ನವದೆಹಲಿ : ಜ್ಯೋತಿಷ್ಯದಲ್ಲಿ (Astrology)ಪ್ರತಿಯೊಬ್ಬ ವ್ಯಕ್ತಿಯ 3 ಗಣಗಳನ್ನೂ ಹೇಳಲಾಗಿದೆ. ಅವುಗಳೆಂದರೆ ದೇವಗಣ (Devagana), ಮಾನವ ಗಣ (Manavagana)ಮತ್ತು ರಾಕ್ಷಸ ಗಣ (Rakshasagana). ಸಾಮಾನ್ಯವಾಗಿ ರಾಕ್ಷಸ ಗಣ ಎಂದು ಕೇಳಿದ ತಕ್ಷಣ ಜನರ ಅಭಿಪ್ರಾಯವು ಸ್ವಲ್ಪ ಮಟ್ಟಿಗೆ ಬದಲಾಗುತ್ತದೆ. ರಾಕ್ಷಸ ಗಣ ಎಂದ ಕೂಡಲೇ ಕೆಟ್ಟ ಚಟಗಳನ್ನು ಹೊಂದಿರುವ ವ್ಯಕ್ತಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತದೆ. ಆದರೆ, ಅದು ಹಾಗಲ್ಲ. ಮೂರು ಗಣಗಳಲ್ಲಿ ದೇವಗಣವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ ಎಲ್ಲಾ ಮೂರು ಗಣಗಳು ತಮ್ಮದೇ ಆದ ಗುಣ ಲಕ್ಷಣಗಳನ್ನು ಹೊಂದಿವೆ (nature according to gana).
ದೇವಗಣ : ದೇವಗಣದ ಜನರು ಜ್ಯೋತಿಷ್ಯದಲ್ಲಿ (Astrology) ಅತ್ಯುತ್ತಮರು ಎಂದು ಪರಿಗಣಿಸಲಾಗಿದೆ. ಹೆಸರೇ ಸೂಚಿಸುವಂತೆ, ಇವರ ಕೆಲವು ಗುಣಗಳು ದೇವರುಗಳಂತೆಯೇ ಇರುತ್ತವೆ. ಈ ಜನರು ಉತ್ತಮ ನಡತೆ, ಪ್ರಾಮಾಣಿಕ, ಚಾರಿತ್ರ್ಯ, ಸುಸಂಸ್ಕೃತ, ಕರುಣೆ ಯುಳ್ಳವರು, ಬುದ್ಧಿವಂತ ಮತ್ತು ತುಂಬಾ ಧನಾತ್ಮಕವಾಗಿ ಯೋಚಿಸುವವರಾಗಿರುತ್ತಾರೆ (Positive Thinking). ಧರ್ಮದಲ್ಲಿ ನಡೆದುಕೊಳ್ಳುವುದರ ಜೊತೆಗೆ ಈ ಜನರು ದಾನ ಮತ್ತು ಇತರರಿಗೆ ಸಹಾಯ ಮಾಡುವ ಬಗ್ಗೆ ಆಸಕ್ತಿ ಹೊಂದಿರುತ್ತಾರೆ.
ಇದನ್ನೂ ಓದಿ : Sun Transit: ಆರು ದಿನಗಳ ನಂತರ ಸೂರ್ಯನಂತೆ ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ
ಮಾನವ ಗಣ: ಮಾನವ ಗಣದಲ್ಲಿ (Manavagana) ಜನಿಸಿದವರು ಶ್ರಮಜೀವಿಗಳು. ಅವರು ತಮ್ಮ ಶ್ರಮದಿಂದ ಶ್ರೀಮಂತರಾಗುತ್ತಾರೆ ಮತ್ತು ಗೌರವವನ್ನು ಪಡೆಯುತ್ತಾರೆ. ಈ ಜನರು ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾರೆ (Nature By Gana).
ರಾಕ್ಷಸ ಗಣ: ರಾಕ್ಷಸ ಗಣದ (Rakshasagana) ಜನರಲ್ಲಿ ಖಂಡಿತವಾಗಿಯೂ ಒಂದು ಕೆಟ್ಟತನವಿರುತ್ತದೆ. ಅವರು ಬಹಳ ನಕಾರಾತ್ಮಕವಾಗಿ ಯೋಚಿಸುತ್ತಾರೆ (Negetive thinking). ಆದರೆ ಅವರು ಪ್ರಯತ್ನಿಸಿದರೆ, ತಮ್ಮ ಯೋಚನೆಯನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳುತ್ತಾರೆ. ನಕಾರಾತ್ಮಕ ವಿಷಯಗಳನ್ನು, ಘಟನೆಗಳನ್ನು ತ್ವರಿತವಾಗಿ ಗ್ರಹಿಸುವ ವಿಶೇಷತೆಯನ್ನು ಇವರು ಹೊಂದಿದ್ದಾರೆ. ಈ ಗಣದವರು ಭಯಪಡುವುದಿಲ್ಲ, ಧೈರ್ಯಶಾಲಿಗಳಾಗಿರುತ್ತಾರೆ. ಯಾವುದೇ ಪರಿಸ್ಥಿತಿ ಇರಲಿ ಅದನ್ನು ದೃಢವಾಗಿ ಎದುರಿಸುತ್ತಾರೆ. ಆದರೆ ಅವರು ಬಹಳ ಕಟುವಾಗಿ ಮಾತನಾಡುತ್ತಾರೆ.
ಇದನ್ನೂ ಓದಿ : ಈ ಐದು ವಿಚಾರಗಳ ಬಗ್ಗೆ ಗಮನ ಹರಿಸಿದರೆ ಜೀವನದಲ್ಲಿ ಹಣದ ಕೊರತೆ ಎದುರಾಗುವುದೇ ಇಲ್ಲ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, (Astrology) ದೇವಗಣ ಮತ್ತು ರಾಕ್ಷಸ ಗಣದ ಜನರು ಮದುವೆಯಾಗಬಾರದು ಎಂದು ಹೇಳಲಾಗಿದೆ. ಏಕೆಂದರೆ ಅವರ ಸ್ವಭಾವದಲ್ಲಿನ ಅಗಾಧ ವ್ಯತ್ಯಾಸದಿಂದಾಗಿ ಅವರ ವೈವಾಹಿಕ ಜೀವನ ಹೆಚ್ಚು ದಿನಗಳವರೆಗೆ ಮುಂದುವರೆಯುವುದಿಲ್ಲ ಎನ್ನಲಾಗಿದೆ (gana impact on marriage). ದೇವಗಣದ ಜನರಿಗೆ ಮನುಷ್ಯ ಗಣದ ಜೀವನ ಸಂಗಾತಿಯೇ ಅತ್ಯುತ್ತಮವಾಗಿರುತ್ತಾರೆ. ಅದೇ ಸಮಯದಲ್ಲಿ, ಮನುಷ್ಯ ಗಣದ ಜನರು ದೇವಗಣ ಮತ್ತು ರಾಕ್ಷಸ ಗಣದವರನ್ನು ಮದುವೆಯಾಗಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.