯಾರಿಸಲಾಗುವ ಚಪಾತಿ ಅಥವಾ ರೊಟ್ಟಿಯನ್ನು ನೀವೆಂದಾದರೂ ಸೇವಿಸಿದ್ದೀರಾ? ಹೌದು, ರೈತರ ಕಪ್ಪು ಚಿನ್ನ ಎಂದೇ ಕರೆಯಲಾಗುವ ಈ ಕಪ್ಪುಗೋದಿ ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ.   

Written by - Nitin Tabib | Last Updated : Mar 16, 2023, 09:22 PM IST
  • ನೀವು ಗೋಧಿಯ ಹಲವು ಪ್ರಕಾರಗಳನ್ನು ನೋಡಿರಬಹುದು,
  • ಆದರೆ ಕಪ್ಪು ಗೋಧಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?
  • ಯಾವುದೇ ಸಾಮಾನ್ಯ ಗೋಧಿಗಿಂತ ಕಪ್ಪು ಗೋಧಿ ಹೆಚ್ಚು ಪ್ರಯೋಜನಕಾರಿಯಾಗಿದೆ.
ಕ್ಯಾನ್ಸರ್, ಮಧುಮೇಹ, ತೂಕ ಹೆಚ್ಚಳ ಸಮಸ್ಯೆಗಳಿಗೆ ವರದಾನ ಈ 'ಕಪ್ಪು ಚಿನ್ನ' title=
ಕಪ್ಪು ಚಿನ್ನದ ಆರೋಗ್ಯ ಲಾಭಗಳು

Black Wheat Seed: ಇಂದು ವಿಶ್ವದಲ್ಲಿ ಕೃಷಿ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನವು ಸಾಕಷ್ಟು ಪ್ರಗತಿ ಸಾಧಿಸುತ್ತಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ತರಕಾರಿಗಳು ಮಾರುಕಟ್ಟೆಗೆ ಬಂದಿವೆ. ನೇರಳೆ ಎಲೆಕೋಸು, ಕಪ್ಪು ಅಕ್ಕಿ ಮತ್ತು ಇತರ ಹಲವು ವಿಧದ ಹೈಬ್ರಿಡ್ ತರಕಾರಿಗಳು ದೇಹಕ್ಕೆ ಯಾವುದೇ ಸಾಮಾನ್ಯ ತರಕಾರಿಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎನ್ನಲಾಗುತ್ತಿದೆ. ನೀವು ಗೋಧಿಯ ಹಲವು ಪ್ರಕಾರಗಳನ್ನು ನೋಡಿರಬಹುದು, ಆದರೆ ಕಪ್ಪು ಗೋಧಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಯಾವುದೇ ಸಾಮಾನ್ಯ ಗೋಧಿಗಿಂತ ಕಪ್ಪು ಗೋಧಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಕಪ್ಪು ಗೋಧಿಯಲ್ಲಿರುವ ಆಂಥೋಸಯಾನಿನ್ ವರ್ಣದ್ರವ್ಯದ ಕಾರಣ, ಅದರ ಬಣ್ಣ ಕಪ್ಪಾಗಿರುತ್ತದೆ. ಸಾಮಾನ್ಯ ಗೋಧಿಯಲ್ಲಿ ಆಂಥೋಸಯಾನಿನ್ ಪ್ರಮಾಣ 5 ppm ಆಗಿದ್ದರೆ ಕಪ್ಪು ಗೋಧಿಯಲ್ಲಿ 100 ರಿಂದ 200 ppm ಇರುತ್ತದೆ. ಇದು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಸಾಮಾನ್ಯ ಗೋಧಿಯ ಹೋಲಿಕೆಯಲ್ಲಿ ಕಪ್ಪು ಗೋಧಿಯಲ್ಲಿ ಕಬ್ಬಿಣವು ಶೇಕಡಾ 60 ರಷ್ಟು ಹೆಚ್ಚು ಕಂಡುಬರುತ್ತದೆ.

ಕಪ್ಪು ಗೋಧಿ ಪ್ರಯೋಜನಗಳು
1. ಕಪ್ಪು ಗೋಧಿ ಹೃದಯ, ಕ್ಯಾನ್ಸರ್, ಮಧುಮೇಹ, ಬೊಜ್ಜು ಸೇರಿದಂತೆ ಅನೇಕ ಇತರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ,ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಯಾವುದೇ ಸಾಮಾನ್ಯ ಗೋಧಿಗೆ ಹೋಲಿಸಿದರೆ, ಸತುವಿನ ಪ್ರಮಾಣವು ಅದರಲ್ಲಿ ಹೆಚ್ಚು ಕಂಡುಬರುತ್ತದೆ. ಇದರ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಅಗಾಧವಾಗಿ ಹೆಚ್ಚುತ್ತದೆ.

2. ಇಂದಿನ ಪದೇ ಪದೇ ಬದಲಾಗುತ್ತಿರುವ ಹವಾಮಾನದಲ್ಲಿ ಹಳೆಯ ಕೀಲುಗಳ ನೋವು ವೇಗವಾಗಿ ಹೆಚ್ಚಾಗುತ್ತಿವೆ ಆರೋಗ್ಯ ತಜ್ಞರ ಪ್ರಕಾರ, ಇದರಲ್ಲಿರುವ ಔಷಧೀಯ ಗುಣಗಳು ಮೊಣಕಾಲು ಮತ್ತು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದರೊಂದಿಗೆ ಅನೀಮಿಯಾ ಅಥವಾ ರಕ್ತಹೀನತೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಮಾರುಕಟ್ಟೆಯಲ್ಲಿ ಈ ಗೋಧಿಗೆ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ-ಕೆಲವೇ ದಿನಗಳಲ್ಲಿ ಹೆಚ್ಚಾಗುತ್ತಿರುವ ತೂಕಕ್ಕೆ ಕಡಿವಾಣ ಹಾಕಬೇಕೇ? ಈ ಉಪಾಯ ಟ್ರೈ ಮಾಡಿ ನೋಡಿ!

3. ಈ ಗೋಧಿಯಿಂದಾಗುವ ಲಾಭದ ದೃಷ್ಟಿಯಿಂದ, ಇದನ್ನು 'ರೈತರ ಕಪ್ಪು ಚಿನ್ನ' ಎಂದು ಕರೆಯಲಾಗುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸಾಮಾನ್ಯ ಗೋಧಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು. ಕಪ್ಪು ಗೋಧಿಯನ್ನು ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬೆಳೆಯಲಾಗುತ್ತದೆ. ಇದರ ಬೇಸಾಯದ ವೆಚ್ಚ ಬಹಳ ಕಡಿಮೆ. ಈ ಗೋಧಿಯನ್ನು ಬೆಳೆಯುವ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸಬಹುದು.

ಇದನ್ನೂ ಓದಿ-Health Tips: ನೀವೂ ಕೂಡ ಒಮ್ಮೆ ತಯಾರಿಸಿದ ಟೀ ಪದೇ ಪದೇ ಬಿಸಿ ಮಾಡಿ ಕುಡಿಯುತ್ತೀರಾ? ಈಗಲೇ ಎಚ್ಚೆತ್ತುಕೊಳ್ಳಿ !

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News